`ಯಾವ ಮೋಹನ ಮುರಲಿ ಕರೆಯಿತು ದೂರ ತೀರಕೆ ನಿನ್ನನು~ ಎನ್ನುವುದು ಕವಿ ಗೋಪಾಲಕೃಷ್ಣ ಅಡಿಗರ ಜನಪ್ರಿಯ ಗೀತೆ. ಈ ಹಾಡು ನಾಗತಿಹಳ್ಳಿ ಚಂದ್ರಶೇಖರರ `ಅಮೆರಿಕಾ ಅಮೆರಿಕಾ~ ಚಿತ್ರದಲ್ಲಿ, ಆ ಚಿತ್ರದ ಆತ್ಮದ ರೀತಿಯಲ್ಲಿ ಬಳಕೆಯಾಗಿತ್ತು. ಅಂತಹದ್ದೇ ಮೋಹನ ಮುರಲಿಯ ಹಂಬಲ ಹಾಗೂ ದೂರ ತೀರದ ಬೆರಗು ಯುವ ನಿರ್ದೇಶಕ ಗೋಪಿ ಪೀಣ್ಯ ಅವರದ್ದು.

ಸಾಂಸ್ಕೃತಿಕ ಆಸಕ್ತಿಗಳನ್ನುಳ್ಳ ಕ್ರಿಯಾಶೀಲ ತರುಣ ಗೋಪಿ ಪೀಣ್ಯ ಸಿನಿಮಾಕ್ಕೆ ಹೊಸಬರೇನಲ್ಲ. `ಅಮೆರಿಕಾ ಅಮೆರಿಕಾ~ ಸೇರಿದಂತೆ ನಾಗತಿಹಳ್ಳಿ ಚಂದ್ರಶೇಖರರ ಬಹುತೇಕ ಚಿತ್ರಗಳಲ್ಲಿ ಸಹನಿರ್ದೇಶಕರಾಗಿ ದುಡಿದ ಅನುಭವ ಅವರದ್ದು. `ಆಫ್ ಶೋರ್~ ಎನ್ನುವ ಇಂಗ್ಲೀಷ್ ಚಿತ್ರದಲ್ಲೂ ಕೆಲಸ ಮಾಡಿದ್ದರು. ಹೊಟ್ಟೆಪಾಡಿಗೆ ಕಿರುತೆರೆ ಹುಲ್ಲುಗಾವಲಂತೆ ಕಾಣಿಸಿದಾಗ ಬೆಳ್ಳಿತೆರೆಯಿಂದ ಕಿರುತೆರೆಯತ್ತ ವಾಲಿದವರು ಈ ಗೋಪಿ. ಧಾರಾವಾಹಿಗಳನ್ನು ರೂಪಿಸುತ್ತಿದ್ದರೂ ಬೆಳ್ಳಿತೆರೆಯ ಅವರ ಕನಸುವಿಕೆ ಮಾತ್ರ ಕಡಿಮೆಯಾಗಿರಲಿಲ್ಲ. ಆ ಕನಸಿಗೆ ಬೆಳಕಿನಂತೆ ಒದಗಿಬಂದವರು ಸೌರವ್ ಬಾಬು. ಸೌರವ್ ಮತ್ತು ಗೋಪಿ ಅವರ ಆಸಕ್ತಿ-ಶ್ರಮದ ಫಲವೇ `ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ~.

ಸೌರವ್ ಅಮೆರಿಕನ್ನಡಿಗರು. ಅಮೆರಿಕದಲ್ಲಿನ ತಮ್ಮ ಗೆಳೆಯನೊಬ್ಬನ ಕಥೆಯನ್ನು ಸೌರವ್ ಕಥೆಯಾಗಿಸಿದ್ದಾರೆ. ಸತ್ಯಕಥೆಯನ್ನು ಆಧರಿಸಿ- ಕರ್ನಾಟಕದ ಗ್ರಾಮೀಣ ಪ್ರದೇಶದ ತರುಣನೊಬ್ಬ ಅಮೆರಿಕಕ್ಕೆ ಬಂದು ವಿವಿಧ ತವಕತಲ್ಲಣಗಳಿಗೆ ಈಡಾಗುವುದರ ಜೊತೆಗೆ, ಸುಖೀ ಕುಟುಂಬವೊಂದರಲ್ಲಿ ಉಂಟಾಗುವ ಕ್ಷೋಭೆಯ ಕಥೆಯನ್ನು ಸೌರವ್ ಹೆಣೆದಿದ್ದಾರೆ. ಸೌರವ್ ಅವರ ಪತ್ನಿ ರೂಪಾ ಚಿತ್ರದ ನಿರ್ಮಾಪಕಿ. ಇಷ್ಟು ಮಾತ್ರವಲ್ಲ, ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಸೌರವ್ ನಟಿಸಿದ್ದಾರೆ.

`ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ~ ನಿರ್ದೇಶಕ ಗೋಪಿ ಅವರಿಗೆ ಮಾತ್ರವಲ್ಲ, ಕೆಲವು ಯುವ ಪ್ರತಿಭೆಗಳಿಗೂ ಅಗ್ನಿಪರೀಕ್ಷೆಯೆನಿಸಿದೆ. ಬಾಲಿವುಡ್ನ `ಕಿಶೋರ್ ನಮಿತ್ ಕಪೂರ್ ಶಾಲೆ~ಯಲ್ಲಿ ಕಲಿತುಬಂದಿರುವ ಹೊಸ ಹುಡುಗ ಶ್ರೀರಾಜ್ ಚಿತ್ರದ ನಾಯಕರಲ್ಲೊಬ್ಬ. ನಾಯಕಿಯರಲ್ಲಿ ಒಬ್ಬರಾದ ರೀನಾ ಮೆಹತಾ ಅಮೆರಿಕದಲ್ಲಿರುವ ಗುಜರಾತಿ ಮೂಲದ ಅನಿವಾಸಿ ಭಾರತೀಯಳು. ಯಜ್ಞಾ ಶೆಟ್ಟಿ ಚಿತ್ರದ ಮತ್ತೊಬ್ಬ ನಾಯಕಿ. ಗೌರವ ಪಾತ್ರಗಳಲ್ಲಿ ಜಗ್ಗೇಶ್-ಕೋಮಲ್ ಸೋದರರು ನಟಿಸಿದ್ದಾರೆ.

ಪಿ.ಕೆ.ಹೆಚ್.ದಾಸ್ ಛಾಯಾಗ್ರಹಣ ಮತ್ತು ಗುರುಕಿರಣ್ರ ಸಂಗೀತ `ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ~ ಚಿತ್ರಕ್ಕಿದೆ. ಹೊಸ ಚಿತ್ರತಂಡ ತಮ್ಮ ಚಿತ್ರವನ್ನು ಪ್ರೇಕ್ಷಕರ ಮುಂದಿಡಲು ಎದುರಿಸಬೇಕಾದ ಎಲ್ಲ ಅಡೆತಡೆಗಳನ್ನು `ಗೋಪಿ ಬಳಗ~ ಎದುರಿಸಿದೆ. ಎಲ್ಲವನ್ನೂ ದಾಟಿ, ಇಂದು (ಸೆ.9) ಚಿತ್ರ ತೆರೆಕಾಣುತ್ತಿದೆ. ಪರೀಕ್ಷೆ ಬರೆದ ವಿದ್ಯಾರ್ಥಿಯಂತೆ ಗೋಪಿ ಪೀಣ್ಯ ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.