ಪೊಲೀಸರ ಕ್ಷೀಪ್ರ ಕಾರ್ಯಾಚರಣೆ ಕಳ್ಳರ ಬಂಧನ

7

ಪೊಲೀಸರ ಕ್ಷೀಪ್ರ ಕಾರ್ಯಾಚರಣೆ ಕಳ್ಳರ ಬಂಧನ

Published:
Updated:
ಪೊಲೀಸರ ಕ್ಷೀಪ್ರ ಕಾರ್ಯಾಚರಣೆ ಕಳ್ಳರ ಬಂಧನ

ನರಸಿಂಹರಾಜಪುರ: ಅಡಿಕೆ, ಒಡವೆ ಮುಂತಾದ ವಸ್ತುಗಳನ್ನು ಕಳ್ಳತನ ಮಾಡಿದ್ದ ಆರೋಪಿಗಳನ್ನು ಪೊಲೀಸರು  ಕ್ಷೀಪ್ರ ಕಾರ್ಯಾಚರಣೆ ನಡೆಸುವುದರ ಮೂಲಕ ಬಂಧಿಸಿರುವ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಘಟನೆ ನಡೆದಿದೆ.

ಘಟನೆಯ ವಿವರ: ತಾಲ್ಲೂಕಿನ ಸೀತೂರು ವ್ಯವಸಾಯ ಸೇವಾ ಸಹಕಾರ ಸಂಘದ ಕೊಠಡಿಯ ಹೆಂಚು ತೆಗೆದು ಕಳೆದ ಮೇ 28ರಂದು 3ಮೂಟೆ ಅಡಿಕೆ ಕಳ್ಳತನ ಮಾಡಲಾಗಿತ್ತು. ಈ ಸಂಬಂಧ ಮೇ 29ರಂದು ಪೊಲೀಸರಿಗೆ ದೂರು ನೀಡಲಾಗಿತ್ತು. ಈ ದೂರಿನನ್ವಯ ಪೊಲೀಸರು ಅನುಮಾನದ ಆಧಾರದ ಮೇಲೆ ಕೊನೋಡಿಯ ಶ್ರೀನಾಥ್ ಹಾಗೂ ಕಮಲಾಪುರದ ತೆಂಕ ಬಯಲಿನ ರಮೇಶ್ ಎಂಬುವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಇವರು ತಾವು ಅಡಿಕೆ ಮೂಟೆಯ ಕಳ್ಳತನದ ಜೊತೆಗೆ ಈ ಹಿಂದೆ ಇಂದ್ರ ಎಂಬುವರ ಮನೆಯಿಂದ 1ಜೋತೆ ಓಲೆ ಹಾಗೂ 2 ಉಂಗುರ ಕಳವು ಮಾಡಿದ್ದರ ಬಗ್ಗೆ ಬಾಯಿ ಬಿಟ್ಟರು. ಜತೆಗೆ ಕೊಪ್ಪದ ಆರ್ಡಾಕ್ ಎಸ್ಟೇಟ್‌ನಲ್ಲಿ ಕಾಳು ಮೆಣಸು ಕಳವು ಮಾಡಿರುವ ಬಗ್ಗೆ ತಪ್ಪೋಪ್ಪಿ ಕೊಂಡಿದ್ದಾರೆ. ಇದರನ್ವಯ ಪೊಲೀಸರು ಬಂಧಿತ ರಿಂದ ರೂ.24,000 ಬೆಲೆ ಬಾಳುವ ಅಡಿಕೆ, ರೂ,17,000 ಬೆಲೆಯ 1ಜೊತೆ ಓಲೆ ಹಾಗೂ 2 ಉಂಗುರ ಸಹಿತ ಕಳವು ಮಾಲು ಸಾಗಿಸಲು ಬಳಸುತ್ತಿದ್ದ ಆಟೋ ರೀಕ್ಷಾವನ್ನು ವಶಪಡಿಸಿ ಕೊಂಡು ಶನಿವಾರ ಕೊನೋಡಿಯ ಶ್ರೀನಾಥ್ ಹಾಗೂ ಕಮಲಾಪುರದ ತೆಂಕ ಬಯಲಿನ ರಮೇಶ್ ಎಂಬುವ ರನ್ನು  ನ್ಯಾಯಾಂಗ  ಬಂಧನಕ್ಕೆ ಒಪ್ಪಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಕುಮಾರ್, ಕೊಪ್ಪ ಡಿವೈಎಸ್‌ಪಿ ಹಾಗೂ ಪೊಲೀಸ್‌ ಇನ್ಸ್‌ಪೆಕ್ಟರ್ ಮಾರ್ಗದರ್ಶನದಲ್ಲಿ ಪೊಲೀಸ್ ಸಬ್‌ಇನ್ಸ್ ಪೆಕ್ಟರ್ ಜಿ.ಎಸ್.ಸ್ವರ್ಣ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂಧಿಗಳಾದ ಎ.ಎಸ್.ಐ ನಾಗರಾಜ್, ರವಿ, ವಿನಾಯಕ್, ಸತೀಶ್, ದಯಾನಂದ,ಹನುಮಂತ್ ಕಾರ್ಯಾಚರಣೆ ನಡೆಸಿ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry