ಶುಕ್ರವಾರ, ಮೇ 20, 2022
19 °C

ಪ್ಯಾಟೆ ಹುಡ್ಗೀರ್ ಮತ್ತೆ ಬಂದ್ರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುವರ್ಣ ವಾಹಿನಿಯಲ್ಲಿ ಪ್ರಸಾರವಾದ ‘ಪ್ಯಾಟೇ ಹುಡ್ಗೀರ್ ಹಳ್ಳಿ ಲೈಫು’ ಹೆಸರಿನ ಜನಪ್ರಿಯ ರಿಯಾಲಿಟಿ ಶೋ ತನ್ನ ಎರಡನೇ ಇನಿಂಗ್ಸ್ ಆರಂಭಿಸುತ್ತಿದೆ. ಇದು ಹೊಸ ಸರಣಿ, ಸ್ಪರ್ಧಿಗಳೂ ಹೊಸಬರು. ಈ ಮೊದಲು ಶಿವಮೊಗ್ಗ ಜಿಲ್ಲೆಯ ‘ಪುರದಾಳು’ ಗ್ರಾಮದಲ್ಲಿ ಶೋ ನಡೆದಿತ್ತು. ಇದೀಗ ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಕರಕಲ ಮಟ್ಟಿ ಗ್ರಾಮದಲ್ಲಿ ನಡೆಯಲಿದೆ.ಎಂದಿನಂತೆ ಅಕುಲ್ ಬಾಲಾಜಿ ನಿರೂಪಣೆಯ ಹೊಣೆ ಹೊತ್ತಿದ್ದಾರೆ. ಪೇಟೆ ಬದುಕಿನಲ್ಲಿ ಮುಳುಗಿರುವ ಹನ್ನೆರಡು ಮಂದಿ ಹುಡುಗಿಯರು ಈ ಶೋನಲ್ಲಿ ಭಾಗವಹಿಸುತ್ತಿದ್ದಾರೆ. ಒಟ್ಟು ಅರವತ್ತೈದು ದಿನ ನಡೆಯುವ ಈ ರಿಯಾಲಿಟಿ ಶೋನಲ್ಲಿ ತಮ್ಮ ಪ್ರತಿಭೆ-ತಾಳ್ಮೆಯನ್ನು ಒರೆಗೆ ಹಚ್ಚಲಿರುವ ಹುಡುಗಿಯರು ಉತ್ತರ ಕರ್ನಾಟಕದ ಮಣ್ಣಿನ ಕಂಪನ್ನು, ಆ ಸೊಗಡನ್ನು ನಾಡಿನ ತುಂಬಾ ಹರಡಲಿದ್ದಾರೆ ಎಂಬುದು ವಾಹಿನಿಯ ವಿಶ್ವಾಸ. ಫೆಬ್ರುವರಿ 28ರಿಂದ ಪ್ರತೀ ರಾತ್ರಿ 8 ಗಂಟೆಗೆ ಶೋ ಪ್ರಸಾರವಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.