ಸೋಮವಾರ, ಮಾರ್ಚ್ 8, 2021
26 °C

ಪ್ರಧಾನಿ ಮೋದಿಯವರ ಸುದೀರ್ಘ ಭಾಷಣಕ್ಕೆ ಟ್ವೀಟ್ ಪ್ರತಿಕ್ರಿಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಧಾನಿ ಮೋದಿಯವರ ಸುದೀರ್ಘ ಭಾಷಣಕ್ಕೆ ಟ್ವೀಟ್ ಪ್ರತಿಕ್ರಿಯೆ

ನವದೆಹಲಿ: 70 ನೇ ಸ್ವಾತಂತ್ರ್ಯದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೆಂಪುಕೋಟೆಯಲ್ಲಿ ದೇಶದ ಜನರನ್ನುದ್ದೇಶಿಸಿ ಮಾತನಾಡಿದರು. 1 ಗಂಟೆ 8 ನಿಮಿಷ 43 ಸೆಕೆಂಡ್‍ಗಳ ಕಾಲ ಭಾಷಣ ಮಾಡಿದ್ದ  ನರೇಂದ್ರ ಮೋದಿಯವರು ಆ ಭಾಷಣದಲ್ಲಿ ಏನೆಲ್ಲಾ ವಿಷಯ ಹೇಳಿದ್ದರು ಎಂಬುದು ಸುದ್ದಿಯಾದರೆ, ಭಾಷಣದ ಬಗ್ಗೆ ಸಾಮಾಜಿಕ ತಾಣವಾದ ಟ್ವಿಟರ್‍ ನಲ್ಲಿ ತರಹೇವಾರಿ ಟ್ವೀಟ್ ವಿಮರ್ಶೆಗಳು ಹರಿದಾಡುತ್ತಿವೆ.

ಪ್ರಧಾನಿ ಮೋದಿಯವರ ಈ ಭಾಷಣ ಮನಮೋಹನ್ ಸಿಂಗ್ ಅವರಿಗೇ ನಿದ್ದೆ ಬರುವಂತೆ ಮಾಡಿತು ಎಂಬ ಟ್ವೀಟ್‍ನಿಂದ ಹಿಡಿದು, ಇದು ಪಂಜಾಬ್ ಅಥವಾ ಉತ್ತರ ಪ್ರದೇಶದ ಚುನಾವಣಾ ರ‍್ಯಾಲಿ ಅಲ್ಲ ಎಂಬುದನ್ನು ಯಾರಾದರೂ ಮೋದಿಗೆ ನೆನಪಿಸಿ ಎಂದು ನೆಟಿಜನ್‍ಗಳು ಟ್ವೀಟ್ ಮಾಡಿದ್ದಾರೆ.

ಇಲ್ಲಿವರೆಗೆ ಮೋದಿ ಮಾಡಿದ ಭಾಷಣಗಳಲ್ಲಿ ದುರ್ಬಲವಾದ ಭಾಷಣವಿದು, ಅವರ ಮೌನವೇ ಹೆಚ್ಚು ಸದ್ದು ಮಾಡುತ್ತದೆ.

ಇದು ಉತ್ತರ ಪ್ರದೇಶ ಅಥವಾ ಪಂಜಾಬ್ ನ ಚುನಾವಣಾ ಕಾರ್ಯಕ್ರಮ ಅಲ್ಲ,  ಸ್ವಾತಂತ್ರ್ಯ ದಿನಾಚರಣೆಯ ಭಾಷಣ ಎಂದು  ಯಾರಾದ್ರೂ ಮೋದಿಗೆ ನೆನಪಿಸಿ, ಪ್ರಧಾನಿ ತಾಳ್ಮೆಯಿಂದಿರಿ, ನಿಮಗೆ ಮಾತನಾಡಲು ಅವಕಾಶ ನೀಡಲಾಗುವುದು.

ಮೋದಿಯ ಭಾಷಣ ಬರೆದದ್ದು ಟಿ ರಾಜೇಂದರ್ ಎಂಬ ಸಂದೇಹ ನನಗಿದೆ.

ಕೇಜ್ರಿವಾಲ್ ನಿದ್ದೆ ಮಾಡುತ್ತಿಲ್ಲಪ್ಪಾ..

ಎಂಥಾ ಅದ್ಭುತ ಭಾಷಣ ಅಂದ್ರೆ ನಾನು ಇನ್ನೊಂದು ಗಂಟೆ ಹೆಚ್ಚು ನಿದ್ದೆ ಮಾಡಲು ಸಹಾಯ ಮಾಡಿತು


ಮೋದಿ ಭಾಷಣದ ಅವಧಿಯಲ್ಲಿ ಬೇರೆ ದೇಶಗಳು ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ದೇಶ ಅಭಿವೃದ್ಧಿ ಪಡಿಸುತ್ತಿದ್ದವು


ಕಳೆದ ಕೆಲವು ವರ್ಷಗಳಿಂದ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಅತೀ ದೀರ್ಘವಾದ, ಬೋರ್ ಹೊಡೆಸುವ  ಬಿಜೆಪಿ ಜಾಹೀರಾತು

ನಿಮ್ಮ ಭಾಷಣ ಮನಮೋಹನ್ ಸಿಂಗ್ ಅವರನ್ನೇ ನಿದ್ದೆಗೆ ಜಾರುವಂತೆ ಮಾಡಿತು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.