ಸೋಮವಾರ, ಮೇ 17, 2021
28 °C

ಪ್ರವಾಸಿಗರನ್ನು ಕರೆತರಲು ಮದ್ದೂರು ತಹಶೀಲ್ದಾರ್ ನಿಯೋಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮದ್ದೂರು:  ತಾಲ್ಲೂಕು ತಹಶೀಲ್ದಾರ್ ಡಾ.ಎಚ್.ಎಲ್. ನಾಗರಾಜು ಅವರನ್ನು ಉತ್ತರಾಖಂಡದಲ್ಲಿ ಜಲಪ್ರವಾಹಕ್ಕೆ ಸಿಲುಕಿ ನಿರಾಶ್ರಿತರಾಗಿರುವ ರಾಜ್ಯದ ಪ್ರವಾಸಿಗರನ್ನು ಕರೆತರಲು ರಾಜ್ಯ ಸರ್ಕಾರ ನಿಯೋಜಿಸಿದೆ.ಪಟ್ಟಣದ ಪತ್ರಕರ್ತ ಎಂ.ಜಿ. ಸೀತರಾಮು ಅವರ ಕುಟುಂಬದ 18 ಮಂದಿಯಲ್ಲಿ 5 ಮಂದಿ ಗೌರಿಕುಂಡ್‌ನ ಗಂಜಿ ಕೇಂದ್ರದಲ್ಲಿದ್ದಾರೆ. ಅವರೂ ಸೇರಿದಂತೆ ರಾಜ್ಯದ ನಿರಾಶ್ರಿತ ಪ್ರವಾಸಿಗರನ್ನು ಗುರುತಿಸಿ ಕರೆತರಲು ಅವರನ್ನು ಸರ್ಕಾರ ನಿಯೋಜಿಸಿದೆ.`ಮುಖ್ಯಮಂತ್ರಿಗಳ ಕಾರ್ಯಾಲಯದ ಆದೇಶದ ಮೇರೆಗೆ ಭಾನುವಾರ ರಾತ್ರಿಯೇ ಬೆಂಗಳೂರಿಗೆ ತೆರಳುತ್ತಿದ್ದೇನೆ. ಸೋಮವಾರ ಬೆಳಿಗ್ಗೆ 8.30ರ ವಿಮಾನವೇರಿ ನವದೆಹಲಿ ತಲುಪಿ, ನಂತರ ಅಲ್ಲಿಂದ ಉತ್ತರಾಖಂಡ, ಡೆಹ್ರಾಡೂನ್, ಹರಿದ್ವಾರ, ಗೌರಿಕುಂಡ್ ಹಾಗೂ ಋಷಿಕೇಶ ಗಂಜಿ ಕೇಂದ್ರಗಳಿಗೆ ತೆರಳಿ ರಾಜ್ಯದ ನಿರಾಶ್ರಿತ ಪ್ರವಾಸಿಗರನ್ನು ಗುರುತಿಸಿ ಕರೆತರಲು ಯೋಜಿಸಿದ್ದೇನೆ. ನನ್ನೊಂದಿಗೆ ಹಾಸನ ಜಿಲ್ಲಾಧಿಕಾರಿ ಕಚೇರಿಯ ಶಿರಸ್ತೇದಾರ್ ನಟೇಶ್ ಎಂಬುವರನ್ನು ನಿಯೋಜಿಸಲಾಗಿದೆ' ಎಂದು ತಹಶೀಲ್ದಾರ್ ಡಾ.ಎಚ್.ಎಲ್. ನಾಗರಾಜು `ಪ್ರಜಾವಾಣಿ'ಗೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.