ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸಿಗರ ಬಜೆಟ್‌ ಹೋಟೆಲ್‌: ಓಯೊ ರೂಮ್ಸ್‌

Last Updated 28 ಜೂನ್ 2016, 19:30 IST
ಅಕ್ಷರ ಗಾತ್ರ

ಅತಿಥಿಗಳಿಗೆ ನೆಮ್ಮದಿಯ ಅಥವಾ ಆರಾಮ ಎನಿಸುವ ಅನುಭವ ಒದಗಿಸುವಲ್ಲಿ ಭಾರತದಲ್ಲಿರುವ ಹಲವು ಜನಪ್ರಿಯ ವಿಲಾಸಿ ಸರಣಿ ಹೋಟೆಲ್‌ಗಳು ಯಶಸ್ವಿಯಾಗಿವೆ.

ಕೆಲ ವರ್ಷಗಳ ಹಿಂದಿನವರೆಗೂ ಕಡಿಮೆ ವರಮಾನದ ಪ್ರವಾಸಿಗರು ತಮ್ಮ ಕೈಗೆಟುಕುವ ಹೋಟೆಲ್‌ಗಳಿಂದ ಆರಾಮ ಮತ್ತು ಸುರಕ್ಷತೆ  ನಿರೀಕ್ಷಿಸುವ ಪರಿಸ್ಥಿತಿ ಇರಲಿಲ್ಲ.  ಬ್ರ್ಯಾಂಡೆಡ್ ಅಲ್ಲದ ಹೋಟೆಲ್‌ಗಳಲ್ಲಿ ನಿರ್ದಿಷ್ಟ  ಗುಣಮಟ್ಟ ಮತ್ತು ಸೇವೆಯ ಪರಿಕಲ್ಪನೆಯೇ ಇರಲಿಲ್ಲ.  ಅದೃಷ್ಟಶಾಲಿಗಳಾಗಿದ್ದರೆ ಮಾತ್ರ ಹೋಟೆಲ್‌ಗಳಲ್ಲಿ ಅತ್ಯುತ್ತಮ ಅನುಭವ  ಸಿಗುತ್ತಿತ್ತು.

ಇಲ್ಲವೆಂದರೆ ಕಳಪೆ ಗುಣಮಟ್ಟದ ಹಾಸಿಗೆಗಳು, ಕೋಣೆ ಅಥವಾ ಶೌಚಾಲಯಗಳಲ್ಲಿ ಸ್ವಚ್ಛತೆಯ ಕೊರತೆ. ಜೊತೆಗೆ ನಯವಂತಿಕೆ ಇಲ್ಲದ  ಸಿಬ್ಬಂದಿ ಸೇರಿದಂತೆ ಹಲವು ರೀತಿಯಲ್ಲಿ ಕಿರಿಕಿರಿ ಎದುರಿಸಬೇಕಿತ್ತು. ಈ ಎಲ್ಲ ಅನಿರೀಕ್ಷಿತ ಕಾರಣಗಳಿಂದಾಗಿ ಪ್ರವಾಸಿಗರು ಹೊಸ ನಗರದಲ್ಲಿ, ಪರಿಚಯವಿರದ, ಯಾವುದೇ ಹೊಸ ಹೋಟೆಲ್‌ಗೆ ತೆರಳಲು  ಹಿಂದೇಟು ಹಾಕುತ್ತಿದ್ದರು.

ಅನಿವಾರ್ಯವಾಗಿ ಉತ್ತಮ ಸೌಕರ್ಯಗಳಿಗಾಗಿ ದುಬಾರಿ ಹಣ ತೆತ್ತು ವಿಲಾಸಿ ಹೋಟೆಲ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ದುಬಾರಿ ಅಲ್ಲದ ಹೋಟೆಲ್‌ಗಳನ್ನು ಕಾಯ್ದಿರಿಸುವಾಗ ನಿರೀಕ್ಷೆ, ಕೈಗೆಟುಕುವ ದರ ಮತ್ತು ಲಭ್ಯತೆಗಳನ್ನು ನಿಖರವಾಗಿ ಒದಗಿಸುವ ಭರವಸೆಯೊಂದಿಗೆ ಓಯೊ ರೂಮ್ಸ್ (oyo rooms) ಸೇವೆ ಒದಗಿಸುತ್ತಿದೆ.

ಕೇವಲ ಎರಡು ವರ್ಷಕ್ಕೂ ಕಡಿಮೆ ಅವಧಿಯಲ್ಲಿ ಓಯೊರೂಮ್ಸ್, ಭಾರತದಲ್ಲೇ ಅತಿ ಹೆಚ್ಚು   ಬ್ರ್ಯಾಂಡೆಡ್ ಹೋಟೆಲ್‌ ಜಾಲ  ಒಳಗೊಂಡಿರುವ ಸಂಸ್ಥೆಯಾಗಿ ಬೆಳೆದಿದೆ. ಬೆಂಗಳೂರು ಸೇರಿದಂತೆ ದೇಶದ ವಿವಿಧ ಮಹಾನಗರಗಳಲ್ಲದೆ, ಪ್ರಮುಖ ಪ್ರವಾಸಿ ತಾಣಗಳು, ಯಾತ್ರಾ ಕೇಂದ್ರಗಳಲ್ಲಿ ಓಯೊ ರೂಮ್ಸ್‌ಗಳು ಲಭ್ಯ ಇವೆ.

ರಿತೇಶ್‌ ಅಗರ್‌ವಾಲ್ ಅವರು ಈ ಉದ್ದಿಮೆಯ ಸ್ಥಾಪಕರಾಗಿದ್ದಾರೆ. ವಿಶ್ವದ ಪ್ರಮುಖ ಹೂಡಿಕೆ ಸಂಸ್ಥೆ ಸಾಫ್ಟ್‌ಬ್ಯಾಂಕ್‌ ಗ್ರೂಪ್‌, ಗ್ರೀನ್‌ಓಕ್ಸ್‌ ಕ್ಯಾಪಿಟಲ್‌, ಲೈಟ್‌ಸ್ಪೀಡ್‌ ಇಂಡಿಯಾ ಸಂಸ್ಥೆಗಳು ಹಣಕಾಸಿನ ಬೆಂಬಲ ಒದಗಿಸಿವೆ.

ಪ್ರವಾಸಿಗರಿಗೆ  ಉತ್ತಮ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಗರಿಷ್ಠ  ಕಾಳಜಿ ವಹಿಸಲು ಓಯೊ ರೂಮ್ಸ್  ಶ್ರಮಿಸುತ್ತಿದೆ. ಮೊಬೈಲ್‌ ಆ್ಯಪ್‌ ಮೂಲಕವೂ ಹೋಟೆಲ್‌ ಕೋಣೆಗಳನ್ನು ಕಾಯ್ದಿರಿಸುವ ಸೌಲಭ್ಯ ಇಲ್ಲಿದೆ.

ಸಂಸ್ಥೆಯು ಈಗ, ದೇಶದ ಅತಿದೊಡ್ಡ ಡಿಜಿಟಲ್  ಹಣ ಪಾವತಿ ಸಂಸ್ಥೆ ಇಟ್ಜ್‌ಕ್ಯಾಷ್ (ItzCash) ಜತೆ ಒಪ್ಪಂದ ಮಾಡಿಕೊಂಡಿದೆ. ಪ್ರವಾಸಿಗರು ಕೋಣೆಗಳನ್ನು ಕಾಯ್ದಿರಿಸಲು ಇನ್ನು ಮುಂದೆ ಈ ಹೆಚ್ಚು ಶ್ರಮ ಇಲ್ಲದ ಸೌಲಭ್ಯ ಬಳಸಿಕೊಳ್ಳಬಹುದಾಗಿದೆ. ಡೆಬಿಟ್‌ ಅಥವಾ ಕ್ರೆಡಿಟ್‌ ಇರದಿದ್ದರೂ  ಇಟ್ಜ್‌ಕ್ಯಾಷ್‌ ಮೂಲಕ ಆನ್‌ಲೈನ್‌ ಇಲ್ಲವೆ ತನ್ನ ಮಳಿಗೆಗಳ ಮೂಲಕ ಸುಲಭವಾಗಿ ಹಣ ಪಾವತಿಸುವ ಸೌಲಭ್ಯ ಬಳಸಿಕೊಳ್ಳಬಹುದು.

ಕೈಗೆಟುಕುವ ಬೆಲೆಗೆ ಮುಂಚಿತವಾಗಿಯೇ ಹೋಟೆಲ್‌ ಕೋಣೆಗಳನ್ನು ಕಾಯ್ದಿರಿಸಲೂ ಇದರಿಂದ ಸಾಧ್ಯವಾಗಲಿದೆ. ಓಯೊ ರೂಮ್ಸ್‌ನ ಏರ್ ಕಂಡೀಷನರ್ ಸೌಲಭ್ಯದ ಕೋಣೆಗಳು   150 ಚದರ ಅಡಿಗಿಂತಲೂ ದೊಡ್ಡದಾಗಿರಲಿದ್ದು, ಇಬ್ಬರು ವ್ಯಕ್ತಿಗಳು ಉಳಿದುಕೊಳ್ಳಲು ಸಾಕಷ್ಟು ಸ್ಥಳಾವಕಾಶ ಲಭ್ಯವಿರುತ್ತದೆ.  ಹೋಟೆಲ್‌ ಕೋಣೆಯಲ್ಲಿ ಇರುವ ಸೌಲಭ್ಯಗಳ ಸಂಪೂರ್ಣ ವಿವರ ಗ್ರಾಹಕರಿಗೆ ದೊರೆಯುತ್ತದೆ. ವಿಶಾಲವಾದ ಕೊಠಡಿ, ಸ್ವಚ್ಛವಾಗಿರುವ ಶೌಚಾಲಯ,  ನಿರ್ಮಲವಾದ, ಕಲೆರಹಿತ ಹಾಸಿಗೆ ಹೊದಿಕೆಗಳೂ ಲಭ್ಯ   ಇರುತ್ತವೆ.

ಕೋಣೆಯ ಸೌಂದರ್ಯ ಮತ್ತು ಪರಿಸರವು ಆಹ್ಲಾದಕರವಾಗಿರುವಂತೆ   ವಿಶೇಷ ಕಾಳಜಿ ವಹಿಸಲಾಗುತ್ತದೆ. ಕೊಠಡಿಗಳಲ್ಲಿ ಉಚಿತ ವೈ-ಫೈ ಮತ್ತಿತರ ಸೌಲಭ್ಯಗಳು ಪ್ರವಾಸಿಗರ ಮೆಚ್ಚುಗೆಗೆ ಪಾತ್ರವಾಗಿವೆ.  ಹೀಗೆ ಎಲ್ಲ ಸೌಲಭ್ಯಗಳನ್ನು ಒಳಗೊಂಡಂತೆ, ಅತಿಥಿಗಳು ಹೋಟೆಲ್‌ನಲ್ಲಿ ಇದ್ದರೂ  ತಮ್ಮ ಮನೆಯಲ್ಲೇ ಇರುವಂತೆ ಅನಿಸುವ ಅನುಭವ  ಪಡೆಯುವ   ಭರವಸೆಯನ್ನು ಓಯೊ ರೂಮ್ಸ್ ನೀಡುತ್ತದೆ ಎಂದು ರಿತೇಶ್ ಅಗರ್ವಾಲ್ ಭರವಸೆ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT