ಸೋಮವಾರ, ಮೇ 17, 2021
25 °C

ಪ್ರವಾಹ ಸಂತ್ರಸ್ಥರಿಗೆ ರಾಷ್ಟ್ರಪತಿಯ ತಿಂಗಳ ವೇತನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರವಾಹ ಸಂತ್ರಸ್ಥರಿಗೆ ರಾಷ್ಟ್ರಪತಿಯ ತಿಂಗಳ ವೇತನ

ನವದೆಹಲಿ (ಐಎಎನ್ಎಸ್): ತಮ್ಮ ಒಂದು ತಿಂಗಳ ವೇತನ 1.5 ಲಕ್ಷ ರೂಪಾಯಿಗಳನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಉತ್ತರಾಖಂಡದ ಪ್ರವಾಹ ಸಂತ್ರಸ್ಥರಿಗೆ ನೀಡಿದ್ದಾರೆ ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ಭಾನುವಾರ ತಿಳಿಸಿದೆ.'ಅವರು ತಮ್ಮ ಒಂದು ತಿಂಗಳ ವೇತನ 1.5 ಲಕ್ಷ ರೂಪಾಯಿಗಳನ್ನು ದೇಣಿಗೆ ನೀಡುತ್ತಿದ್ದಾರೆ' ಎಂದು ರಾಷ್ಟ್ರಪತಿಯವರ ಪತ್ರಿಕಾ ಕಾರ್ಯದರ್ಶಿ ವೇಣು ರಾಜಮೊನಿ ಹೇಳಿದರು.ಚರಧಾಮ ಯಾತ್ರೆಯ ಸಂದರ್ಭದಲ್ಲಿ ಜೂನ್ 15ರ ವಾರಾಂತ್ಯದಲ್ಲಿ ಸಂಭವಿಸಿದ ಮೇಘಸ್ಫೋಟ - ಭಾರಿ ಮಳೆ ಹಾಗೂ ಭೂಕುಸಿತಗಳಿಂದ ಉತ್ತರಾಖಂಡದಲ್ಲಿ ತೀವ್ರ ಹಾನಿ ಸಂಭವಿಸಿದೆ.ಸರ್ಕಾರದ ಪ್ರಕಾರ 557 ಶವಗಳು ಪತ್ತೆಯಾಗಿದ್ದು, ಸುಮಾರು 20,000 ಮಂದಿಯನ್ನು ಇನ್ನೂ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಸಾವಿನ ಸಂಖ್ಯೆ ಸಹಸ್ರ ಸಂಖ್ಯೆಯಲ್ಲಿ ಅಲ್ಲದಿದ್ದರೂ ನೂರರ ಸಂಖ್ಯೆಯಲ್ಲಿ ಹೆಚ್ಚುವ ಸಂಭವ ಇದೆ ಎಂದು ಸರ್ಕಾರಿ ಮೂಲಗಳು ಹೇಳಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.