ಬೆಳಗಾವಿ: ಗೋ ಸೇರಿದಂತೆ ಯಾವುದೇ ಪ್ರಾಣಿಗಳ ಹತ್ಯೆ ಮಾಡದೇ ಬಸವನಕುಡಚಿ ಬಳಿ ಏ.16 ಮತ್ತು 17 ರಂದು ಇಸ್ತಿಮಾ ಹಮ್ಮಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ವಿ. ಅನ್ಬುಕುಮಾರ ಹೇಳಿದರು.

ಖಾಸಗಿ ಒಡೆತನದ ಭೂಮಿ ಮಾಲೀಕರು ಅನುಮತಿ ನೀಡಿದ ಜಾಗೆಯಲ್ಲಿ ಮಾತ್ರ ಕಾರ್ಯಕ್ರಮ ನಡೆಸಬೇಕು. ಪರವಾನಗಿ ನೀಡದ ಭೂಮಿಯನ್ನು ಬಳಸಬಾರದು ಎಂದು ಇಸ್ತಿಮಾ ಹಮ್ಮಿಕೊಂಡಿರುವ ಕರೀಮದಾದ ಖಾನ ಮಸಜಿದ್ ಅಧ್ಯಕ್ಷರಿಗೆ ಸೂಚಿಸಲಾಗಿದೆ ಎಂದು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.

`ಬೇರೆ ಧರ್ಮದವರ ಭಾವನೆಗಳಿಗೆ ಧಕ್ಕೆ ಬರುವಂತಹ ಯಾವುದೇ ಚಟುವಟಿಕೆಗಳನ್ನು ಮಾಡಬಾರದು. ಉದ್ರೇಕಕಾರಿ ಹಾಗೂ ಕೋಮು ಭಾವನೆಗಳಿಗೆ ಧಕ್ಕೆ ಉಂಟು ಮಾಡುವಂತವ ಭಾಷಣವನ್ನು ನಿಷೇಧಿಸಲಾಗಿದೆ~ ಎಂದು ಅವರು ಹೇಳಿದರು.

`ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಬರುವ ಅನ್ಯ ಧರ್ಮದವರ ವಿಗ್ರಹ, ಗುಡಿ, ದೇವರು ಕಟ್ಟೆಗೆ ಯಾವುದೇ ಧಕ್ಕೆಯುಂಟು ಮಾಡಬಾರದು. ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಬೇಕು. ಅಹಿತಕರ ಘಟನೆ ನಡೆದರೆ ನಿಮ್ಮನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸಂಘಟಕರಿಗೆ ತಿಳಿಸಿಲಾಗಿದೆ~ ಎಂದು ಅವರು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠ ಸಂದೀಪ ಪಾಟೀಲ ಮಾತನಾಡಿ, ಜನರ ಭಾವನೆಗಳಿಗೆ ಧಕ್ಕೆಯುಂಟಾಗಲು ಬಿಡುವುದಿಲ್ಲ. ಕಾರ್ಯಕ್ರಮ ಮಾಡಲು ಐದು ಎಕರೆ ಹಾಗೂ ವಾಹನ ನಿಲುಗಡೆ ಎರಡು ಎಕರೆ ಭೂಮಿಯನ್ನು ನೀಡಲಾಗಿದೆ ಎಂದರು.

`ಗೋ ಹತ್ಯೆಯಾಗದಂತೆ ನಿಗಾವಹಿಸ ಲಾಗುವುದು. ತಪಾಸಣೆ ಯನ್ನೂ ಕೂಡ ನಡೆಸಲಾಗುವುದು. ಕಾನೂನು ಸು ವ್ಯವಸ್ಥೆ ಕಾಪಾಡಲು ಮೀಸಲು ಪೊಲೀಸ್ ಪಡೆಯ ಆರು ತುಕಡಿಗಳು ಸಮಾರಂಭ ಸ್ಥಳದಯಲ್ಲಿ ನಿಯೋಜಿಸ ಲಾಗುವುದು~ ಎಂದು ಅವರು ಹೇಳಿದರು.

ಇದಕ್ಕೂ ಮೊದಲು ನಡೆದ ಹಿಂದೂ ಸಂಘಟನೆಗಳ ಸಭೆಯಲ್ಲಿ ಮಾತನಾಡಿದ ವಿಶ್ವ ಪ್ರಾಣಿ ಕಲ್ಯಾಣ ಮಂಡಳಿಯ ದಯಾನಂದ ಸ್ವಾಮೀಜಿ, ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ಆದೇಶದಂತೆ ಗೋಹತ್ಯೆ ಆಗುವುದನ್ನು ತಡೆಯಬೇಕು. ಇಲ್ಲದಿದ್ದರೆ ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಎಚ್ಚರಿಸಿದರು.
`ಇಸ್ತಿಮಾ ಅಲ್ಲದೇ ಬಕ್ರೀದ್ ಮುಂತಾದ ಹಬ್ಬಗಳಲ್ಲಿಯೂ ಗೋ ಹತ್ಯೆ ಮಾಡದಂತೆ ಮಾಡಬೇಕು.

ಪ್ರಾಣಿಗಳ ಬಲಿಯಾಗದಂತೆ ಜಿಲ್ಲಾಡಳಿತ ಸೂಕ್ತ ಕ್ರಮಕೈಗೊಳ್ಳಬೇಕು~ ಎಂದು ಅವರು ಆಗ್ರಹಿಸಿದರು.
ಜಿಲ್ಲಾಧಿಕಾರಿ ಅನ್ಬುಕುಮಾರ ಮಾತನಾಡಿ, ಕಾನೂನು ಪರಿಪಾಲನೆ ಮಾಡಲಾಗುವುದು. ಕಾನೂನು ಉಲ್ಲಂಘನೆಗೆ ಅವಕಾಶ ನೀಡುವುದಿಲ್ಲ. ನೀವುಗಳು ನೀಡಿದ ಸಲಹೆಗಳನ್ನು ಅಳವಡಿಸಿಕೊಳ್ಳಲಾಗುವುದು ಎಂದು ಹೇಳಿದರು. ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮಾತನಾಡಿದರು.
ಎಸ್.ಎಂ. ಕುಲಕರ್ಣಿ, ಸುರೇಶ ಹುಂದ್ರೆ, ಪರಮೇಶ್ವರ ಹೆಗಡೆ, ಎಂ.ಬಿ. ಝಿರಲಿ, ಬಿ.ಬಿ. ಕಗ್ಗಣಗಿ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.