ಶುಕ್ರವಾರ, ಜನವರಿ 24, 2020
28 °C

ಫಲಿತಾಂಶ ನೀಡಿದ ಸ್ಪಷ್ಟ ಸಂದೇಶ

–ದಾನಪ್ಪ,ದೇವದುರ್ಗ Updated:

ಅಕ್ಷರ ಗಾತ್ರ : | |

ದೆಹಲಿಯ ಮತದಾರರು ಆಮ್ ಆದ್ಮಿ ಪಕ್ಷಕ್ಕೆ ಉತ್ತಮ ಬೆಂಬಲ ನೀಡುವ ಮೂಲಕ,  ಹಣಬಲ ಮತ್ತು ತೋಳ್ಬಲದಿಂದ ಮಾತ್ರ ಚುನಾವಣೆ ಗಳನ್ನು ಗೆಲ್ಲಬಹುದೆಂಬ ಭ್ರಷ್ಟ ರಾಜಕಾರಣಿಗಳ ಬಲವಾದ ನಂಬಿಕೆಯನ್ನು ನುಚ್ಚುನೂರು ಮಾಡಿದ್ದಾರೆ. ಪ್ರಾಮಾಣಿಕ ಮತ್ತು ಆರೋಗ್ಯಕರ ಚುನಾವಣೆ ಮೂಲಕವೂ ಪ್ರಜಾಪ್ರಭುತ್ವದಲ್ಲಿ ಬದಲಾವಣೆಯನ್ನು ತರಲು ಸಾಧ್ಯ ಎಂಬ ಭರವಸೆಯನ್ನು ಅಲ್ಲಿನ ಜನರು ದೇಶದ ಪ್ರಜ್ಞಾವಂತ ಮತದಾರನಲ್ಲಿ ಮೂಡಿಸಿದ್ದಾರೆ.ಅಣ್ಣಾ ಹಜಾರೆ ಅವರ ‘ಭ್ರಷ್ಟಾಚಾರದ ವಿರುದ್ಧ ಭಾರತ’ ಸಂಘಟನೆಯ ನೆರಳಲ್ಲಿ ಹುಟ್ಟಿಕೊಂಡ ಆಮ್ ಆದ್ಮಿ ಪಕ್ಷ, ದೇಶದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರವನ್ನು ಗುಡಿಸಿಹಾಕಲು ಮುಂಬರುವ  ಲೋಕಸಭಾ ಚುನಾವಣೆಯಲ್ಲಿ ದೇಶದ  ಪ್ರತಿಯೊಬ್ಬ ಪ್ರಜ್ಞಾವಂತ ಮತದಾರ ತನ್ನ ಕೈಯಲ್ಲಿ ‘ಕಸಬರಿಕೆ’ಯನ್ನು ಹಿಡಿಯಬೇಕು ಎಂಬ   ಸ್ಪಷ್ಟ ಸಂದೇಶವನ್ನು ದೆಹಲಿ ಜನತೆಯ ಮೂಲಕ ರವಾನಿಸಿದೆ.ಜನರು ಜಾತಿ, ಮತ, ಹಣ, ಹೆಂಡದ ಆಮಿಷಕ್ಕೆ ಬಲಿಯಾಗದೆ, ಸ್ವಚ್ಛ ರಾಜಕಾರಣಕ್ಕೆ ಬೆಂಬಲ ನೀಡಿದರೆ ದೇಶದ ಭವಿಷ್ಯ ಉಜ್ವಲಗೊಳ್ಳುವುದು.

 

ಪ್ರತಿಕ್ರಿಯಿಸಿ (+)