ಫುಟ್‌ಬಾಲ್‌ ಕೋಚ್ ಬಾಬ್ ಹಟನ್ ವಜಾ

7

ಫುಟ್‌ಬಾಲ್‌ ಕೋಚ್ ಬಾಬ್ ಹಟನ್ ವಜಾ

Published:
Updated:

ನವದೆಹಲಿ (ಪಿಟಿಐ):  27 ವರ್ಷಗಳ ನಂತರ ಮೊದಲ ಬಾರಿಗೆ ಏಷ್ಯಾ ಕಪ್‌ನಲ್ಲಿ ಆಡಿದ ಭಾರತ ತಂಡದವರು ಆಸ್ಟ್ರೇಲಿಯಾ, ಬಹ್ರೇನ್ ಹಾಗೂ ದಕ್ಷಿಣ ಕೊರಿಯಾ ಜೊತೆಗೆ ಭಾರಿ ಅಂತರದ ಸೋಲು ಅನುಭವಿಸಿದ್ದರು. ಆದ್ದರಿಂದಲೇ ಎಐಎಫ್‌ಎಫ್ ಕಾರ್ಯಕಾರಿ ಸಮಿತಿ ಬುಧವಾರ ಸಭೆ ನಡೆಸಿ ಕೋಚ್ ಸ್ಥಾನದಿಂದ ಬಾಬ್ ಹಟನ್ ಅವರನ್ನು ವಜಾ ಮಾಡುವಂತೆ ತಾಂತ್ರಿಕ ಸಮಿತಿಗೆ ಶಿಫಾರಸು ಮಾಡಿತ್ತು. ಈ ಸಮಿತಿ ಬಾಬ್ ಅವರನ್ನು ವಜಾ ಮಾಡುವ ನಿರ್ಧಾರಕ್ಕೆ ಸಮ್ಮತಿ ಸೂಚಿಸಿದೆ.‘ಭಾರತ ಫುಟ್‌ಬಾಲ್‌ನಲ್ಲಿ ಉತ್ತಮ ಪ್ರದರ್ಶನ ತೋರವಂತಾಗಬೇಕು ಎಂದು ಸಾಕಷ್ಟು ವೇತನ ಹಾಗೂ ಸೌಲಭ್ಯಗಳನ್ನು ನೀಡಿ ಬಾಬ್ ಅವರನ್ನು ಕೋಚ್ ಆಗಿ ನೇಮಕ ಮಾಡಲಾಗಿತ್ತು. ಆದರೆ ತಂಡದ ಪ್ರದರ್ಶನವನ್ನು ಉತ್ತಮ ಪಡಿಸುವಲ್ಲಿ ಅವರು ವಿಫಲರಾಗಿದ್ದಾರೆ. ಆದ್ದರಿಂದ ಅವರನ್ನು ಕೋಚ್ ಸ್ಥಾನದಿಂದ ವಜಾ ಮಾಡಲಾಗಿದೆ’ ಎಂದು ಎಐಎಫ್‌ಎಫ್ ಕಚೇರಿಯ ಮೂಲಗಳು ತಿಳಿಸಿವೆ. 2008ರಲ್ಲಿ ಎಎಫ್‌ಸಿ ಚಾಲೆಂಜ್ ಕಪ್, ಎರಡು ಸಲ ನೆಹರೂ ಕಪ್ ಅಂತರರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಭಾರತ ಉತ್ತಮ ಪ್ರದರ್ಶನ ತೋರುವಲ್ಲಿ ಬಾಬ್ ಹಟನ್ ಪ್ರಮುಖ ಪಾತ್ರ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry