ಬನಹಟ್ಟಿ: ಬನಹಟ್ಟಿಯಲ್ಲಿ ಮಂಗಳವಾರ ನಡೆಯುವ ಸಂತೆಯು ಸುತ್ತ ಮುತ್ತಲಿನ ನಗರ ಮತ್ತು ಹಳ್ಳಿಗಳಿಗೆ ಅತಿ ದೊಡ್ಡ ಸಂತೆ. ಬನಹಟ್ಟಿಗೆ ಹೊಂದಿಕೊಂಡಂತೆ ನಗರ ಮತ್ತು ಗ್ರಾಮೀಣ ಪ್ರದೇಶದ ಮಾರಾಟಗಾರರು ಮತ್ತು ರೈತರ ಬೆಳೆಗಳಿಗೆ ಇದು ಪ್ರಮುಖ ಮಾರುಕಟ್ಟೆಯಾಗಿದೆ.

ಬೆಳಗ್ಗೆ 8 ಕ್ಕೆ ಪ್ರಾರಂಭಗೊಳ್ಳುವ ಸಂತೆ ರಾತ್ರಿ 9 ರವರೆಗೆ ನಡೆಯುತ್ತದೆ. ಸಾವಿರಾರು ಜನ ಬರುವ ಮಾರುಕಟ್ಟೆಯಲ್ಲಿ ಬೀಡಾಡಿ ದನಗಳ ಕಾಟ ಬಹಳಷ್ಟು. ಸಂತೆಗೆ ಬರುವ ಹೆಣ್ಣು ಮಕ್ಕಳಿಗಂತೂ ಇದರಿಂದ ತೊಂದರೆಯಾಗಿದೆ. ಯಾರು ಇದರ ಬಗ್ಗೆ ಕಾಳಜಿಯನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಅವರು ದೂರುತ್ತಾರೆ.

ಈ ಸಂತೆಗೆ ವಯಸ್ಸಾದವರು ಬರುತ್ತಾರೆ. ಕೆಲವೊಂದು ದನಗಳು ಹಾಯ್ದು ಮತ್ತು ಕೊಡುಗಳಿಂದ ಇರಿದು ಸಾಕಷ್ಟು ಜನರಿಗೆ ತೊಂದರೆಯನ್ನುಂಟು ಮಾಡಿವೆ. ಕುಳಿತು ತರಕಾರಿಗಳನ್ನು ಆರಿಸುವ ಜನರಿಗೂ ದನಗಳು ಹಾಯ್ದು ಗಾಯವನ್ನುಂಟು ಮಾಡಿವೆ. ಒಮ್ಮೇಲೆ ಬಂದು ತರಕಾರಿಗಳಿಗೆ ಬಾಯಿ ಹಾಕುತ್ತವೆ. ಹಳ್ಳಿಗಳಿಂದ ಬಂದ ಮಾರಾಟಗಾರರಿಗೆ ಕೆಲವು ಬಾರಿ ಲಾಭಕ್ಕಿಂತ ದನಗಳ ಕಾಟದಿಂದಾಗಿ ಹಾನಿಯಾಗಿದ್ದೇ ಹೆಚ್ಚು. ಕೆಲವರಿಗೆ ಗ್ರಾಹಕರಿಗಿಂತ ದನಗಳನ್ನು ಕಾಯುವುದೇ ಆಗಿದೆ.

ಈ ದನಗಳು ಕೊಡುವ ತೊಂದರೆಯ ಬಗ್ಗೆ ಹಲವಾರು ಬಾರಿ ಸಾರ್ವಜನಿಕರು ನಗರಸಭೆಗೆ ದೂರು ಕೊಟ್ಟರು ಅವರು ಯಾವುದೇ ರೀತಿಯಲ್ಲಿಯೂ ಪ್ರತಿಕ್ರಿಯಿಸದೇ ದಿವ್ಯಮೌನ ವಹಿಸಿದ್ದಾರೆ.

ಕೂಡಲೇ ನಗರಸಭೆಯವರು ಈ ಬಿಡಾಡಿ ದನಗಳನ್ನು ಸಂತೆಯೊಳಗೆ ಬರದಂತೆ ಮಾಡಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎನ್ನುವ ಆಗ್ರಹ ಸಾರ್ವಜನಿಕರಿಂದ ಕೇಳಿಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.