ಸೋಮವಾರ, ಮೇ 17, 2021
25 °C

ಬಸ್ ಶೆಲ್ಟರ್ ನಿರ್ಮಿಸಿ

-ವೈ. ವಿಜಯಕುಮಾರ್‌ರಾವ್ ಕದಂ Updated:

ಅಕ್ಷರ ಗಾತ್ರ : | |

ಸುಮಾರು 35 ವರ್ಷಗಳಿಂದಲೂ ವಿಜಯನಗರದಿಂದ ಜಯನಗರ 9ನೇ ಹಂತದವರೆಗೂ 60ಎ ನಗರ ಸಾರಿಗೆ ಬಸ್ಸು ಸಂಚರಿಸುವುದು ಸರಿಯಷ್ಟೆ?  ಬಸವನಗುಡಿ ಪೊಲೀಸ್ ಸ್ಟೇಷನ್ ಬಳಿ ಈ ಬಸ್ ನಿಲ್ಲುತ್ತದೆ. ಮಳೆ ಬಂದಾಗ ನಿಲ್ಲಲು ಅಲ್ಲಿ ಸಣ್ಣ ಶೆಲ್ಟರ್ ಕೂಡ ಇಲ್ಲ. ಇದುವರೆಗೂ ಬಸವನಗುಡಿಯ ಬಿ.ಬಿ.ಎಂ.ಪಿ. ಸದಸ್ಯರೂ ಸೇರಿದಂತೆ ಯಾರೂ ಇದರ ಬಗ್ಗೆ ಗಮನ ನೀಡದಿರುವುದು ವಿಷಾದನೀಯ ಸಂಗತಿ.ಬಸವನಗುಡಿ ಪೊಲೀಸ್ ಸ್ಟೇಷನ್, ಕೃಷ್ಣರಾವ್ ಪಾಕ್ ಬಳಿ ಬಿ.ಎಂ.ಟಿ.ಸಿ. ಬಸ್ಸುಗಳು ನಿಲ್ಲುವ ಕಡೆ ನಾಗರಿಕರು ಮಳೆ, ಬಿಸಿಲಿನಲ್ಲಿ ತೊಂದರೆ ಆಗದಂತೆ ನಿಲ್ಲುವ ವ್ಯವಸ್ಥೆ ಮಾಡಿದರೆ ಒಳಿತು. ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಲಿ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.