ಬುಧವಾರ, ಏಪ್ರಿಲ್ 21, 2021
25 °C

ಬಾಂಬ್ ದಾಳಿ: ಸಚಿವ ಪಾರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ಹಿರಿಯ ಸಚಿವ ಸರ್ದಾರ ಸನಾವುಲ್ಲಾ ಜೆಹರಿ ಅವರನ್ನು ಗುರಿಯಾಗಿಟ್ಟುಕೊಂಡು ನಡೆಸಲಾದ ಬಾಂಬ್ ದಾಳಿಯಲ್ಲಿ ಸಚಿವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಕಲಾತ್ ಜಿಲ್ಲೆಯ ಸುರಬ್ ಬಳಿ ಸಚಿವರ ಕಾರು ಸಾಗುತ್ತಿದ್ದಾಗ ಈ ಬಾಂಬ್ ಸ್ಫೋಟ ಯತ್ನ ನಡೆದಿದೆ. ಜೆಹರಿ ಸೇವೆ ಮತ್ತು ಸಾಮಾನ್ಯ ಆಡಳಿತ ಇಲಾಖೆ ಸಚಿವರಾಗಿದ್ದಾರೆ.ಸಚಿವರು ಶುಕ್ರವಾರ ರಾತ್ರಿ ಖುಜದಾರ್‌ದಿಂದ ಕಲಾತ್ ಕಡೆಗೆ ಹೊರಟಿದ್ದಾಗ ಅಂಜೆರಾ ಪ್ರದೇಶದಲ್ಲಿನ ಹೆದ್ದಾರಿಯಲ್ಲಿ ಈ ಬಾಂಬ್ ಇಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.ಈ ಕೃತ್ಯಕ್ಕೆ ತಾನೇ ಹೊಣೆ ಎಂದು ಬಲೂಚ್ ಲಿಬರೇಶನ್ ಫ್ರಂಟ್ (ಬಿಎಲ್‌ಎಫ್) ಹೇಳಿಕೊಂಡಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.