ನವದೆಹಲಿ (ಪಿಟಿಐ): ಭಾರತದ ಶಿವ ಥಾಪಾ (56 ಕೆ.ಜಿ.) ಹಾಗೂ ಸುಮಿತ್ ಸಂಗ್ವಾನ್ (81 ಕೆ.ಜಿ.) ಕಜಕಸ್ತಾನದ ಅಸ್ತಾನದಲ್ಲಿ ನಡೆದ ಏಷ್ಯನ್ ಅರ್ಹತಾ ಸುತ್ತಿನ ಬಾಕ್ಸಿಂಗ್ ಟೂರ್ನಿಯಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.

ಎರಡು ದಿನಗಳ ಹಿಂದೆಯಷ್ಟೇ ಈ ಇಬ್ಬರೂ ಬಾಕ್ಸರ್ಗಳು ಲಂಡನ್ ಒಲಿಂಪಿಕ್ಸ್ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದರು. ಗುರುವಾರ `ಚಿನ್ನ~ಕ್ಕಾಗಿ ಹೋರಾಡಿ ಭಾರತದ ಕ್ರೀಡಾಭಿಮಾನಿಗಳ `ಡಬಲ್~ ಸಂಭ್ರಮಕ್ಕೆ ಕಾರಣರಾದರು.
ಒಲಿಂಪಿಕ್ಸ್ಗೆ ಅರ್ಹತೆ ಪಡೆದ ಭಾರತದ ಅತ್ಯಂತ ಕಿರಿಯ ಬಾಕ್ಸರ್ ಎನ್ನುವ ಕೀರ್ತಿ ಪಡೆದ ಥಾಪಾ ಫೈನಲ್ ಪಂದ್ಯದಲ್ಲಿ 18-11 ಪಾಯಿಂಟ್ಸ್ನಿಂದ ಸಿರಿಯಾದ ವೆಸ್ಸಮ್ ಸಲಮನಾ ಅವರನ್ನು ಸೋಲಿಸಿದರು.

18 ವರ್ಷದ ಅಸ್ಸಾಂನ ಈ ಬಾಕ್ಸರ್ಗೆ ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಲಭಿಸಿದ ಎರಡನೆಯ ಪದಕ ಇದಾಗಿದೆ.
`ಪದಕ ಗೆಲ್ಲುವ ಭರವಸೆ ಮೂಡಿಸಿದ್ದ ಪ್ರತಿಭೆ ಶಿವ ಅತ್ಯುತ್ತಮ ಪ್ರದರ್ಶನ ನೀಡಿದರು. ಯವ ಬಾಕ್ಸರ್ಗಳು ಮೊದಲ ಹಾಗೂ ಎರಡನೆಯ ಟೂರ್ನಿ ಆಡುವಷ್ಟರಲ್ಲಿಯೇ ಚಿನ್ನದ ಪದಕ ಜಯಿಸಿರುವುದು ಒಳ್ಳೆಯ ಬೆಳವಣಿಗೆ. ಇದು ಭಾರತದ ಬಾಕ್ಸಿಂಗ್ ಕ್ರೀಡೆಗೆ ಹೊಸ ಭಾಷ್ಯ ಬರೆಯಲಿದೆ~ ಎಂದು ಭಾರತ ತಂಡದ ಕೋಚ್ ಗುರುಬಕ್ಷ್ ಸಿಂಗ್ ಸಂಧು ಸಂತಸ ವ್ಯಕ್ತಪಡಿಸಿದರು.

ಸುಮಿತ್ಗೆ ಚೊಚ್ಚಲ ಚಿನ್ನ: 19 ವರ್ಷದ ಸುಮಿತ್ ಅಂತಿಮ ಘಟ್ಟದ ಪಂದ್ಯದಲ್ಲಿ 14-9ಪಾಯಿಂಟ್ಸ್ಗಳಿಂದ ತಜಕಿಸ್ತಾನದ ಜೊಹಾಕೊನ್ ಕಾರ್ಬೊನೊವ್ ಎದುರು ಗೆಲುವು ಪಡೆದರು. ಸೀನಿಯರ್ ವಿಭಾಗದಲ್ಲಿ ಈ ಬಾಕ್ಸರ್ಗೆ ಲಭಿಸಿದ ಚೊಚ್ಚಲ ಅಂತರರಾಷ್ಟ್ರೀಯ ಚಿನ್ನದ ಪದಕವಿದು.ಒಲಿಂಪಿಕ್ಸ್ಗೆ ಅರ್ಹತೆ ಪಡೆಯಲು ಭಾರತದ ಬಾಕ್ಸರ್ಗಳಿಗೆ ಈ ಟೂರ್ನಿ ಕೊನೆಯ ಅವಕಾಶವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.