ಬೆಂಗಳೂರು: ಮತ ಗಳಿಕೆಗಾಗಿ ವಿಧಾನ ಪರಿಷತ್ತಿನ ಶಿಕ್ಷಕರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಚೌಡರೆಡ್ಡಿ ಏರ್ಪಡಿಸಿದ್ದ ಬಾಡೂಟ ಕುರಿತಂತೆ ಎರಡು ಖಾಸಗಿ ವಾಹಿನಿಗಳಲ್ಲಿ ಪ್ರಸಾರವಾದ ದೃಶ್ಯಗಳು ತೀವ್ರ ಅಸಹ್ಯ ಮೂಡಿಸುವಂತದ್ದಾಗಿದೆ ಎಂದು ಪ್ರದೇಶ ಕಾಂಗ್ರೆಸ್ ಸಮಿತಿಉಪಾಧ್ಯಕ್ಷ ಪ್ರೊ. ಬಿ.ಕೆ.ಚಂದ್ರಶೇಖರ್ ಖೇದ ವ್ಯಕ್ತಪಡಿಸಿದ್ದಾರೆ.

`ಇದು ಪಕ್ಷಕ್ಕೆ ಸೀಮಿತವಲ್ಲ. ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರು ಮತ್ತಿತರ ಪ್ರದೇಶಗಳ ಶಿಕ್ಷಕ- ಪದವೀಧರ ಕ್ಷೇತ್ರಗಳಲ್ಲಿ ಶಿಕ್ಷಕ ಮತದಾರರಿಗೆ ಮದ್ಯಪಾನ, ಬಾಡೂಟ, ಕೈ ಗಡಿಯಾರ ಮತ್ತಿತರ ವಸ್ತುಗಳ ಆಮಿಷ ಆಳವಾಗಿ ಕೆಲಸ ಮಾಡುತ್ತಿದೆ. ನಾಚಿಕೆಯಿಲ್ಲದ ಇಂಥ ಶಿಕ್ಷಕರನ್ನು ಉಳಿಸಿಕೊಳ್ಳಬೇಕೆ?~ ಎಂದು ಪತ್ರಿಕಾ ಹೇಳಿಕೆಯಲ್ಲಿ ಪ್ರಶ್ನಿಸಿದ್ದಾರೆ. ಹೊರಬೇಕಲ್ಲವೇ?~ ಎಂದು ಅವರು ಮಾರ್ಮಿಕವಾಗಿ ಕೇಳಿದ್ದಾರೆ.

ಬ್ರಿಟಿಷರು ಅಸ್ತಿತ್ವಕ್ಕೆ ತಂದಿದ್ದ ಶಿಕ್ಷಕರ, ಪದವೀಧರರ ಕ್ಷೇತ್ರಗಳು ಇಂದಿನ ಪ್ರಜಾತಂತ್ರ ವ್ಯವಸ್ಥೆಗೆ ಬಹುತೇಕ ಅಪ್ರಸ್ತುತ. ಸಂವಿಧಾನದ ತಿದ್ದುಪಡಿ ಮೂಲಕ ಇವನ್ನು ತೆಗೆಯುವುದೇ ಸೂಕ್ತ~ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.