ಬೆಂಗಳೂರು: `ಬಿಎಂಟಿಸಿ ಘಟಕಗಳಲ್ಲಿ ಕಾರ್ಮಿಕರು ರಜೆ ಪಡೆಯಲು ಮುಂಚಿತವಾಗಿ ರಜೆ ಅರ್ಜಿ ನೀಡಿದರೆ ಅಧಿಕಾರಿಗಳು ಸ್ವೀಕರಿಸುತ್ತಿಲ್ಲ ಹಾಗೂ ಒತ್ತಾಯಪೂರ್ವಕವಾಗಿ ನೀಡಿದರೂ ಸಹ ಅದನ್ನು ರಜೆ ರಿಜಿಸ್ಟರ್ನಲ್ಲಿ ದಾಖಲು ಮಾಡುವುದಿಲ್ಲ' ಎಂದು ಕೆಎಸ್ಆರ್ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಶನ್ ಆರೋಪಿಸಿದೆ.

ಈ ಸಂಬಂಧ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಅವರಿಗೆ ಮನವಿ ಸಲ್ಲಿಸಿರುವ ಸಂಘಟನೆಯು, `ಈ ಬಗ್ಗೆ ಘಟಕದ ವ್ಯವಸ್ಥಾಪಕರನ್ನು ಪ್ರಶ್ನಿಸಿದರೆ ಹಾರಿಕೆಯ ಉತ್ತರ ನೀಡುತ್ತಾರೆ. ಡಿಪೊ ದಂಡ ಎಂದು ಕಾರ್ಮಿಕರ ವೇತನ ಚೀಟಿಯಲ್ಲಿ ರೂ100ರಿಂದ 1,500ರ ವರೆಗೆ ಕಡಿತ ಮಾಡುತ್ತಾರೆ. ದಂಡ ಹಾಕಿದ ಬಗ್ಗೆ ಆದೇಶ ಪ್ರತಿಯನ್ನೂ ಕಾರ್ಮಿಕರಿಗೆ ನೀಡುತ್ತಿಲ್ಲ' ಎಂದು ಗಮನ ಸೆಳೆದಿದೆ.

`ಕಾರ್ಮಿಕರ ಕೊರತೆ ಇದೆ ಎಂಬ ನೆಪ ಒಡ್ಡಿ ವಾಹನಗಳನ್ನು ಸರಿಯಾಗಿ ರಿಪೇರಿ ಮಾಡುತ್ತಿಲ್ಲ. ಚಾಲಕ-ನಿರ್ವಾಹಕರಲ್ಲಿ ಹೆಚ್ಚುವರಿ ಎಂಟು ತಾಸು ಕೆಲಸ ಮಾಡಿಸಿ ನಾಲ್ಕು ಗಂಟೆ ಮಾತ್ರ ಓವರ್ಟೈಂ ಕೊಡುತ್ತಿದ್ದಾರೆ. ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಕೊನೆಯೇ ಇಲ್ಲ' ಎಂದು ಸಂಘಟನೆ ದೂರಿದೆ.

`ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ಸೆಳೆದಿದ್ದರೂ ಪ್ರಯೋಜನ ಆಗಿಲ್ಲ. ತಮ್ಮ ಅಧ್ಯಕ್ಷತೆಯಲ್ಲಿ ದ್ವಿಪಕ್ಷೀಯ ಸಭೆಯನ್ನು ಕರೆದಿಲ್ಲ. ವಿಭಾಗ ನಿಯಂತ್ರಣಾಧಿಕಾರಿಗಳೂ ದ್ವಿಪಕ್ಷೀಯ ಸಭೆಯನ್ನು ನಡೆಸುತ್ತಿಲ್ಲ. ಈ ಸಮಸ್ಯೆಗಳಿಗೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು' ಎಂದು ಪ್ರಧಾನ ಕಾರ್ಯದರ್ಶಿ ಎಚ್. ವಿ. ಅನಂತಸುಬ್ಬರಾವ್ ಮನವಿಯಲ್ಲಿ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.