ಬಿಜೆಪಿ–ಶಿವಸೇನೆ ಮೈತ್ರಿ ಮುರಿದು ಬೀಳುವುದು ಬಹುತೇಕ ಖಚಿತ

7

ಬಿಜೆಪಿ–ಶಿವಸೇನೆ ಮೈತ್ರಿ ಮುರಿದು ಬೀಳುವುದು ಬಹುತೇಕ ಖಚಿತ

Published:
Updated:

ಮುಂಬೈ (ಐಎಎನ್‌ಎಸ್‌): ಬಿಜೆಪಿ ಮತ್ತು ಶಿವಸೇನೆ ನಡುವಿನ 25 ವರ್ಷಗಳ ಮೈತ್ರಿ ಮುರಿದು ಬೀಳುವುದು ಬಹುತೇಕ ಖಚಿತವಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಅಕ್ಟೋಬರ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಸ್ಥಾನ ಹಂಚಿಕೆ ವಿಚಾರದಲ್ಲಿ ಉಭಯ ಪಕ್ಷಗಳು ಒಮ್ಮತಕ್ಕೆ ಬರಲು ವಿಫಲವಾಗಿದ್ದು, ಮೈತ್ರಿ ಮುರಿದು ಬೀಳುವುದು ಬಹುತೇಕ ಖಚಿತ ಎನ್ನಲಾಗಿದೆ.ಈಗಾಗಲೇ ಹಲವು ಸುತ್ತಿನ ಮಾತುಕತೆಗಳು ವಿಫಲವಾಗಿದ್ದು, ಮೈತ್ರಿ  ಕಡಿತದ ಘೋಷಣೆ ಮಾತ್ರ ಬಾಕಿ ಉಳಿದಿದೆ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.ಅದಾಗ್ಯೂ ಶುಕ್ರವಾರ ಬೆಳಗ್ಗೆ ನಿತಿನ್‌ ಗಡ್ಕರಿ ಅವರು  ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಸ್ಥಾನ ಹೊಂದಾಣಿಕೆ ಕುರಿತು ಚರ್ಚೆ ನಡೆಸಿದ್ದಾರೆ. ಸಂಜೆ ಅಥವಾ ರಾತ್ರಿಗೆ ಮುಂಬೈಗೆ ಆಗಮಿಸಲಿರುವ ಅವರು ಸಂಧಾನ ಮಾಡಲಿದ್ದಾರೆ ಎನ್ನಲಾಗಿದೆ.ಈ ಸಂಧಾನಕ್ಕೆ ಉಭಯ ಪಕ್ಷಗಳು ಒಪ್ಪಿಗೆ ನೀಡಿದರೆ ಮಾತ್ರ ಮೈತ್ರಿ ಮುಂದುವರಿಯುವ ಸಾಧ್ಯತೆಗಳಿವೆ. ಈಗಾಗಲೇ ಎರಡು ಪಕ್ಷಗಳು ಏಕಾಂಗಿಯಾಗಿ ಸ್ಪರ್ಧಿಸಲು ಭರದ ಸಿದ್ಧತೆ ನಡೆಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry