ಶನಿವಾರ, ಜನವರಿ 18, 2020
27 °C

ಬಿಜೆಪಿ ಸರ್ಕಾರದಿಂದ ಅವಳಿ ಜಿಲ್ಲೆಗೆ ಸಂಕ್ರಾಂತಿ ಕೊಡುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: `ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆ 17,207 ಕೋಟಿ ರೂಪಾಯಿ ಕಾಮಗಾರಿಗೆ ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿರುವುದು ಐತಿಹಾಸಿಕ ನಿರ್ಧಾರ. ಅವಳಿ ಜಿಲ್ಲೆಯ ಜನತೆಗೆ ನೀಡಿದ ಸಂಕ್ರಾಂತಿಯ ಕೊಡುಗೆ ಇದು~ ಎಂದು ಬಸವನ ಬಾಗೇವಾಡಿ ಶಾಸಕ ಎಸ್.ಕೆ. ಬೆಳ್ಳುಬ್ಬಿ ಹೇಳಿದರು.ಸಮಗ್ರ ನೀರಾವರಿ ಯೋಜನೆ ಜಿಲ್ಲೆಯ ಜನತೆಯ ಕನಸಾಗಿತ್ತು. ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮೋಯಿ ಅವರ ಶ್ರಮದಿಂದ ಈ ಯೋಜನೆ ಜೀವ ಪಡೆದುಕೊಂಡಿದೆ ಎಂದು ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಮುಳವಾಡ ಗ್ರಾಮದಲ್ಲಿ ಮಾರ್ಚ್ ತಿಂಗಳಲ್ಲಿ ಬ್ರಹತ್ ಸಮಾವೇಶ ನಡೆಸಿ, ನೀರಾವರಿ ಕಾಮಗಾರಿಗೆ ರಾಜ್ಯದ ಮುಖ್ಯಮಂತ್ರಿಗಳಿಂದ ಚಾಲನೆ ನೀಡ ಲಾಗುವುದು. ಇದಕ್ಕೂ ಮುನ್ನ ಆಲಮಟ್ಟಿಯಲ್ಲಿ ಮುಖ್ಯಮಂತ್ರಿಗಳನ್ನು ಸನ್ಮಾನಿಸಿ ಬರಮಾಡಿಕೊಳ್ಳಲಾಗುವುದು ಎಂದರು.ಈ ಯೋಜನೆಗಳ ಕಾಮಗಾರಿಯನ್ನು ಕಾಲಮಿತಿಯಲ್ಲಿ ಮುಗಿಸಲು ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು. ಇಲ್ಲಿಯವರೆಗೆ ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಗುಲ್ಬರ್ಗ ಹಾಗೂ ರಾಯ ಚೂರು ಜಿಲ್ಲೆಗಳ ಜನತೆ ಲಾಭ ಪಡೆಯು ತ್ತಿದ್ದರು. ಆದರೆ, ಈ ಹಿನ್ನೀರಿನಲ್ಲಿ ಭೂಮಿ ಕಳೆದುಕೊಂಡ ನಮ್ಮ ಜಿಲ್ಲೆಯ ಜನರಿಗೆ ತ್ಯಾಗದ ಫಲ ದೊರೆತಿರಲಿಲ್ಲ. ಕೊನೆಗೂ ಸರ್ಕಾರ ಜಿಲ್ಲೆಯ ರೈತರ ಸಮಸ್ಯೆಗೆ ಸ್ಪಂದಿಸಿದೆ ಎಂದು ಹೇಳಿದರು.`ಸಿಂದಗಿ ಪಟ್ಟಣದಲ್ಲಿ ಪಾಕ್ ಧ್ವಜ ಹಾರಿಸಿದ ಶ್ರಿರಾಮ ಸೇನೆಯ ಕಾರ್ಯಕರ್ತರ ಕಾರ್ಯ ಅಕ್ಷಮ್ಯ ಅಪರಾಧ. ತಪ್ಪಿತಸ್ಥರು ಯಾವುದೇ ಧರ್ಮದವರಾಗಿರಲಿ ಶಿಕ್ಷೆಯಾಗಬೇಕು. ಇದನ್ನು ಬಿಜೆಪಿ ಪಕ್ಷವು ಕೂಡ ಸಹಿಸುವುದಿಲ್ಲ~ ಎಂದರು.ಸಿಂದಗಿ ಶಾಸಕ ರಮೇಶ ಭೂಸನೂರ ಮಾತನಾಡಿ, `ಸಿಂದಗಿ ಪಟ್ಟಣದಲ್ಲಿ ಪಾಕ್ ಧ್ವಜ ಹಾರಿಸಿದ ಶ್ರಿರಾಮ ಸೇನೆ ಸಂಘಟನೆ ದುಷ್ಕೃತ್ಯ ಖಂಡನೀಯ. ಇಂಥ ದೇಶದ್ರೋಹಿ ಕೃತ್ಯ ನಡೆಸಿದವರು ಯಾವುದೇ ಧರ್ಮದವರಾಗಿರಲಿ ಶಿಕ್ಷೆಯಾಗಬೇಕು. ಪಾಕ್ ಧ್ವಜ ಹಾರಿಸಿದವರಿಗೂ ನನಗೂ ಯಾವುದೇ ಸಂಬಂಧವಿಲ್ಲ~ ಎಂದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಕವಟಗಿ ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.

ಪ್ರತಿಕ್ರಿಯಿಸಿ (+)