ಗುರುವಾರ , ಏಪ್ರಿಲ್ 15, 2021
31 °C

ಬಿಪಾಶಾಗೆ ಮೆಚ್ಚುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಆತ್ಮ~ ಚಿತ್ರದಲ್ಲಿನ ಬಿಪಾಶಾ ಬಸು ನಟನೆ ಅವರ ಈವರೆಗಿನ ಚಿತ್ರಗಳಲ್ಲಿನ ಅತ್ಯುತ್ತಮ ನಟನೆಯಾಗಲಿದೆ ಎಂದು ನವಾಜುದ್ದೀನ್ ಸಿದ್ದಿಕಿ ಹೊಗಳಿದ್ದಾರೆ.

`ಆತ್ಮ~ ಚಿತ್ರದ ಚಿತ್ರೀಕರಣವಿನ್ನೂ ಮುಂಬೈನ ಸೆಟ್ ಒಂದರಲ್ಲಿ ನಡೆಯುತ್ತಿದೆ. ಪೂರ್ಣಗೊಳ್ಳುವ ಮುಂಚೆಯೇ ಬಿಪಾಶಾ ನಟನೆಗೆಮೆಚ್ಚುಗೆಯ ಮಾತುಗಳು ಚಿತ್ರತಂಡದಿಂದ ಕೇಳಿಬರುತ್ತಿವೆ.

ಇದೊಂದು ಮನಃಶಾಸ್ತ್ರದ ಚಿತ್ರ. ಬಿಪಾಶಾ ಬಸು ಎಂದಿಗಿಂತಲೂ ಚೆನ್ನಾಗಿ ನಟಿಸಿದ್ದಾರೆ. ನಟನೆಯಲ್ಲಿ ಅವರು ಸಾಕಷ್ಟು ಪಳಗಿದ್ದಾರೆ ಎಂಬುದು ಎಲ್ಲರ ಮೆಚ್ಚುಗೆಯ ಮಾತಾಗಿದೆ. 

ಸುಪರ್ಣ ವರ್ಮಾ ನಿರ್ದೇಶನದ ಈ ಚಿತ್ರದಲ್ಲಿ ಬಿಪಾಶಾಳೊಂದಿಗೆ ನವಾಜುದ್ದೀನ್ ಜೊತೆಯಾಗಿ ನಟಿಸುತ್ತಿದ್ದಾರೆ. ಮಹಾರಾಷ್ಟ್ರದ ಪಂಚಗನಿ ಸೇರಿದಂತೆ ಇತರ ಪ್ರದೇಶಗಳಲ್ಲಿಯೂ ಚಿತ್ರೀಕರಣ ನಡೆಯಲಿದೆಯಂತೆ. `ಕಹಾನಿ~, `ಗ್ಯಾಂಗ್ ಆಫ್ ವಾಸೀಪುರ್~ ಚಿತ್ರಗಳಲ್ಲಿ ನಟಿಸಿರುವ ನವಾಜುದ್ದೀನ್ `ಆತ್ಮ~ ಚಿತ್ರದ ಕುರಿತು ತುಂಬಾ ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.