ಬುಧವಾರ, ಮೇ 25, 2022
31 °C
ನಾಟಕೋತ್ಸವದಲ್ಲಿ ಬೀಚಿ ಪುಸ್ತಕೋತ್ಸವ

ಬೀಚಿ ಪುಸ್ತಕಗಳಿಗೆ ಮುಗಿಬಿದ್ದ ಓದುಗರು

ಸಿದ್ದಯ್ಯ ಹಿರೇಮಠ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: `ಬಳ್ಳಾರಿ ಬೀಚಿ' ಎಂದೇ ಖ್ಯಾತರಾಗಿರುವ ಹಾಸ್ಯ ಸಾಹಿತಿ, ದಿ. ರಾಯಸಂ ಭೀಮಸೇನರಾವ್ ಅವರ ಜನ್ಮ ಶತಮಾನೋತ್ಸವ ವರ್ಷಾಚರಣೆ ಅಂಗವಾಗಿ ರಂಗತೋರಣ ಸಂಸ್ಥೆಯು ನಗರದ ಜೋಳದರಾಶಿ ಡಾ.ದೊಡ್ಡನ ಗೌಡ ರಂಗ ಮಂದಿರದಲ್ಲಿ ಏರ್ಪಡಿಸಿ ರುವ ಮೂರು ದಿನಗಳ `ರಂಗ ಮುಂಗಾರು' ನಾಟಕೋತ್ಸವಕ್ಕೆ ಅಭೂತ ಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ.



ಅಂತೆಯೇ ಕಾರ್ಯಕ್ರಮ ನಡೆಯುತ್ತಿರುವ ರಂಗಮಂದಿರದ ಮುಂಭಾಗದಲ್ಲಿ `ಬೀಚಿ ಪ್ರಕಾಶನ' ಸಂಸ್ಥೆ ಪ್ರಕಟಿಸಿರುವ ಬೀಚಿ ಅವರ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟಕ್ಕೂ ಓದು ಗರು ಸಕಾರಾತ್ಮಕವಾಗಿ ಸ್ಪಂದಿಸು ತ್ತಿದ್ದಾರೆ.



`ಬೀಚಿ ಬಳ್ಳಾರಿಯವರು ಎಂಬುದೇ ಹೆಮ್ಮೆಯ ವಿಷಯ. ಈ ಹಿಂದೆ ಬಳ್ಳಾರಿ ಜಿಲ್ಲೆಗೆ ಸೇರಿದ್ದ ಹರಪನಹಳ್ಳಿಯಲ್ಲಿ ಜನಿಸಿದರೂ, ಬಳ್ಳಾರಿಯಲ್ಲೇ ತಮ್ಮ ಸೇವಾವಧಿ ಪೂರೈಸಿ, ಸಾಹಿತ್ಯ ರಚನೆಯಲ್ಲಿ ತೊಡಗಿದ್ದ ಅವರ ಜನ್ಮ ಶತಮಾನೋತ್ಸವ ಆಚರಿ ಸುತ್ತಿರುವುದು ಅಭಿನಂದನೀಯ. ಬೀಚಿ ಅವರ ಪುಸ್ತಕ ಗಳನ್ನೂ ಮಾರಾಟಕ್ಕೆ ಇರಿಸಿರುವು ದರಿಂದ ಯುವಜನತೆಗೆ ಅವರನ್ನು ಪರಿಚಯಿಸಿ ದಂತಾಗುತ್ತಿದೆ' ಎಂದು ವಿದ್ಯಾರ್ಥಿಗಳಾದ ಆರ್. ಪಿ. ಮಂಜು ನಾಥ, ಕೋಮಲಕುಮಾರ್, ವೆಂಕಟೇಶ ಮತ್ತಿತರರು ಹರ್ಷ ವ್ಯಕ್ತಪಡಿಸಿದರು.



ರಾಜ್ಯದ ಪ್ರಮುಖ ಸಾಹಿತಿಯಾಗಿರುವ ಬೀಚಿ ಅವರ ಜನ್ಮ ಶತಮಾನೋತ್ಸವವನ್ನು ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಚರಿಸುತ್ತಿದೆ.  ಸರ್ಕಾರ ರಾಜ್ಯದ ವಿವಿಧೆಡೆ ಬೀಚಿ ಜನ್ಮ ಶತಮಾನೋತ್ಸವ ಆಚರಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು ಎಂದು ರಂಗತೋರಣ ಸಂಸ್ಥೆಯ ಅಡವಿಸ್ವಾಮಿ ಕೋರಿದರು.



17 ಪುಸ್ತಕ ಲಭ್ಯ: ಬೀಚಿ ಅವರು ಕಾಲಾಂತರದಲ್ಲಿ ಬರೆದಿರುವ ಒಟ್ಟು 63 ಪುಸ್ತಕಗಳನ್ನು ಬೀಚಿ ಪ್ರಕಾಶನದಿಂದ ಪ್ರಕಟಿಸಲಾಗಿದ್ದು, ಸದ್ಯ 50 ಪುಸ್ತಕಗಳು ಲಭ್ಯವಿವೆ. ಇನ್ನೂ 13 ಪುಸ್ತಕಗಳ ಮರು ಪ್ರಕಟಣೆ ಕಾರ್ಯ ನಡೆದಿದೆ. ಬಳ್ಳಾರಿಯಲ್ಲಿ ಇರಿಸಲಾಗಿರುವ ಮಾರಾಟ ಮಳಿಗೆಯಲ್ಲಿ 17 ಪುಸ್ತಕ ಗಳು ಲಭ್ಯವಿವೆ ಎಂದು ಪ್ರಕಾಶಕ, ಬೀಚಿ ಅವರ ಮೊಮ್ಮಗ ಉಲ್ಲಾಸ್ ರಾಯಸಂ `ಪ್ರಜಾವಾಣಿ'ಗೆ ತಿಳಿಸಿದರು.



`ಮುರಿದ ಬೊಂಬೆ', `ಕಾಣದ ಸುಂದರಿ', `ಟೆಂಟ್ ಸಿನಿಮಾ', `ಸೀತೂ ಮದುವೆ', `ನಂಬರ್ 55', `ಮೇಡಂನ ಗಂಡ', `ವಾಗ್ಬಾಣಗಳು', `ನಗಿಸುವವನ ನೋವುಗಳು', `ಲೇವಡಿ ಟೈಪಿಸ್ಟ್', `ಸತ್ತವನು ಎದ್ದು ಬಂದಾಗ', `ಮನೆ ತನದ ಗೌರವ', `ಮಹಾಯುದ್ಧ', `ಗರತಿಯ ಗುಟ್ಟು', `ಸತೀ ಸೂಳೆ', `ಬೆಳ್ಳಿ ಪತ್ರಗಳು' ಮತ್ತಿತರ ಹಾಸ್ಯಭರಿತ ಪುಸ್ತಕಗಳು ಮಾರಾಟಕ್ಕಿದ್ದು, ಎರಡು ದಿನಗಳ ಅವಧಿಯಲ್ಲಿ ನೂರೈವತ್ತಕ್ಕೂ ಅಧಿಕ ಪುಸ್ತಕಗಳು ಮಾರಾಟವಾಗಿವೆ ಎಂದು ಅವರು ವಿವರಿಸಿದರು.



ಬೀಚಿ ರಚಿಸಿರುವ `ಉತ್ತರಭೂಪ', `ನನ್ನ ಭಯಾಗ್ರಫಿ' (ಆತ್ಮಕಥೆ), `ತಿಮ್ಮನ ತಲೆ', `ಬೆಳ್ಳಿ ತಿಮ್ಮ ನೂರೆಂಟು ಹೇಳಿದ' ಮತ್ತಿತರ ಪುಸ್ತಕಗಳು ಸಾಕಷ್ಟು ಸಂಖ್ಯೆ ಯಲ್ಲಿ ಮಾರಾಟವಾಗಿ ಓದುಗರ ಮೆಚ್ಚುಗೆ ಗಳಿಸಿದ್ದು, ಶೀಘ್ರದಲ್ಲೇ ಅವು ಗಳನ್ನು ಮರುಮುದ್ರಿಸಿ ಮಾರು ಕಟ್ಟೆಯಲ್ಲಿ ಲಭ್ಯವಾಗುವಂತೆ ನೋಡಿ ಕೊಳ್ಳಲಾಗುವುದು ಎಂದು  ಹೇಳಿದರು.



ಬೀಚಿ ಅವರು ರಚಿಸಿರುವ ಪುಸ್ತಕಗಳಿ ಗಾಗಿ ಆಸಕ್ತರು, ಬೀಚಿ ವಿದ್ಯಾಕೇಂದ್ರ, ನಂ.34, `ಇ' ಬ್ಲಾಕ್ ಎಕ್ಸ್‌ಟೆನ್‌ಷನ್, ಸಹಕಾರ ನಗರ, ಸ್ವಾತಿ ಗಾರ್ಡೇನಿಯಾ ಹೋಟೆಲ್ ಹಿಂಭಾಗ, ಕೋಡಿಗೆಹಳ್ಳಿ ಗೇಟ್, ಬೆಂಗಳೂರು-92, ದೂರ ವಾಣಿ ಸಂಖ್ಯೆ (080) 65560 7304, 65307999' ಈ ವಿಳಾಸ ಸಂಪರ್ಕಿಸಬಹುದು ಎಂದು ಅವರು ಮನವಿ ಮಾಡಿದರು.



ಅಂತರ್ಜಾಲ ತಾಣ www.beechi.in  ಭೇಟಿ ನೀಡಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.