ಭಾನುವಾರ, ಜನವರಿ 19, 2020
28 °C

ಬೀಡಾಡಿ ದನಕರುಗಳನ್ನು ರಕ್ಷಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಮ್ಮ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಜಾರಿಗೆ ಬಂದಿಲ್ಲ. ಆದರೂ ನಗರ ಮತ್ತು ಹಳ್ಳಿಗಳಲ್ಲಿ ದನಕರುಗಳನ್ನು ಸಾಕುವವರು ಹಲವಾರು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ನಗರಗಳಲ್ಲಿ ಹೋರಿ ಕರು ಜನಿಸಿದರೆ ಅವುಗಳ ಮಾಲೀಕರು ಅವನ್ನು ಬೀದಿಗೆ ಬಿಡುತ್ತಾರೆ. ಅವು ಹೇಗೋ ಬೆಳೆಯುತ್ತವೆ. ಇಂತಹ ಕರುಗಳು ಮತ್ತು ಮುದಿ ಹಸುಗಳು ರಸ್ತೆಗಳಲ್ಲಿ ಅಲೆಯುತ್ತಾ, ವಾಹನ ಹಾಗೂ ಜನ ಸಂಚಾರಕ್ಕೆ ಅಡ್ಡಿಮಾಡುತ್ತಿವೆ. ಇವುಗಳಿಗೆ ರಕ್ಷಣೆ ಇಲ್ಲ.ಹಳ್ಳಿಗಳಲ್ಲಿ ಗಂಡು ಕರುಗಳನ್ನು ಸಾಕಿ, ಪಳಗಿಸಿ ವ್ಯವಸಾಯಕ್ಕೆ ಬಳಸಿಕೊಳ್ಳಬಹುದಾದರೂ, ಕೆಲವು ಅನಾನುಕೂಲಗಳಿಂದ ಅವುಗಳ ಪೋಷಣೆ ಅನೇಕರಿಗೆ ಅಸಾಧ್ಯವಾಗಿದೆ. ರೈತರು ಮುದಿ ರಾಸುಗಳನ್ನು ಮಾರಾಟ ಮಾಡುವುದು ಈಗ ಸುಲಭ ಅಲ್ಲ. ಅವುಗಳನ್ನು ಸಾಕುವುದೂ ಹೊರೆಯಾಗುತ್ತಿದೆ. ಕೆಲಸಕ್ಕೆ ಬಾರದ ದನಕರುಗಳನ್ನು ನಿರ್ವಹಣೆ ಮಾಡಲು ಸರ್ಕಾರ ಏನಾದರೊಂದು ವ್ಯವಸ್ಥೆ ಮಾಡುವ ಬಗ್ಗೆ ಚಿಂತಿಸಿ ಕಾರ್ಯೋನ್ಮುಖವಾಗಬೇಕು.

 

ಪ್ರತಿಕ್ರಿಯಿಸಿ (+)