ಭಾನುವಾರ, ಜೂನ್ 20, 2021
20 °C

ಬೀದರ್ ಕೋಟೆಗೆ ಆಲ್ಬರ್ಟೊ ಟೇಲರ್ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಖ್ಯಾತ ಇತಿಹಾಸಕಾರ, ಕಾದಂಬರಿಕಾರ ಫಿಲಿಪ್ ಮೆಡೋಸ್ ಟೇಲರ್‌ನ ಮರಿಮೊಮ್ಮಗ ಆಲ್ಬರ್ಟೋ ಟೇಲರ್ ಭಾನುವಾರ ಬೀದರ್‌ನ ಐತಿಹಾಸಿಕ ಸ್ಮಾರಕಗಳಿಗೆ ಭೇಟಿ ನೀಡಿ, ಮಾಹಿತಿ ಪಡೆದರು.ಐತಿಹಾಸಿಕ ಬಹಮನಿ ಕೋಟೆಯ ಆವರಣದಲ್ಲಿ ಇರುವ ವಸ್ತುಸಂಗ್ರಹಾಲಯ, ಸೋಲಹ್ ಕಂಭ ಮಸೀದಿ ಹಾಗೂ ಮಹಮೂದ್ ಗಾವಾನ್ ಮದರಸಾಗಳಿಗೆ ತೆರಳಿ ವೀಕ್ಷಿಸಿದರು.ಹೈದರಾಬಾದ್‌ನಿಂದ ಹೊರಟು ಬಂದ ಅವರು ಭಾನುವಾರ ಬೆಳಿಗ್ಗೆ ಕೋಟೆಗೆ ಆಗಮಿಸಿದರು. ಹಿರಿಯ ವಿದ್ವಾಂಸ ಪ್ರೊ. ಬಿ.ಆರ್. ಕೊಂಡಾ ಮತ್ತು ಭಾರತೀಯ ಪುರಾತ್ವ ಇಲಾಖೆಯ ಸಂರಕ್ಷಣಾ ಅಧಿಕಾರಿ ಆನಂದತೀರ್ಥ ಅವರು ಆಲ್ಬರ್ಟೋ ಅವರಿಗೆ ಪುಷ್ಪಗುಚ್ಛ ನೀಡಿ ಬರಮಾಡಿಕೊಂಡರು. ವಿಧಾನ ಪರಿಷತ್ ಸದಸ್ಯ ಕಾಜಿ ಅರ್ಷದ್ ಅಲಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಅವರು ಆಲ್ಬರ್ಟೋ ಅವರನ್ನು ಭೇಟಿ ಮಾಡಿ ಶುಭ ಕೋರಿದರು.`ಬೀದರ್‌ನ ಐತಿಹಾಸಿಕ ಸ್ಮಾರಕಗಳನ್ನು ತಮ್ಮ ಕಲಾಕೃತಿಗಳ ಮೂಲಕ ಚಿತ್ರಿಸಿರುವ ಮೆಡೋಸ್ ಟೇಲರ್ `ನಗರ, ಕೋಟೆ ನಿರ್ಮಾಣಕ್ಕೆ ಬೀದರ್‌ನಷ್ಟು ಪ್ರಶಸ್ತವಾದ ಸ್ಥಳ ಮತ್ತೊಂದಿಲ್ಲ~ ಎಂದು ಅಭಿಪ್ರಾಯಪಟ್ಟಿದ್ದರು.ತನ್ನ ಸಾಹಿತ್ಯ ಕೃತಿ `ಕನ್‌ಫೆಷನ್ಸ್ ಆಫ್ ಥಗ್~ ಕಾದಂಬರಿಯಲ್ಲಿ ನಾಯಕ ಅಮೀರ್ ಅಲಿಯ ಮೂಲಕ ಬೀದರ್ ಕೋಟೆಯ ವರ್ಣನಾತ್ಮಕ ವಿವರ ನೀಡಿದ್ದರು. ಈ ಕಾದಂಬರಿ ಜನಪ್ರಿಯ ಆದದ್ದರಿಂದ ಯುರೋಪಿನ ಜನ ಬೀದರ್ ಬಗ್ಗೆ ಆಸಕ್ತಿ ತಳೆಯುವುದಕ್ಕೆ ಕಾರಣವಾಯಿತು ಎಂದು ಪ್ರೊ. ಕೊಂಡಾ ಅವರು ವಿವರಿಸಿದರು.ಬೀದರ್ ಜಿಲ್ಲೆಯ ಐತಿಹಾಸಿಕ, ಸಾಂಸ್ಕೃತಿಕ ಮಹತ್ವ ವಿವರಿಸಿದ ಅವರು ಜಿಲ್ಲೆಯು ಕಲ್ಯಾಣಿ ಚಾಲುಕ್ಯರು ಹಾಗೂ ಬಹಮನಿ ಸಾಮ್ರಾಜ್ಯಗಳಿಗೆ ನೆಲೆ ಒದಗಿಸಿತ್ತು. 12ನೇ ಶತಮಾನದಲ್ಲಿ ನಡೆದ ಸಾಹಿತ್ಯ, ಸಾಮಾಜಿಕ ಚಳವಳಿಯ ಬಗ್ಗೆ ಮಾಹಿತಿ ನೀಡಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.