ಬುಧವಾರ, ಏಪ್ರಿಲ್ 14, 2021
32 °C

ಬೀದಿ ರಂಪಾಟವಾದ ಪ್ರೇಮ ಪ್ರಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಯುವಪ್ರೇಮಿಗಳಿಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರಿಂದ ನಗರದ ಎಎಸ್ಪಿ ಕಚೇರಿ ಆವರಣದಲ್ಲಿಯೇ ಪೊಲೀಸರ ಸಮ್ಮುಖದಲ್ಲೇ ರಂಪಾಟ, ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಪ್ರಸಂಗ ಬುಧವಾರ ನಡೆಯಿತು.ಪ್ರಕರಣದ ವಿವರ: ಹೊಳಲ್ಕೆರೆ ತಾಲ್ಲೂಕಿನ ಚನ್ನಸಮುದ್ರದ ಮಹೇಶ್ (21) ಮತ್ತು ಹೊಸಹಟ್ಟಿ ಗ್ರಾಮದ ಶ್ರುತಿ (19) ನಡುವೆ ಪ್ರೇಮಾಂಕುರವಾಗಿತ್ತು.ಮಹೇಶ್ ಹೊಸದುರ್ಗ ತಾಲ್ಲೂಕಿನ ಮಲ್ಲಪ್ಪನಹಳ್ಳಿಯ ಕಾಲೇಜಿನಲ್ಲಿ ಐಟಿಐ ಮತ್ತು ಅದೇ ಗ್ರಾಮದಲ್ಲಿ ಶ್ರುತಿ ಪಿಯು ಓದುತ್ತಿದ್ದಾಗ ಇಬ್ಬರ ನಡುವೆ ಸ್ನೇಹ ಬೆಳೆದು ನಂತರ ಪ್ರೇಮಕ್ಕೆ ತಿರುಗಿತ್ತು.ಪ್ರೇಮ ಪ್ರಕರಣದ ವಿಷಯ ಶ್ರುತಿ ಪೋಷಕರಿಗೆ ತಿಳಿದು ಮತ್ತೊಂದು ಮದುವೆ ಮಾಡಲು ಮುಂದಾದರು.ಈ ವಿಷಯ ತಿಳಿದು ಮಂಗಳವಾರ ಪ್ರೇಮಿಗಳು ಕಡೂರು ಬಳಿಯ ದೇವಸ್ಥಾನವೊಂದರಲ್ಲಿ ಮದುವೆಯಾದರು.ಗುರುವಾರ ಪಿಯು ಪರೀಕ್ಷೆ ಇರುವ ಹಿನ್ನೆಲೆಯಲ್ಲಿ ಬುಧವಾರ ನಗರಕ್ಕೆ ಆಗಮಿಸಿ, ಪೊಲೀಸರ ರಕ್ಷಣೆ ಕೋರಿದರು. ಇದೇ ಸಂದರ್ಭದಲ್ಲಿ ಮದುವೆ ನೋಂದಣಿ ಮಾಡಿಸಲು ಉದ್ದೇಶಿಸಿದ್ದರು.ಎಎಸ್‌ಪಿ ಚೇತನಸಿಂಗ್ ರಾಠೋಡ್ ಅವರ ಕಚೇರಿಗೆ ಇಬ್ಬರು ತೆರಳಿ ತಮಗೆ ರಕ್ಷಣೆ ನೀಡುವಂತೆ ಕೋರಿದರು. ಈ ವಿಷಯ ತಿಳಿದ ಯುವತಿಯ ತಂದೆ-ತಾಯಿಗಳು ಹಾಗೂ ಸಂಬಂಧಿಕರು ಸ್ಥಳಕ್ಕೆ ಆಗಮಿಸಿ ಮಹೇಶ್ ಜತೆ ವಾಗ್ವಾದ ನಡೆಸಿದರು. ಈ ಸಂದರ್ಭದಲ್ಲಿ ಬಿರುಸಿನ ಮಾತಿನ ಚಕಮಕಿ, ಕೈಕೈಮಿಲಾಯಿಸುವ ಹಂತಕ್ಕೆ ತಲುಪಿದವು. ಅಂತಿಮವಾಗಿ ಪೊಲೀಸರು ಮಧ್ಯಪ್ರವೇಶಿಸಿ ಶ್ರುತಿ ಮತ್ತು ಮಹೇಶ್ ಅವರ ಹೇಳಿಕೆಗಳನ್ನು ಪಡೆದುಕೊಂಡರು.‘ನನಗೆ ಮಹೇಶ್ ಒಪ್ಪಿಗೆಯಾಗಿದ್ದಾನೆ. ನಾನು ಆತನ ಜತೆ ಬಾಳುತ್ತೇನೆ’ ಎಂದು ಶ್ರುತಿ ಪೊಲೀಸರ ಮುಂದೆ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಶ್ರುತಿ ಪೋಷಕರಿಗೆ ಬುದ್ಧಿವಾದ ಮತ್ತು ಎಚ್ಚರಿಕೆ ನೀಡಿ ಕಳುಹಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.