ಬೆಂಗಳೂರು: ಕರ್ನಾಟಕ ಬುಲ್ಸ್ ತಂಡದವರು ಇಲ್ಲಿ ನಡೆಯುತ್ತಿರುವ ಇಂಡಿಯನ್ ವಾಲಿ ಲೀಗ್ (ಐವಿಎಲ್)ನ ನಾಲ್ಕನೇ ಪಂದ್ಯದಲ್ಲಿ ಮತ್ತೆ ಸೋಲು ಕಂಡರು.

ಇಲ್ಲಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮರಾಠಾ ವಾರಿಯರ್ಸ್ ತಂಡ 17-25, 25-23, 26-24, 25-23ಪಾಯಿಂಟ್ಗಳಿಂದ ಕರ್ನಾಟಕ ಬುಲ್ಸ್ ತಂಡವನ್ನು ಮಣಿಸಿತು. ಐವಿಎಲ್ನ ಮೊದಲ ಆವೃತ್ತಿಯಲ್ಲಿ ಕರ್ನಾಟಕ ತಂಡಕ್ಕೆ ಇದುವರೆಗೂ ಒಂದು ಪಂದ್ಯವನ್ನು ಗೆಲ್ಲಲು ಸಾಧ್ಯವಾಗಿಲ್ಲ.

ಈ ಲೀಗ್ನ ಮೊದಲ ಪಂದ್ಯದಲ್ಲಿ ಯಾನಂ ಟೈಗರ್ಸ್ ತಂಡದ ವಿರುದ್ಧವೂ, ಎರಡನೇ ಪಂದ್ಯದಲ್ಲಿ ಚೆನ್ನೈ ಸ್ಪೈಕರ್ಸ್ ವಿರುದ್ಧ ಹಾಗೂ ಮುರನೇ ಪಂದ್ಯದಲ್ಲಿ ಹೈದರಾಬಾದ್ ಜಾರ್ಜರ್ಸ್ ವಿರುದ್ಧ ಸೋಲು ಕಂಡಿದ್ದರು.

ಸರ್ವಿಸ್ನಲ್ಲಿ ಮಾಡಿದ ತಪ್ಪುಗಳಿಗೆ ಆತಿಥೇಯ ತಂಡದ ಆಟಗಾರರು ಭಾರಿ ಬೆಲೆ ತೆರಬೇಕಾಯಿತು.
ಇದೇ ಲೀಗ್ನ ಇತರ ಪಂದ್ಯಗಳಲ್ಲಿ ಯಾನಂ ಟೈಗರ್ಸ್ ತಂಡ 20-25, 25-19, 25-21, 25-22 ಪಾಯಿಂಟ್ಗಳಿಂದ ಹೈದರಾಬಾದ್ ಚಾರ್ಜರ್ಸ್ ತಂಡವನ್ನು ಮಣಿಸಿತು.

ಇನ್ನೊಂದು ಪಂದ್ಯದಲ್ಲಿ ಕೇರಳ ಕಿಲ್ಲರ್ಸ್ ತಂಡ 25-21, 25-23, 25-18ಪಾಯಿಂಟ್ಗಳಲ್ಲಿ ಚೆನ್ನೈ ಸ್ಪೈಕರ್ಸ್ ತಂಡವನ್ನು ಮಣಿಸಿತು.

ಹೊಂದಾಣಿಕೆಯ ಆಟ ಕೇರಳ ಕಿಲ್ಲರ್ಸ್ ತಂಡಕ್ಕೆ ಗೆಲುವು ತಂದುಕೊಟ್ಟಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.