ಸೋಮವಾರ, ಜನವರಿ 20, 2020
17 °C

ಬೆಳಗಾವಿ ಪಾಲಿಕೆ:ಆಡಳಿತಾಧಿಕಾರಿ ನೇಮಕ ತಡೆಗೆ ಕೋರ್ಟ್ ನಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ:  ಬೆಳಗಾವಿ ನಗರ ಪಾಲಿಕೆಗೆ ಆಡಳಿತಾಧಿಕಾರಿ ನೇಮಕ ಮಾಡಿ ರುವುದಕ್ಕೆ ಮಧ್ಯಂತರ ತಡೆ ನೀಡಬೇಕೆಂಬ ಅರ್ಜಿಯನ್ನು ಹೈಕೋರ್ಟಿನ ಸಂಚಾರಿ ಪೀಠ ಗುರುವಾರ ತಿರಸ್ಕರಿಸಿತು.ನ್ಯಾಯಮೂರ್ತಿ ಅಜಿತ್ ಗುಂಜಾಳ್ ಅವರ ಏಕಸದಸ್ಯ ಪೀಠವು, ಸಂಜೀವ್ ಪ್ರಭು ಮತ್ತು ದೀಪಕ್ ವಘೇಲಾ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ತಿರಸ್ಕರಿಸಿತು. ಬೆಳಗಾವಿ ನಗರ ಪಾಲಿಕೆಯ ಆಡಳಿತ ಮಂಡಳಿಯನ್ನು ಮುಂದುವರಿಸಬೇಕು ಹಾಗೂ ಆಡಳಿತಾಧಿಕಾರಿ ನೇಮಕಾತಿಗೆ ಮಧ್ಯಂತರ ತಡೆಯಾಜ್ಞೆ ನೀಡಬೇಕು ಎಂಬುದಾಗಿ ಅರ್ಜಿದಾರರು ಮನವಿ ಮಾಡಿದ್ದರು.

 

ಪ್ರತಿಕ್ರಿಯಿಸಿ (+)