ಕಾರವಾರ: ‘ರಾಷ್ಟ್ರೀಯ ಹೆದ್ದಾರಿ– 17 ವಿಸ್ತರಣೆ ಯೋಜನೆಗೆ ಸಂಬಂಧಿಸಿದಂತೆ ಬೈಪಾಸ್ ರಸ್ತೆ ಬಗ್ಗೆ ಕೆಲವರು ತಪ್ಪು ಮಾಹಿತಿ ನೀಡಿ ಜನರನ್ನು ದಾರಿತಪ್ಪಿಸುತ್ತಿದ್ದು, ಇದಕ್ಕೆ ಯಾರೂ ಕಿವಿಗೊಡ ಬಾರದು’ ಎಂದು ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ವಿರೋಧಿ ಹೋರಾಟಗಾರರ ಸಮಿತಿ ಆಗ್ರಹಿಸಿದೆ.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹೋರಾಟ ಸಮಿತಿಯ ಸದಸ್ಯ ಮಾಧವ ನಾಯಕ, ‘ಕೆಲವರು ಬೈಪಾಸ್ ರಸ್ತೆ ತಾಲ್ಲೂಕಿನ ಸುಂಕೇರಿ, ಕಡವಾಡ, ಮಕೇರಿಯ ಜನವಸತಿ ಪ್ರದೇಶಗಳಿಂದಲೇ ಹಾದುಹೋಗುತ್ತದೆ ಎಂದು ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಒಂದು ತುದಿಯಲ್ಲಿ ಜನರ ಮನೆ ಉಳಿಸಿ ಮತ್ತೊಂದು ತುದಿಯಲ್ಲಿ ಜನರ ಮನೆಗಳ ಮೇಲಿಂದ ಹೆದ್ದಾರಿ ಹೋಗಬೇಕು ಎನ್ನುವ ಉದ್ದೇಶ ಸಮಿತಿಗಿಲ್ಲ. ಜನರಿಗೆ ಆಗುವ ಹಾನಿಯನ್ನು ತಪ್ಪಿಸುವ ಸಲುವಾಗಿಯೇ ನಿರ್ಜನ ಪ್ರದೇಶದಲ್ಲಿ ಹೆದ್ದಾರಿ ನಿರ್ಮಿಸಬೇಕು ಎಂದು ಸಮಿತಿ ಹೋರಾಟ ನಡೆಸುತ್ತಿದೆ’ ಎಂದು ಸ್ಪಷ್ಟಪಡಿಸಿದರು.

ಸಿವಿಲ್ ಎಂಜಿನಿಯರ್ ಪ್ರೀತಂ ಮಾಸೂರಕರ್ ಮಾತನಾಡಿ, ‘ಇದ್ದ ರಸ್ತೆಯಲ್ಲಿಯೇ ಹೆದ್ದಾರಿ ವಿಸ್ತರಿಸಿದರೆ ಸುಮಾರು ₨ 350 ಕೋಟಿ ಖರ್ಚಾಗಲಿದೆ. ಇದರ ಬದಲು, ತಾಲ್ಲೂಕಿನ ಹೈದರಾಘಾಟ್ ರಸ್ತೆಯಿಂದ ಬೈಪಾಸ್ ನಿರ್ಮಿಸುವುದರಿಂದ 7–8 ಸಣ್ಣ ಸೇತುವೆಗಳು ಸೇರಿ ಕೇವಲ ₨ 230 ಕೋಟಿ ವೆಚ್ಚ ತಗುಲಿದೆ. ಆದರೆ, ಹೆದ್ದಾರಿ ಪ್ರಾಧಿಕಾರ ಬೈಪಾಸ್ ಬಗ್ಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುತ್ತಿದೆ’ ಎಂದು ದೂರಿದರು.

ವಕೀಲ ಕೆ.ಆರ್. ದೇಸಾಯಿ ಮಾತನಾಡಿ, ‘2013ರಲ್ಲಿ ತಿದ್ದುಪಡಿ ತಂದಿರುವ 1894ರ ಭೂ ಸ್ವಾಧೀನ ಕಾಯ್ದೆ ಪ್ರಕಾರ ಪ್ರಸ್ತುತ ಶೇ 100 ರಷ್ಟು ನಷ್ಟ ಭರ್ತಿ ಮಾಡಬೇಕು ಅಂತಿದೆ. ಆದರೆ, ಹೆದ್ದಾರಿ ಪ್ರಾಧಿಕಾರವನ್ನು ಈ ಕಾಯ್ದೆಯ ವ್ಯಾಪ್ತಿಗೆ ಸೇರಿಸಿಲ್ಲ. ಹೀಗಾಗಿ ಹೆದ್ದಾರಿಗಾಗಿ ಭೂ ಸ್ವಾಧೀನ ನಡೆಸಿದರೆ, ನಿರಾಶ್ರಿತರಿಗೆ ಶೇ 1 ಭಾಗದಷ್ಟು ಪರಿಹಾರ ಸಿಗುವುದಿಲ್ಲ. ಅದಕ್ಕಾಗಿ ಎಲ್ಲಾ ರೀತಿಯ ಭೂ ಸ್ವಾಧೀನಕ್ಕೂ ಸಮಾನ ಪರಿಹಾರ ನೀಡಬೇಕು ಎಂದು ಕಾನೂನು ಹೋರಾಟ ನಡೆಸಲಾಗುತ್ತಿದೆ. ಇದರಲ್ಲಿ ಜಯ ಸಾಧಿಸಿದರೆ, ಇದೊಂದು ಐತಿಹಾಸಿಕ ತೀರ್ಪು ಆಗಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.