ಬುಧವಾರ, ಜೂನ್ 23, 2021
29 °C

ಬ್ರಾಹ್ಮಣರಿಗೆ ಪ್ರತ್ಯೇಕ ಪಂಕ್ತಿ ಅಗತ್ಯವೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇತ್ತೀಚೆಗೆ ನಮ್ಮೂರಿನ ದೇವಸ್ಥಾನದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಕ್ಕೆ ಹೋಗಿದ್ದೆ. ಊಟದ ಸಮಯದಲ್ಲಿ ಸಂಘಟಕರು ನನ್ನನ್ನು ಕರೆದು `ಬ್ರಾಹ್ಮಣರಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಿದ್ದೇವೆ. ನೀವು ಅಲ್ಲಿಗೆ ಬರಬೇಕು~ ಎಂದರು.ನಾನು ಒಪ್ಪಲಿಲ್ಲ. ಸಾರ್ವಜನಿಕ ಭೋಜನವನ್ನು ಮಾಡಿದೆ. ಈಗ ಒಂದು ಪ್ರಶ್ನೆ, ದೇವಸ್ಥಾನದಲ್ಲಿ ಅಥವಾ ಜಾತ್ರೆ ಇತ್ಯಾದಿ ಧಾರ್ಮಿಕ ಸಮಾರಂಭದಲ್ಲಿ ಬ್ರಾಹ್ಮಣರಿಗೆಂದು ಪ್ರತ್ಯೇಕ ಭೋಜನ ವ್ಯವಸ್ಥೆಯನ್ನು ಮಾಡುವುದು ಯಾಕೆ? ಇದರ ಅಗತ್ಯ ಇದೆಯೇ? ಈ ಕಂಪ್ಯೂಟರ್ ಯುಗದಲ್ಲೂ ಇಂತಹ ಅಸಂಬದ್ಧ ಆಚರಣೆಗಳು ಮುಂದುವರಿಯುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಇದನ್ನು ಬ್ರಾಹ್ಮಣರಾದರೂ ವಿರೋಧಿಸಬಾರದೇ? 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.