ಮಂಗಳವಾರ, ಜೂನ್ 22, 2021
29 °C

ಭಾರತಕ್ಕೆ ಕಲ್ಲಿದ್ದಲು ರಫ್ತು ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೆಲ್ಬರ್ನ್ (ಪಿಟಿಐ): ಭಾರತಕ್ಕೆ ರಫ್ತು ಮಾಡುತ್ತಿರುವ ಕಲ್ಲಿದ್ದಲಿನ ಪ್ರಮಾಣವನ್ನು ಹೆಚ್ಚಿಸಲು ಆಸ್ಟ್ರೇಲಿಯಾ ಚಿಂತನೆ ನಡೆಸಿದೆ ಎಂದು ಆಸ್ಟ್ರೇಲಿಯಾ ರಿಸರ್ವ್ ಬ್ಯಾಂಕ್ ಆರ್ಥಿಕ ಸಮಿತಿಯ ಸಂಶೋಧನೆಯು ಹೇಳಿದೆ.ಕಲ್ಲಿದ್ದಲು ಆಮದು ಮಾಡಿಕೊಳ್ಳುವ ಜಗತ್ತಿನ 3ನೇ ಅತಿದೊಡ್ಡ ರಾಷ್ಟ್ರ ಹಾಗೂ  ಆಸ್ಟ್ರೇಲಿಯಾದಿಂದ ಅತಿ ಹೆಚ್ಚು ಕಲ್ಲಿದ್ದಲು ರಫ್ತು ಆಗುವ ಎರಡನೇ ದೇಶ ಭಾರತವಾಗಿದೆ. ಇಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಬ್ಬಿಣದ ಅದಿರಿನ ಸಂಗ್ರಹವಿದೆ.ಉಕ್ಕು ಉತ್ಪಾದಕರು ಅಗತ್ಯವಾದಷ್ಟು ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳುತ್ತಿದ್ದು, ಇದರಲ್ಲಿ ಆಸ್ಟ್ರೇಲಿಯಾದ ಪಾಲು ಅತಿಹೆಚ್ಚು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.