ಶುಕ್ರವಾರ, ಮೇ 14, 2021
21 °C

ಭಾರತೀಯರಿಗೆ ಇ-ಮೇಲ್ ಆಪ್ತ..!

ಸೂರ್ಯ ವಜ್ರಾಂಗಿ Updated:

ಅಕ್ಷರ ಗಾತ್ರ : | |

ಲಾಗಿನ್

ಫೇಸ್‌ಬುಕ್, ಟ್ವಿಟ್ಟರ್, ಆರ್ಕುಟ್, ಲಿಂಕ್ಡ್‌ಇನ್ ಸೇರಿದಂತೆ ಹಲವು ಸಾಮಾಜಿಕ ತಾಣಗಳು ಈಗ ಇಂಟರ್‌ನೆಟ್‌ನ ಸಂವಹನದ ಮಾಧ್ಯಮವಾಗಿ ಜನಪ್ರಿಯತೆಯ ಉತ್ತುಂಗದಲ್ಲಿ ಇರಬಹುದು. ಜಗತ್ತಿನಾದ್ಯಂತ ಇರುವ ಇಂಟರ್‌ನೆಟ್ ಬಳಕೆದಾರರು ಈ ತಾಣಗಳ ಮೂಲಕ ಅಂತರ್ಜಾಲದಲ್ಲಿ ಪರಿಣಾಮಕಾರಿಯಾಗಿ ಸಂವಹನವನ್ನೂ ನಡೆಸುತ್ತಿರಬಹುದು.ಆದರೆ, ಭಾರತೀಯರ ವಿಷಯಕ್ಕೆ ಬಂದಾಗ ಈ ಅಭಿಪ್ರಾಯ ಸ್ವಲ್ಪ ಬದಲಾಗುತ್ತದೆ.

ಭಾರತೀಯರಿಗೆ ಸಾಮಾಜಿಕ ತಾಣಗಳಿಗಿಂತ `ಇ-ಮೇಲ್~ ಅತ್ಯಂತ ಜನಪ್ರಿಯ ಇಂಟರ್‌ನೆಟ್ ಸಂವಹನ ಮಾಧ್ಯಮ! ಜಾಗತಿಕ ಮಟ್ಟದಲ್ಲಿ ಅಧ್ಯಯನ ನಡೆಸುವ ಸಂಸ್ಥೆಯಾದ ಇಪ್ಸೊಸ್ ನಡೆಸಿರುವ ಸಮೀಕ್ಷೆ ಈ ವಿಷಯ ಬಹಿರಂಗ ಪಡಿಸಿದೆ.ದೇಶದ ಒಟ್ಟು ಇಂಟರ್‌ನೆಟ್ ಬಳಕೆದಾರರಲ್ಲಿ ಶೇ 68 ಜನರು ಇನ್ನೂ `ಇ-ಮೇಲ್~ಗಳನ್ನು ಕಳುಹಿಸುವುದರ ಮತ್ತು ಸ್ವೀಕರಿಸುವುದರ ಮೂಲಕ ಇಂಟರ್‌ನೆಟ್‌ನಲ್ಲಿ ಸಂವಹನ ನಡೆಸುತ್ತಾರೆ. ಉಳಿದವರು ಸಂವಹನಕ್ಕಾಗಿ ಸಾಮಾಜಿಕ ತಾಣಗಳ ಮೊರೆ ಹೋಗುತ್ತಿದ್ದಾರೆ ಎಂದು ಇಪ್ಸೊಸ್‌ನ ಸಮೀಕ್ಷೆ ಹೇಳಿದೆ.ಭಾರತ ಸೇರಿ ಒಟ್ಟು 24 ರಾಷ್ಟ್ರಗಳಲ್ಲಿ ಕಳೆದ ಫೆಬ್ರುವರಿಯಲ್ಲಿ ಈ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆಗಾಗಿ ಒಟ್ಟು 19,216 ಜನರನ್ನು ಇಪ್ಸೊಸ್ ಸಂದರ್ಶಿಸಿದೆ. `ಇತ್ತೀಚಿನ ವರ್ಷಗಳಲ್ಲಿ ಭಾರತೀಯರು ಹೆಚ್ಚು ಹೆಚ್ಚಾಗಿ `ಇ-ಮೇಲ್~ ಬಳಸುತ್ತಿದ್ದಾರೆ. ಆದರೆ, ಚೀನಾದಂತಹ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತವು ಈ ವಿಚಾರಲ್ಲಿ ತುಂಬಾ ಹಿಂದೆ ಇದೆ~ ಎಂದು ಇಪ್ಸೊಸ್‌ನ ಭಾರತದ ಮಾರುಕಟ್ಟೆ ಮತ್ತು ಸಂವಹನ ವಿಭಾಗದ ಮುಖ್ಯಸ್ಥ ವಿಶ್ವರೂಪ್ ಬ್ಯಾನರ್ಜಿ ಹೇಳಿದ್ದಾರೆ.ಭಾರತದಲ್ಲಿ ಕೇವಲ ಶೇ 25ರಷ್ಟು ಬಳಕೆದಾರರು ಇಂಟರ್‌ನೆಟ್ ಮೂಲಕ ಮಾತನಾಡಲು ವಾಯ್ಸ-ಓವರ್ ಐಪಿ (ವಿಒಐಪಿ) ಬಳಸುತ್ತಾರೆ ಎಂಬ ಸಂಗತಿಯೂ ಸಮೀಕ್ಷೆಯಿಂದ ಗೊತ್ತಾಗಿದೆ. ಅಚ್ಚರಿಯ ಸಂಗತಿಯೆಂದರೆ ಅಂತರ್ಜಾಲದ ಮೂಲಕ ಸಂವಹನ ಮಾಡುವ ವಿಚಾರದಲ್ಲಿ ಭಾರತದಲ್ಲಿ ಕಂಡು ಬಂದಿರುವ ಪ್ರವೃತ್ತಿಗೂ, ಜಾಗತಿಕ ಮಟ್ಟದ ಚಿತ್ರಣಕ್ಕೂ ಸಾಕಷ್ಟು ಸಾಮ್ಯತೆ ಇರುವುದು.ಸಮೀಕ್ಷೆ ನಡೆಸಲಾಗಿರುವ 24 ರಾಷ್ಟ್ರಗಳ ಶೇ 85ರಷ್ಟು ಜನರು `ಇ- ಮೇಲ್~ ಗಳಿಗಾಗಿಯೇ ಇಂಟರ್‌ನೆಟ್‌ನನ್ನು ಬಳಸುತ್ತಿದ್ದಾರೆ. ಆದರೆ, ಜಾಗತಿಕ ಮಟ್ಟದಲ್ಲಿ ನೋಡುವುದಾದರೆ ಶೇ 60ರಷ್ಟು ಇಂಟರ್‌ನೆಟ್ ಬಳಕೆದಾರರು ಸಾಮಾಜಿಕ ಸಂವಹನ ತಾಣಗಳಿಗಾಗಿ ಇಂಟರ್‌ನೆಟ್ ಬಳಸುತ್ತಾರೆ. ಆದರೆ ವಾಯ್ಸ -ಓವರ್ ಐ.ಪಿ ಬಳಸಲು ಹತ್ತು ಜನರಲ್ಲಿ ಒಬ್ಬರಷ್ಟೇ ಇಂಟರ್‌ನೆಟ್ ಮೊರೆ ಹೋಗುತ್ತಿದ್ದಾರೆ ಎಂಬ ಮಾಹಿತಿಯೂ ಸಮೀಕ್ಷೆಯ ವರದಿಯಲ್ಲಿ ಉಲ್ಲೇಖವಾಗಿದೆ.ಮಾಹಿತಿ ತಂತ್ರಜ್ಞಾನ ಉದ್ಯಮದ ಅಂದಾಜಿನ ಪ್ರಕಾರ, 2012ರ ವೇಳೆಗೆ ಭಾರತದ ಇಂಟರ್‌ನೆಟ್ ಬಳಕೆದಾರರ ಸಂಖ್ಯೆ 10.36 ಕೋಟಿಗೆ, 2015ರ ವೇಳೆಗೆ 22.16 ಕೋಟಿಗೆ ಏರಿಕೆಯಾಗುವ ನಿರೀಕ್ಷೆ ಇದೆ. ಸ್ಮಾರ್ಟ್‌ಪೋನ್‌ಗಳಲ್ಲೂ ಇಂಟರ್‌ನೆಟ್ ಸಂಪರ್ಕ ಸಾಧ್ಯವಿರುವುದರಿಂದ ಇ-ಮೇಲ್, ಸಾಮಾಜಿಕ ತಾಣಗಳೂ ಸೇರಿದಂತೆ ಇಂಟರ್‌ನೆಟ್ ಸಂವಹನ ಮಾಧ್ಯಮಗಳ ಬಳಕೆ ಇನ್ನಷ್ಟು ಹೆಚ್ಚಲಿದೆ ಎಂದು ಅಭಿಪ್ರಾಯ ಪಡುತ್ತಾರೆ ಬ್ಯಾನರ್ಜಿ.ಇಪ್ಸೊಸ್ ಸ್ಮಾರ್ಟ್ ಫೋನ್‌ಗಳ ಬಗ್ಗೆ ನಡೆಸಿರುವ ಇನ್ನೊಂದು ಸಮೀಕ್ಷೆ ಇದಕ್ಕೆ ಪೂರಕವಾದ ಮಾಹಿತಿಯನ್ನೇ ನೀಡಿದೆ. ಈ ಸಮೀಕ್ಷೆ ಪ್ರಕಾರ, ದೇಶದಲ್ಲಿ ಸುಮಾರು 4 ಕೋಟಿ ಬಳಕೆದಾರರು ಸ್ಮಾರ್ಟ್‌ಪೋನ್‌ಗಳ ಮೂಲಕ ಇಂಟರ್‌ನೆಟ್ ಬಳಸುತ್ತಿದ್ದಾರೆ. ಶೇ 56ರಷ್ಟು ಸ್ಮಾರ್ಟ್‌ಫೋನ್ ಬಳಕೆದಾರರು ಪ್ರತಿದಿನ ಹಲವು ಬಾರಿ ತಮ್ಮ ಫೋನ್‌ಮೂಲಕ ಇಂಟರ್‌ನೆಟ್‌ನಲ್ಲಿ ಜಾಲಾಡುತ್ತಾರೆ. ಇಂಟರ್‌ನೆಟ್ ಸಂಪರ್ಕಕ್ಕಾಗಿ ಸ್ಮಾರ್ಟ್‌ಫೋನ್‌ ಗಳನ್ನು ಬಳಸದವರು ಶೇ 6ರಷ್ಟು ಜನರು ಮಾತ್ರ.ಕುತೂಹಲಕಾರಿ ಸಂಗತಿ ಎಂದರೆ, ಫೇಸ್‌ಬುಕ್ ಸೇರಿದಂತೆ ಇತರ ಕೆಲವು ಜನಪ್ರಿಯ ಸಾಮಾಜಿಕ ತಾಣಗಳು, ಬ್ಲಾಗ್‌ಗಳು ಅಮೆರಿಕದಲ್ಲಿ ಆರಂಭಗೊಂಡಿದ್ದಾದರೂ ಅಲ್ಲಿ ಇವುಗಳ ಶೇಕಡಾವಾರು ಬಳಕೆದಾರರ ಪ್ರಮಾಣ ಕಡಿಮೆ. ಅಮೆರಿಕದಲ್ಲಿ ಹತ್ತು ಜನರಲ್ಲಿ ಆರು ಮಂದಿಯಷ್ಟೇ ಸಂವಹನಕ್ಕಾಗಿ ಸಾಮಾಜಿಕ ತಾಣಗಳನ್ನು ಬಳಸುತ್ತಾರೆ ಎಂದೂ ಹೇಳುತ್ತಾರೆ ಬ್ಯಾನರ್ಜಿ.ಒಟ್ಟು 24 ರಾಷ್ಟ್ರಗಳಲ್ಲಿ ನಡೆಸಲಾದ ಈ ಸಮೀಕ್ಷೆಯಲ್ಲಿ ಜಪಾನ್ ಕೊನೆಯ ಸ್ಥಾನದಲ್ಲಿದೆ. ಅಲ್ಲಿ ಶೇ 35ರಷ್ಟು ಜನರು ಮಾತ್ರ ಸಾಮಾಜಿಕ ಸಂವಹನ ತಾಣಗಳಲ್ಲಿ ತೊಡಗಿಸಿಕೊಂಡಿದ್ದಾರೆ.ಗೂಗಲ್‌ನಿಂದ `ಅಕೌಂಟ್ ಆಕ್ಟಿವಿಟಿ~ ಸೇವೆ

ಜನಪ್ರಿಯ ಅಂತರ್ಜಾಲ ಶೋಧ ತಾಣ ಗೂಗಲ್ `ಅಕೌಂಕ್ ಆಕ್ಟಿವಿಟಿ~ ಎಂಬ ಹೊಸ ಸೇವೆ ಆರಂಭಿಸಿದೆ. ಜಿ-ಮೇಲ್, ಯೂಟ್ಯೂಬ್ ಸೇರಿದಂತೆ ಗೂಗಲ್ ಮಾಲೀಕತ್ವದ ಎಲ್ಲಾ ವೆಬ್‌ಸೈಟ್‌ಗಳ ಬಳಕೆದಾರರು ನಡೆಸಿರುವ ಚಟುವಟಿಕೆಗಳನ್ನು ದಾಖಲಿಸಿ/ ಸಂಕಲಿಸಿ ಬಳಕೆದಾರರಿಗೆ ಮಾಹಿತಿ ಒದಗಿಸುವ ಸೇವೆ ಇದು.ಗೂಗಲ್ ಸಂಸ್ಥೆ ತನ್ನ ಬಳಕೆದಾರನಿಗೆ `ಅಕೌಂಟ್ ಆಕ್ಟಿವಿಟಿ~ ಮೂಲಕ ಪ್ರತಿ ತಿಂಗಳೂ ಆತ ನಡೆಸಿರುವ ಚಟುವಟಿಕೆಗಳ ಮಾಹಿತಿ ಒದಗಿಸಲಿದೆ. ಬಳಕೆದಾರರು ಆನ್‌ಲೈನ್‌ನಲ್ಲಿ ತಾವು ನಡೆಸಿರುವ ಚಟುವಟಿಕೆಗಳ ವಿವರಗಳನ್ನು ಸ್ವತಃ ತಿಳಿಯಲು ಈ ಸೇವೆ ಸಹಕಾರಿ ಯಾಗಲಿದೆ ಎಂದು ಗೂಗಲ್ ಹೇಳಿದೆ.ಬಳಕೆದಾರನೊಬ್ಬ ಅಕೌಂಟ್ ಆಕ್ಟಿವಿಟಿ ಸೇವೆಗೆ ಲಾಗಿನ್ ಆದರೆ, ಪ್ರತಿ ತಿಂಗಳು ನಾವು ಆತನಿಗೆ ಪಾಸ್‌ವರ್ಡ್ ನಿಂದ ಸುರಕ್ಷಿತವಾದ ವರದಿಯ ಲಿಂಕ್ ಒಂದನ್ನು ಕಳುಹಿಸುತ್ತೇವೆ. ಅದರಲ್ಲಿ ಆತ ಗೂಗಲ್‌ನ ವಿವಿಧ ವೆಬ್‌ಸೈಟ್‌ಗಳಿಗೆ ಲಾಗಿನ್ ಆಗಿ ನಡೆಸಿದ ಚಟುವಟಿಕೆಗಳ ವಿವರಗಳು ಇರುತ್ತವೆ ಎಂದು ಹೇಳುತ್ತಾರೆ ಗೂಗಲ್‌ನ ಪ್ರೊಡಕ್ಟ್ ಮ್ಯಾನೇಜರ್ ಆಂಡ್ರಿಯಸ್ ಟ್ವೆರ್ಕ್.ತಮ್ಮ ಖಾತೆಗಳಲ್ಲಿ ನಡೆದಿರುವ ಚಟುವಟಿಕೆಗಳ ಕುರಿತಾಗಿ ವಿವರಗಳಿದ್ದರೆ ಬಳಕೆದಾರರಿಗೆ ತಮ್ಮ ಗೂಗಲ್‌ನ ವಿವಿಧ ಖಾತೆಗಳನ್ನು ಮತ್ತಷ್ಟು ಸುರಕ್ಷಿತವಾಗಿ ಇಡಲು ನೆರವಾಗಲಿದೆ ಎಂದು ಗೂಗಲ್ ಹೇಳಿದೆ.ಉದಾಹರಣೆಗೆ, ವ್ಯಕ್ತಿಯೊಬ್ಬನಿಗೆ ತಾನು ಭೇಟಿ ನೀಡದೇ ಇರುವ ಸ್ಥಳದಿಂದ ಆತನ ಗೂಗಲ್‌ನ ಯಾವುದಾದರೊಂದು ಖಾತೆಗೆ ಲಾಗಿನ್ ಆಗಿರುವ ವಿಚಾರ ತಿಳಿದು ಬಂದರೆ, ತಕ್ಷಣ ಆತ ಪಾಸ್‌ವರ್ಡ್ ಬದಲಾಯಿಸಿ ಖಾತೆಯನ್ನು ಸುರಕ್ಷಿತವಾಗಿ ಇಡಬಹುದು ಎಂದು ಹೇಳುತ್ತಾರೆ ಕ್ವೆರ್ಟ್

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.