ಶುಕ್ರವಾರ, ಮಾರ್ಚ್ 5, 2021
29 °C

ಭಾರತ–ಬಾಂಗ್ಲಾ ಏಕೈಕ ಟೆಸ್ಟ್‌ ಡ್ರಾನಲ್ಲಿ ಅಂತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತ–ಬಾಂಗ್ಲಾ ಏಕೈಕ ಟೆಸ್ಟ್‌ ಡ್ರಾನಲ್ಲಿ ಅಂತ್ಯ

ಫಟುಲ್ಲಾ (ಪಿಟಿಐ): ಸತತ ಮಳೆಯ ಕಾಟದಲ್ಲಿಯೇ ನಡೆದ ಭಾರತ– ಬಾಂಗ್ಲಾದೇಶ ನಡುವಣ ಏಕೈಕ ಟೆಸ್ಟ್‌ ಕ್ರಿಕೆಟ್‌ ಪಂದ್ಯವು ಡ್ರಾನಲ್ಲಿ ಅಂತ್ಯ ಕಂಡಿದೆ. ಐದು ದಿನಗಳ ಈ ಪಂದ್ಯದಲ್ಲಿ 250 ಓವರ್‌ಗಳು ಮಳೆಗೆ ಬಲಿಯಾದವು.

ಟಾಸ್‌ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಭಾರತ, ಶಿಖರ್ ಧವನ್‌ ಹಾಗೂ ಮುರಳಿ ವಿಜಯ್ ಅವರ ಅಮೋಘ ಆಟದ ಬಲದಿಂದ 462 ರನ್‌ಗಳಿಗೆ ಡಿಕ್ಲೇರ್ ಮಾಡಿಕೊಂಡಿತ್ತು.

ಬೃಹತ್‌ ಗುರಿ ಬೆನ್ನಟ್ಟಿದ್ದ ಬಾಂಗ್ಲಾ, ಮೊದಲ ಇನಿಂಗ್ಸ್‌ನಲ್ಲಿ 65.5 ಓವರ್‌ಗಳಲ್ಲಿ 256ಕ್ಕೆ ಆಲೌಟ್‌ ಆಯಿತು. ಆರ್‌. ಅಶ್ವಿನ್‌ ಐದು, ಹರಭಜನ್‌ ಸಿಂಗ್ ಮೂರು ಹಾಗೂ ವರುಣ್‌ ಆ್ಯರನ್‌ ಒಂದು ವಿಕೆಟ್‌ ಕಬಳಿಸಿ ಮಿಂಚಿದರು. ಮೊನಚಿನ ದಾಳಿಯ ಮೂಲಕ ಬಾಂಗ್ಲಾ ತಂಡವನ್ನು ಫಾಲೋ ಆನ್‌ ಬಲೆಗೆ ಕೆಡವಲ್ಲಿ ಯಶ ಕಂಡರು. 

ಬಳಿಕ, ಎರಡನೇ ಇನಿಂಗ್ಸ್ ಆರಂಭಿಸಿದ 15 ಓವರ್‌ಗಳನ್ನು ಆಡಿದ ಬಾಂಗ್ಲಾ, ವಿಕೆಟ್‌ ನಷ್ಟವಿಲ್ಲದೇ 23 ರನ್‌ ಗಳಿಸುವ ಮೂಲಕ ಪಂದ್ಯದ ಅಂತಿಮ ಹಾಗೂ ಐದನೇ ದಿನದಾಟಕ್ಕೆ ತೆರೆ ಬಿದ್ದಿತು. ಪಂದ್ಯ ಡ್ರಾ ಆಯಿತು.

ಧವನ್‌ ಪಂದ್ಯಪುರುಷ: ಮೊದಲ ಇನಿಂಗ್ಸ್‌ನಲ್ಲಿ 195 ಎಸೆತಗಳಲ್ಲಿ 23 ಬೌಂಡರಿಗಳೊಂದಿಗೆ 173 ರನ್‌ ಗಳಿಸಿದ್ದ ಶಿಖರ್‌ ಧವನ್‌ ಅವರು ಪಂದ್ಯ ಪುರುಷ ಗೌರವಕ್ಕೆ ಭಾಜನರಾದರು.

ಇಮ್ಮಡಿಸಿದ ವಿಶ್ವಾಸ: ಅದಾಗ್ಯೂ, ವಿರಾಟ್‌ ಕೊಹ್ಲಿ ನೇತೃತ್ವದ ಭಾರತ ತಂಡ ಪಂದ್ಯದ ಎಲ್ಲಾ ವಿಭಾಗಗಳಲ್ಲಿಯೂ ಉತ್ಕೃಷ್ಟತೆ ಮರೆಯಿತು. ಈ ಮೂಲಕ ಗುರುವಾರದಿಂದ ಆರಂಭಗೊಳ್ಳಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ ವಿಶ್ವಾಸ ಹೆಚ್ಚಿಸಿಕೊಂಡಿದೆ.

ಎರಡನೇ ಡ್ರಾ: 2007ರ ಭಾರತ – ಬಾಂಗ್ಲಾದೇಶ ನಡುವಣ ಪಂದ್ಯ ಡ್ರಾ ಆಗಿತ್ತು. ಭಾರತ ವಿರುದ್ಧ ಆಡಿರುವ ಆರು ಟೆಸ್ಟ್‌ಗಳನ್ನು ಬಾಂಗ್ಲಾದೇಶ ಸೋತಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.