ಬುಧವಾರ, ಮೇ 19, 2021
27 °C

ಭಾರತ-ಇಂಗ್ಲೆಂಡ್ ಏಕದಿನ ಸರಣಿ: ಎರಡನೇ ಪಂದ್ಯಕ್ಕೂ ಮಳೆ ಅಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೌಥ್ಯಾಂಪ್ಟನ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಏಕದಿನ ಕ್ರಿಕೆಟ್ ಸರಣಿಯ ಎರಡನೇ ಪಂದ್ಯಕ್ಕೂ ಮಳೆ ಅಡ್ಡಿಪಡಿಸಿದೆ.ಹೊನಲು ಬೆಳಕಿನ ಈ ಪಂದ್ಯ ಆರಂಭಕ್ಕೆ ಮುನ್ನವೇ ಮಳೆ ಸುರಿಯುತಿತ್ತು. ಹಾಗಾಗಿ ಒಂದು ಎಸೆತದ ಆಟ ಕೂಡ ನಡೆದಿರಲಿಲ್ಲ. ಭಾರತೀಯ ಕಾಲಮಾನ 10 ಗಂಟೆಯವರೆಗೆ ಪಂದ್ಯ ಶುರುವಾಗಿರಲಿಲ್ಲ. ಆಕಸ್ಮಾತ್ ಮತ್ತೆ ಮಳೆ ಅಡಚಣೆಯಾಗದಿದ್ದರೆ 23 ಓವರ್‌ಗಳ ಪಂದ್ಯ ನಡೆಯಲಿದೆ.ಒಮ್ಮೆ ಅಂಪೈರ್‌ಗಳು ಪಿಚ್ ಪರಿಶೀಲನೆ ನಡೆಸಿ ಪಂದ್ಯ ಆರಂಭಕ್ಕೆ ಸಮಯ ನಿಗದಿ ಮಾಡಿದ್ದರು. ಆದರೆ ಮತ್ತೆ ಮಳೆ ಸರಿಯಿತು. ಮಳೆ ನಿಂತ ಮೇಲೆ ಕ್ರೀಡಾಂಗಣದಲ್ಲಿ ನೀರು ತೆಗೆಯಲು ಒಂದೂವರೆ ಗಂಟೆ ಬೇಕು. ಹಾಗಾಗಿ ಈ ಪಂದ್ಯ ನಡೆಯುವುದು ಅನುಮಾನ.ಈ ಪಂದ್ಯಕ್ಕೆ ಒಂದು ವಾರ ಮೊದಲೇ ಎಲ್ಲಾ ಟಿಕೆಟ್‌ಗಳು ಮಾರಾಟವಾಗಿವೆ. ಆದರೆ ಬೆಳಿಗ್ಗೆಯಿಂದಲೇ ಮಳೆ ಸುರಿಯುತ್ತಿದ್ದ ಕಾರಣ ರೋಸ್ ಬೌಲ್ ಕ್ರೀಡಾಂಗಣದಲ್ಲಿ ಕಡಿಮೆ ಸಂಖ್ಯೆ ಪ್ರೇಕ್ಷಕರು ಕಂಡು ಬಂದರು.ಆಟಗಾರರು ಪೆವಿಲಿುನ್‌ನಲ್ಲಿ ಕುಳಿತು ಕಾಫಿ ಹೀರುತ್ತಾ ಸಮಯ ಕಳೆದರು.

ಐದು ಪಂದ್ಯಗಳ ಸರಣಿಯ ಮೊದಲ ಪಂದ್ಯ ಕೂಡ ಮಳೆಗೆ ಆಹುತಿಯಾಗಿತ್ತು. ಆ ಪಂದ್ಯದಲ್ಲಿ ಭಾರತಕ್ಕೆ ಗೆಲುವಿನ ಅವಕಾಶವಿತ್ತು.ಮಾರ್ಗನ್‌ಗೆ ಗಾಯ: ಭುಜದ ನೋವಿನ ಕಾರಣ ಇಂಗ್ಲೆಂಡ್ ತಂಡದ ಬ್ಯಾಟ್ಸ್‌ಮನ್ ಎಯೋನ್ ಮಾರ್ಗನ್ ಈ ಸರಣಿಯ ಉಳಿದ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.