ಭಾರತ ತಂಡಕ್ಕೆ ಜಯ
ನವದೆಹಲಿ (ಐಎಎನ್ಎಸ್):ಭಾರತ ತಂಡದವರು ಇಲ್ಲಿ ನಡೆಯುತ್ತಿರುವ ಫಿಬಾ (ಎಫ್ಐಬಿಎ) ಏಷ್ಯಾ ಚಾಂಪಿಯನ್ಷಿಪ್ನ ಬಾಸ್ಕೆಟ್ ಬಾಲ್ ಚಾಂಪಿಯನ್ಷಿಪ್ನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಗೆಲುವು ಸಾಧಿಸಿದ್ದಾರೆ. ಇಲ್ಲಿನ ತ್ಯಾಗರಾಜ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಭಾರತ 109-26ರಲ್ಲಿ ನೆರಯ ನೇಪಾಳ ತಂಡವನ್ನು ಮಣಿಸಿತು.

ಕಾರ್ತಿಕೇಯನ್ ಮಡಿಲಿಗೆ `ಆಟೊ ಜಿಪಿ' ಪ್ರಶಸ್ತಿ
ಸಿಲ್ವರ್ಸ್ಟೋನ್ (ಐಎಎನ್ಎಸ್): ಭಾರತದ ನಾರಾಯಣ್ ಕಾರ್ತಿಕೇಯನ್ ಶನಿವಾರ ನಡೆದ ಆಟೊ ಗ್ರ್ಯಾನ್ ಪ್ರಿ ರೇಸ್ನಲ್ಲಿ ಪ್ರಶಸ್ತಿ ಜಯಿಸಿದ್ದಾರೆ. ಈ ರೇಸ್ನಲ್ಲಿ ಅವರು ಗೆದ್ದ ಚೊಚ್ಚಲ ಪ್ರಶಸ್ತಿ.

ಇಲ್ಲಿನ ಸಿಲ್ವರ್ ಸ್ಟೋನ್ ಸರ್ಕಿಟ್ನಲ್ಲಿ ನಡೆದ ಈ ರೇಸ್ನಲ್ಲಿ ಅಡಚಣೆ ಉಂಟು ಮಾಡಿದ್ದಕ್ಕಾಗಿ ಲಿಕೆವಿನ್ ಗಿಯೊವೆಸಿ ಅವರಿಗೆ ದಂಡ ವಿಧಿಸಲಾಯಿತು. ಘಿಂಜೈ ಮೋಟೊ ಸ್ಪೋರ್ಟ್ಸ್ನ ಗಿಯೊವೆಸಿಗೆ ಸರಣಿಯ ನಾಲ್ಕನೇ ಸುತ್ತಾದ 14ನೇ ಲ್ಯಾಪ್ನಲ್ಲಿ ನಿಯಮ ಮುರಿದ ಕಾರಣ ದಂಡ ವಿಧಿಸಲಾಗಿತ್ತು. ಆದ್ದರಿಂದ ಕಾರ್ತಿಕೇಯನ್ ಅವರನ್ನು ಜಯಶೀಲರನ್ನಾಗಿ ಘೋಷಿಲಾಗಿದೆ.

`ಅಭ್ಯಾಸ ಹಾಗೂ ಅರ್ಹತಾ ರೇಸ್ನಲ್ಲಿ ನಿಖರ ವೇಗ ಕಾಯ್ದುಕೊಂಡೆವೆ. ಗಿಯೊವೆಸಿ ಅಂತಿಮ ಗುರಿಯಡೆಗೆ ಚಲಿಸುವವರೆಗೂ ನಾನು ಮುಂಚೂಣಿಯಲ್ಲಿದ್ದೆ. ಆದರೆ ಅಂತಿಮ ಲ್ಯಾಪ್ನಲ್ಲಿ ನಿಯಮ ಉಲ್ಲಂಘಿಸುವ ಮೂಲಕ ಅವರು ತಪ್ಪು ಮಾಡಿದರು' ಎಂದು ಕಾರ್ತಿಕೇಯನ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.