ಭಾರತ-ವಿಯೆಟ್ನಾಂ ಜಂಟಿ ಮಾತುಕತೆ

7

ಭಾರತ-ವಿಯೆಟ್ನಾಂ ಜಂಟಿ ಮಾತುಕತೆ

Published:
Updated:
ಭಾರತ-ವಿಯೆಟ್ನಾಂ ಜಂಟಿ ಮಾತುಕತೆ

ಹನೊಯ್ (ಪಿಟಿಐ): ದ್ವಿಪಕ್ಷೀಯ ಸಂಬಂಧ, ರಕ್ಷಣೆ, ವ್ಯಾಪಾರ ಮತ್ತಿತರ ವಿಷಯಗಳಲ್ಲಿ ಪರಸ್ಪರ ಸಹಕಾರಕ್ಕೆ  ಸಂಬಂಧಿಸಿದಂತೆ ಭಾರತ ಹಾಗೂ ವಿಯೆಟ್ನಾಂ ಶುಕ್ರವಾರ ಮಹತ್ವದ ಮಾತುಕತೆ ನಡೆಸಿದವು.ಮೂರು ದಿನಗಳ ವಿಯೆಟ್ನಾಂ ಭೇಟಿಯಲ್ಲಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಎಂ.ಕೃಷ್ಣ, ಹನೊಯ್‌ನಲ್ಲಿ ವಿಯೆಟ್ನಾಂ ವಿದೇಶಾಂಗ ಸಚಿವ ಫಾಂ ಬಿನ್ ಮಿನ್ ಜತೆ ಸಮಾಲೋಚನೆ ನಡೆಸಿದರು.

ಹೂಡಿಕೆ, ಶಿಕ್ಷಣ ಮತ್ತಿತರ ವಿಷಯಗಳಲ್ಲಿ ಸಹಕಾರ ಬಲವರ್ಧನೆಗೆ ಉಭಯ ನಾಯಕರು ಒಪ್ಪಿಗೆ ಸೂಚಿಸಿದರು.

`ವ್ಯಾಪಾರ ನೀತಿ ಪಾರದರ್ಶಕವಾಗಿಲ್ಲ~

ವಾಷಿಂಗ್ಟನ್(ಪಿಟಿಐ): `ಭಾರತದ ವ್ಯವಹಾರ ಮತ್ತು ವಾಣಿಜ್ಯ ನೀತಿಯಲ್ಲಿ ನ್ಯೂನತೆಗಳಿದ್ದು, ಪಾರದರ್ಶಕವಾಗಿಲ್ಲ~ ಎಂದು ಅಮೆರಿಕ ಅಭಿಪ್ರಾಯಪಟ್ಟಿದೆ.ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಕ್ಕೆ ಬಂಡವಾಳ ಹೂಡಲು ಭಾರತ ಪ್ರಶಸ್ತವಾಗಿಲ್ಲ. ವಿಶ್ವಬ್ಯಾಂಕಿನಿಂದ ನೆರವು ಪಡೆದಿರುವ 183ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 165ನೇ ಸ್ಥಾನ ಪಡೆದಿದೆ ಎಂದು ವಿಶ್ವ ವಾಣಿಜ್ಯ ಕೇಂದ್ರದ ಅಮೆರಿಕ ರಾಯಭಾರಿ ಮೈಕೆಲ್ ಪುಂಕ್ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry