ಶನಿವಾರ, ಫೆಬ್ರವರಿ 27, 2021
28 °C
ಐದು ದಿನಗಳ ದಕ್ಷಿಣ ಭಾರತ ಮಟ್ಟದ ವಿಜ್ಞಾನ ಮೇಳಕ್ಕೆ ಚಾಲನೆ

ಭಾವಿ ವಿಜಾđನಿಯಿಂದ ಕಸಕೆħ ಪರಿಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾವಿ ವಿಜಾđನಿಯಿಂದ ಕಸಕೆħ ಪರಿಹಾರ

ಬೆಂಗಳೂರು: ‘ವಿಶ್ವೇಶ್ವರಯ್ಯ ಕೈಗಾರಿಕಾ ಹಾಗೂ ತಾಂತ್ರಿಕ ವಸ್ತು ಸಂಗ್ರಹಾಲಯ’ದ ಆಶ್ರಯದಲ್ಲಿ ಐದು ದಿನಗಳ ‘ದಕ್ಷಿಣ ಭಾರತ ಮಟ್ಟದ ವಿಜ್ಞಾನ ಮೇಳ’ ನಗರದಲ್ಲಿ ಮಂಗಳವಾರ ಆರಂಭವಾಯಿತು.ಐದು ರಾಜ್ಯಗಳ 600 ಪ್ರೌಢಶಾಲಾ ವಿದ್ಯಾರ್ಥಿಗಳು ತಯಾರಿಸಿರುವ 300 ವಿಜ್ಞಾನ ಮಾದರಿಗಳು ಪ್ರದರ್ಶನಗೊಳ್ಳುತ್ತಿವೆ. ಎರಡು ದಶಕಗಳ ಬಳಿಕ ನಗರದಲ್ಲಿ ಈ ವಿಜ್ಞಾನ ಮೇಳ ನಡೆಯುತ್ತಿದೆ.ಪ್ರವೇಶ: ಜ. 20, 21 ಹಾಗೂ 22ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯವರೆಗೆ ನೋಂದಾಯಿತ ವಿದ್ಯಾರ್ಥಿಗಳು  ಮೇಳವನ್ನು ವೀಕ್ಷಿಸಬಹುದು. 20, 21  ಹಾಗೂ 22ರಂದು ಮಧ್ಯಾಹ್ನ 2ರಿಂದ 5 ವರೆಗೆ ಹಾಗೂ 23ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ಸಾರ್ವಜನಿಕರಿಗೆ ವೀಕ್ಷಿಸಬಹುದು.ಕಸದ ಸಮಸ್ಯೆಗೆ ಪರಿಹಾರ: ಕಣ್ಣೂರಿನ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ದೇವಿಕಾ ಪ್ರಕಾಶ್‌ ಅವರು ಕಸದ ಸಮಸ್ಯೆಗೆ ಪರಿಹಾರ ಸೂಚಿಸುವ ಮಾದರಿ ಸಿದ್ಧಪಡಿಸಿದ್ದಾರೆ. ಕಸದಿಂದ ವಿದ್ಯುತ್‌ ತಯಾರಿಸಬಹುದು ಎಂದು ಪ್ರತಿಪಾದಿಸುವ ಅವರ ವಿಜ್ಞಾನ ಮಾದರಿ ಗಮನ ಸೆಳೆಯುತ್ತಿದೆ.‘ನಗರದಲ್ಲಿ ಕಸದ ಸಮಸ್ಯೆ ಗಂಭೀರವಾಗಿದೆ. ನಗರದ ಬಡಾವಣೆಗಳಲ್ಲಿ ಕಸ ರಾಶಿ ಬಿದ್ದಿದೆ. ಇದಕ್ಕೆ ಏನಾದರೂ ಪರಿಹಾರ ಸೂಚಿಸಬೇಕು ಎಂಬುದು ನನ್ನ ಹಂಬಲ. ಅದಕ್ಕಾಗಿ ಈ ಮಾದರಿ ರೂಪಿಸಿದ್ದೇನೆ’ ಎಂದು ದೇವಿಕಾ ಪ್ರಕಾಶ್‌ ತಿಳಿಸಿದರು.ತಮಿಳುನಾಡಿನ ಕೊಂಗು ಹಿರಿಯ ಪ್ರಾಥಮಿಕ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿ ಕಿರುಭಾಷಿಣಿ ಅವರು ಸೈಕಲ್ ನೆರವಿನಿಂದ ಮೊಬೈಲ್‌ ಚಾರ್ಜ್‌ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ.ತಮಿಳುನಾಡಿನ ತಿರುವಲ್ಲೂರು ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ನವೀನ್‌ ಅವರು ಸುನಾಮಿಯ ಮುನ್ನೆಚ್ಚರಿಕೆ ನೀಡುವ ಸಾಧನವನ್ನು ಅಭಿವೃದ್ಧಿಪಡಿಸಿದ್ದಾರೆ. ‘ತಮಿಳು ನಾಡಿನಲ್ಲಿ 2004ರಲ್ಲಿ ಸುನಾಮಿಯಿಂದ ಉಂಟಾದ ದುರಂತದ ಬಗ್ಗೆ ಓದಿದ್ದೇನೆ. ಸುನಾಮಿ ಅಪ್ಪಳಿಸುವ ಮುಂಚೆಯೇ ಸುತ್ತಮುತ್ತಲ ಜನರಿಗೆ ಮುನ್ನೆಚ್ಚರಿಕೆ ಸೂಚನೆ ನೀಡುವ ಸಾಧನವನ್ನು ಅಭಿವೃದ್ಧಿಪಡಿಸಿದ್ದೇನೆ’ ಎಂದು ನವೀನ್‌ ತಿಳಿಸಿದರು.‘ತಮಿಳುನಾಡಿನ ಜಲಪ್ರಳಯ ನಮ್ಮ ಕಣ್ಣೆದುರೇ ಇದೆ. ಆದರೆ, ಈ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲು ನಾವು ಮನಸ್ಸು ಮಾಡುತ್ತಿಲ್ಲ. ಈ ಸಮಸ್ಯೆಗಳನ್ನು ಪರಿಹರಿಸಲು ದೊಡ್ಡ ಮೊತ್ತದ ಹೂಡಿಕೆಯೂ ಬೇಕಾಗಿಲ್ಲ’ ಎಂದು ಅವರು ಹೇಳಿದರು.ಮೇಳವನ್ನು ರಾಜ್ಯಪಾಲ ವಜುಭಾಯಿ ವಾಲಾ ಉದ್ಘಾಟಿಸಿ, ‘ನಮ್ಮದು ಪುರುಷ ಪ್ರಧಾನ ಸಮಾಜ. ಇತ್ತೀಚಿನ ವರ್ಷಗಳಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ಸಾಧನೆ ಮಾಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ. ಅವರಿಗೆ ಪ್ರೋತ್ಸಾಹಿಸುವ ಕೆಲಸ ಆಗಬೇಕು’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.