ಬುಧವಾರ, ಜನವರಿ 29, 2020
29 °C
ಇಂಡೊನೇಷ್ಯಾ ಓಪನ್‌ ಗಾಲ್ಫ್‌

ಭುಲ್ಲರ್‌ಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಕಾರ್ತ (ಪಿಟಿಐ): ಭಾರತದ ಗಗನ್‌ ಜೀತ್‌ ಭುಲ್ಲರ್‌ ಅವರು ಇಂಡೊ ನೇಷ್ಯಾ ಓಪನ್‌ ಗಾಲ್ಫ್‌ ಟೂರ್ನಿ ಯಲ್ಲಿ ಚಾಂಪಿಯನ್‌ ಆದರು.

ಭಾನುವಾರ ಕೊನೆಗೊಂಡ ಟೂರ್ನಿಯಲ್ಲಿ ಭುಲ್ಲರ್‌ ಒಟ್ಟು 268 ಸ್ಕೋರ್‌ಗಳೊಂದಿಗೆ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡರು. ಏಷ್ಯನ್‌ ಟೂರ್‌ನಲ್ಲಿ ಭಾರತದ ಆಟಗಾರನಿಗೆ ದೊರೆತ ಐದನೇ ಪ್ರಶಸ್ತಿ ಇದಾಗಿದೆ.



ಭುಲ್ಲರ್‌ ಅಂತಿಮ ಸುತ್ತಿನ ಸ್ಪರ್ಧೆ ಕೊನೆಗೊಳಿಸಲು 68 ಅವಕಾಶ ಗಳನ್ನು ಬಳಸಿಕೊಂಡರು. ಅವರು ಮೊದಲ ಮೂರು ಸುತ್ತುಗಳಲ್ಲಿ ಕ್ರಮ ವಾಗಿ 64, 67 ಮತ್ತು 69 ಅವಕಾ ಶಗಳಲ್ಲಿ ಸ್ಪರ್ಧೆ ಕೊನೆಗೊಳಿಸಿದ್ದರು.



ಭುಲ್ಲರ್‌ ತಮ್ಮ ಮೊದಲ ಏಷ್ಯನ್‌ ಟೂರ್‌ ಪ್ರಶಸ್ತಿಯಲ್ಲಿ 2009 ರಲ್ಲಿ ಇಂಡೊನೇಷ್ಯಾದಲ್ಲೇ ಗೆದ್ದುಕೊಂಡಿದ್ದರು. ಮಲೇಷ್ಯಾದ ನಿಕೊಲಸ್‌ ಫಂಗ್‌ ಮತ್ತು ಥಾಯ್ಲೆಂಡ್‌ನ ಚಪ್ಚಾಯ್‌ ನಿರಾತ್‌ ಜಂಟಿ ಎರಡನೇ ಸ್ಥಾನದಲ್ಲಿ ಕಾಣಿಸಿಕೊಂಡರು.

ಪ್ರತಿಕ್ರಿಯಿಸಿ (+)