ಭಾನುವಾರ, ಜನವರಿ 26, 2020
31 °C

ಮಂಡೇಲಾ ಅಂತ್ಯಕ್ರಿಯೆಗೆ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇಪ್‌ಟೌನ್‌ (ಐಎಎನ್‌ಎಸ್‌): ಭಾನು­ವಾರ ನಡೆ­ಯುವ  ನೆಲ್ಸನ್‌ ಮಂಡೇಲಾ ಅವರ ಅಂತ್ಯಕ್ರಿಯೆಗೆ ಎಲ್ಲ ಸಿದ್ಧತೆ ಪೂರ್ಣಗೊಂಡಿವೆ.ಅಂತ್ಯಕ್ರಿಯೆ ನಡೆಯಲಿರುವ ಕುನು ಗ್ರಾಮದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು 12 ಸಾವಿರ ಯೋಧರನ್ನು ನಿಯೋಜಿಸಲಾಗಿದೆ.ಮಂಡೇಲಾ ಕುಟುಂಬದ ಸದಸ್ಯರು ಈಗಾಗಲೇ ಕುನು ಗ್ರಾಮಕ್ಕೆ ಬಂದಿದ್ದಾರೆ. ದೇಶ, ವಿದೇಶಗಳ ನಾಯಕರು ಸೇರಿದಂತೆ ಐದು ಸಾವಿರ ಜನರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಅಂತರರಾಷ್ಟ್ರೀಯ ಮಾಧ್ಯಮಗಳು ಈಗಾಗಲೇ ಇಲ್ಲಿ ಬೀಡುಬಿಟ್ಟಿವೆ.ಪ್ರಿಟೋರಿಯಾದಲ್ಲಿ ಸಾರ್ವಜನಿಕ ದರ್ಶನಕ್ಕೆ  ಇಟ್ಟಿರುವ  ಮಂಡೇಲಾ ಪಾರ್ಥಿವ ಶರೀರ­ವನ್ನು ಶನಿವಾರ ಆಡಳಿತಾರೂಢ ಆಫ್ರಿಕಾ ರಾಷ್ಟ್ರೀಯ  ಕಾಂಗ್ರೆಸ್‌ಗೆ ಹಸ್ತಾಂತರಿಸಲಾಗುವುದು.

ಪ್ರತಿಕ್ರಿಯಿಸಿ (+)