ಗುರುವಾರ , ಫೆಬ್ರವರಿ 25, 2021
26 °C

ಮಗಳಿಗೆ ಉನ್ನತ ಹುದ್ದೆ ನೀಡಿದ ತಜಿಕಿಸ್ತಾನದ ಅಧ್ಯಕ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಗಳಿಗೆ ಉನ್ನತ ಹುದ್ದೆ ನೀಡಿದ ತಜಿಕಿಸ್ತಾನದ ಅಧ್ಯಕ್ಷ

ದುಶಂಬೆ: ತಜಿಕಿಸ್ತಾನದ ಅಧ್ಯಕ್ಷ ಎಮೊಮಲಿ ರಖ್ಮೋನ್‌ ಅವರು ತಮ್ಮ ಹಿರಿಯ ಮಗಳು ಒಜೊಡಾ ರಖ್ಮೋನ್ (38) ಅವರನ್ನು ಉನ್ನತ ಹುದ್ದೆಯೊಂದಕ್ಕೆ ನಿಯೋಜಿಸಿದ್ದಾರೆ.ಒಜೊಡಾ ಅವರು ತಂದೆಯ ಅಡಳಿತದಲ್ಲಿ 2014ರಿಂದ ಉಪ ವಿದೇಶಾಂಗ ಸಚಿವೆಯಾಗಿ ಕಾರ್ಯ ನಿರ್ವಹಿಸಿದ್ದರು. ರಖ್ಮೋನ್ ಕಳೆದ ವರ್ಷವಷ್ಟೇ ತಮ್ಮ ಮಗ ರೊಷ್ತೊಮಿ ಅವರನ್ನು ಭ್ರಷ್ಟಾಚಾರ ನಿರ್ಮೂಲನಾ ತಂಡದ ಮುಖ್ಯಸ್ಥರನ್ನಾಗಿ ನೇಮಿಸಿದ್ದರು.ಜನಮತ ದೊರೆತಲ್ಲಿ ಎಮೊಮಲಿ ಅವರು ಇಚ್ಛಿಸಿದಷ್ಟು ಸಲ ಅಧ್ಯಕ್ಷರಾಗುವ ಅವಕಾಶ ಕಲ್ಪಿಸಬಹುದು ಎನ್ನುವ ಬಗ್ಗೆ ಈ ತಿಂಗಳ ಆರಂಭದಲ್ಲಿ ತಜಿಕಿಸ್ತಾನದ ಸಂಸತ್‌ ಸಂವಿಧಾನಕ್ಕೆ ತಿದ್ದುಪಡಿ ತಂದಿತ್ತು. ಆದರೆ, ಎಮೊಮಲಿ 2020ರ ತನಕ ಮಾತ್ರ ಅಧ್ಯಕ್ಷರಾಗಿ ಮುಂದುವರಿಯಬಹುದು ಎಂದು ಸಂವಿಧಾನ ಅವಕಾಶ ಕಲ್ಪಿಸಿದೆ.ಮಗಳಿಗಾಗಿ ಉನ್ನತ ಹುದ್ದೆ ನೀಡಿದ ಏಷ್ಯಾದ ನಾಯಕರಲ್ಲಿ ಎಮೊಮಲಿ ಮೊದಲಿಗರಲ್ಲ.   2015ರಲ್ಲಿ ಕಜಾಕ್‌ ಅಧ್ಯಕ್ಷ ನೂರ್ ಸುಲ್ತಾನ್‌ ನಜರ್‌ಬಯೆವ್ ತಮ್ಮ ಮಗಳು ದರಿಗಾ ಅವರನ್ನು ಉಪ ಪ್ರಧಾನಿಯನ್ನಾಗಿ ನೇಮಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.