ಶನಿವಾರ, ಫೆಬ್ರವರಿ 27, 2021
25 °C
₹ 200 ದಂಡ ವಿಧಿಸಲು ದಾರದಹಳ್ಳಿ ಗ್ರಾಮ ಪಂಚಾಯಿತಿ ನಿರ್ಧಾರ

ಮಗ್ಗಲಮಕ್ಕಿ: ಬಯಲು ಬಹಿರ್ದೆಸೆಗೆ ತಡೆ

ಕೆ. ವಾಸುದೇವ್‌ Updated:

ಅಕ್ಷರ ಗಾತ್ರ : | |

ಮಗ್ಗಲಮಕ್ಕಿ: ಬಯಲು ಬಹಿರ್ದೆಸೆಗೆ ತಡೆ

ಮೂಡಿಗೆರೆ: ತಾಲ್ಲೂಕಿನ ಮಗ್ಗಲ ಮಕ್ಕಿಯ ಆಯಕಟ್ಟಿನ ಪ್ರದೇಶಗಳಲ್ಲಿ ಭಾನುವಾರ ಮುಂಜಾನೆ ಕಾದು ಕುಳಿ ತಿದ್ದ ಹಲವು ಅಧಿಕಾರಿಗಳು, ಬಯಲು ಬಹಿರ್ದೆಸೆಗೆ ಬರುತ್ತಿದ್ದ ಜನರನ್ನು ತಡೆದು, ಬಯಲು ಬಹಿರ್ದೆಸೆಯಿಂದಾ ಗುವ ಅನಾಹುತಗಳ ಬಗ್ಗೆ ಮಾಹಿತಿ ನೀಡಿ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಸಲಹೆ ನೀಡಿದ ಘಟನೆ ನಡೆಯಿತು.ಜಿಲ್ಲೆಯಲ್ಲಿ ‘ಬಯಲು ಬಹಿರ್ದೆಸೆ ಮುಕ್ತ ಮಲೆನಾಡು’ ಎಂಬ ನೂತನ ಯೋಜನೆ ಜಾರಿಗೆ ಬಂದಿದೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆರ್‌. ರಾಗಪ್ರಿಯಾ ನೇತೃತ್ವದಲ್ಲಿ ತಂಡಗಳನ್ನು ನಿರ್ಮಿಸಿ  ಕೊಂಡಿದ್ದು, ತಾಲ್ಲೂಕಿನ ಎಲ್ಲ  ಗ್ರಾಮ ಗಳಿಗೂ ಭೇಟಿ ನೀಡಿ, ಬಯಲು ಬಹಿರ್ದೆಸೆಯಿಂದ ಆಗುವ ಅನಾಹುತ ಗಳ ಬಗ್ಗೆ ಮಾಹಿತಿ ಹಾಗೂ ಪ್ರಾತ್ಯಕ್ಷಿ ಕೆಯನ್ನು ನೀಡಿ, ಶೌಚಾಲಯ ನಿರ್ಮಿಸಿ ಕೊಳ್ಳುವಂತೆ ಮನಪರಿವರ್ತನೆ ಮಾಡು ವುದು ‘ಬಯಲು ಬಹಿರ್ದೆಸೆ ಮುಕ್ತ ಮಲೆನಾಡು’ ಯೋಜನೆಯ ಉದ್ದೇಶ.ಯೋಜನೆಯ ಅಂಗವಾಗಿ ಭಾನುವಾರ ಮುಂಜಾನೆ 5ಕ್ಕೆ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ರಾಜಗೋಪಾಲ್‌ ನೇತೃತ್ವದ ಒಂದು ತಂಡ ಮಗ್ಗಲಮಕ್ಕಿ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮದ ಶೌಚಾಲಯ ರಹಿತ ಕುಟುಂಬಗಳು ಬಯಲು ಬಹಿರ್ದೆಸೆಗೆ ತೆರಳುವ ಮಾರ್ಗದಲ್ಲಿ ಕಾದು ಕುಳಿತು, ಗ್ರಾಮಸ್ಥರನ್ನು ತಡೆಯಿತು. ಬಯಲು ಬಹಿರ್ದೆಸೆಯಿಂದ ಆಗುವ ಅನಾಹುತ ಗಳ ಬಗ್ಗೆ ಮಾಹಿತಿ ನೀಡಿ, ಕೂಡಲೇ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಸಲಹೆ ನೀಡಿತು.ಈ ರೀತಿ ಅನಿರೀಕ್ಷಿತ ಭೇಟಿಯನ್ನು ಕಂಡ ಕೆಲವು ಗ್ರಾಮಸ್ಥರು, ಕೂಡಲೇ ಶೌಚಾಲಯವನ್ನು ನಿರ್ಮಿಸಿಕೊಳ್ಳುವ ಭರವಸೆ ನೀಡಿದರೆ, ಮತ್ತೆ ಕೆಲವು ಗ್ರಾಮಸ್ಥರು, ಮರಳಿನ ಸಮಸ್ಯೆಯನ್ನು ಮುಂದಿಟ್ಟು ಶೌಚಾಲಯ ನಿರ್ಮಾಣದ ಹೊಣೆಯಿಂದ ನುಣುಚಿಕೊಳ್ಳುವ ಪ್ರಯತ್ನ ನಡೆಸಿದರು. ಶೌಚಾಲಯ ನಿರ್ಮಿಸಿಕೊಳ್ಳುವ ಕುಟುಂಬಗಳಿಗೆ ಕಾರ್ಯಾದೇಶದ ಪತ್ರ ನೀಡಲಾ ಗುತ್ತಿದ್ದು, ಅದರ ಮೂಲಕ ಮರಳು ಪಡೆದು ನಿರ್ಮಿಸಿಕೊಳ್ಳಬೇಕು ಎಂದು ಸೂಚಿಸಲಾಯಿತು.ಉಪಕಾರ್ಯದರ್ಶಿ ರಾಜ ಗೋಪಾಲ್‌ ಬಳಿಕ ‘ಪ್ರಜಾವಾಣಿ’ ಜತೆ ಮಾತನಾಡಿ, ಜಿಲ್ಲೆಯಲ್ಲಿ ಮುಂದಿನ ಗಾಂಧಿ ಜಯಂತಿಯೊಳಗೆ ಬಯಲು ಬಹಿರ್ದೆಸೆ ನಿರ್ಮೂಲನೆ ಮಾಡುವುದು ಜಿಲ್ಲಾ ಪಂಚಾಯಿತಿಯ ಉದ್ದೇಶ ವಾಗಿದ್ದು, ಈಗಾಗಲೇ ತಾಲ್ಲೂಕಿನಾ ದ್ಯಂತ ಸಿಇಒ ರಾಗಪ್ರಿಯ ಅವರ ಮಾರ್ಗ ದರ್ಶನದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ನೇತೃತ್ವದಲ್ಲಿ ಜನಪ್ರತಿ ನಿಧಿಗಳು, ಸಂಘ ಸಂಸ್ಥೆಗಳ ಪದಾಧಿಕಾ ರಿಗಳ ತಂಡಗಳನ್ನು ರಚಿಸಲಾಗಿದೆ ಎಂದರು.ಕೆಲವು ಗ್ರಾಮ ಪಂಚಾಯಿತಿಗಳು ದಂಡ ವಿಧಿಸುವ ನಿರ್ಣಯ ಕೈಗೊಂ ಡಿವೆ. ಅದಕ್ಕಾಗಿ ಹಲವಾರು ಯೋಜನೆ ಸಿದ್ಧಪಡಿಸಿದ್ದು, ನಿರ್ದಿಷ್ಟ ಕಾಲಾವ ಧಿಯಲ್ಲಿ ಗುರಿ ತಲುಪಲಾಗುವುದು ಎಂಬ ವಿಶ್ವಾಸ ಇದೆ ಎಂದರು.ದಾಳಿ ವೇಳೆ  ಪಿಡಿಒ ಪ್ರಕಾಶ್‌, ಜನಪ್ರತಿನಿಧಿಗಳಾದ ಆನಂದ್‌, ಶಾಂತರಘು, ಅಂಗನವಾಡಿ ಕಾರ್ಯ ಕರ್ತರು ಭಾಗವಹಿಸಿದ್ದರು. ಅಧಿಕಾರಿಗಳ ದಾಳಿಯನ್ನು ಅರಿಯದೇ ಚೊಂಬಿನೊಂದಿಗೆ ಬಯಲು ಬಹಿರ್ದೆಸೆಗೆ ಹೊರಟ ಗ್ರಾಮಸ್ಥರು, ಅಧಿಕಾರಿಗಳ ಮಾತುಗಳನ್ನು ಕೇಳುತ್ತಾ ಬಹಿರ್ದೆಸೆಯ ಒತ್ತಡವನ್ನು ತಡೆಯ ಲಾಗದೇ, ಕೂಡಲೇ ಅನುದಾನ ಬಳಸಿ ಕೊಂಡು ಶೌಚಾಲಯ ನಿರ್ಮಿಸಿಕೊ ಳ್ಳುತ್ತೇವೆ ಎಂದು ಭರವಸೆ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.