ಬ್ರಿಸ್ಬೇರ್ನ್: ಪ್ರವಾಸಿ ಭಾರತ ವನಿತೆಯರ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಆರು ವಿಕೆಟ್ ಅಂತರದ ಗೆಲುವು ಸಾಧಿಸಿದೆ.

ಅಲ್ಲದೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ.

ಮೊದಲು ಬ್ಯಾಟಿಂಗ್ ನಡೆಸಿದ ಭಾರತ, ಸ್ಮೃತಿ ಮಂದಾನ ಹಾಗೂ ನಾಯಕಿ ಹರ್ಮನ್ಪ್ರೀತ್ ಕೌರ್ ಆಕರ್ಷಕ ಅರ್ಧಶತಕಗಳ ಹೊರತಾಗಿಯೂ 48.3 ಓವರ್ಗಳಲ್ಲಿ 214 ರನ್ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು.

ಈ ಗುರಿ ಬೆನ್ನಟ್ಟಿದ ಆಸೀಸ್ 38.2 ಓವರ್ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ನಾಯಕಿ ಅಲೀಸಾ ಹೀಲಿ (50), ಬೆತ್ ಮೂನಿ (76) ಹಾಗೂ ಅನ್ನಾಬೆಲ್ ಸದರ್ಲ್ಯಾಂಡ್ (48*) ಉಪಯುಕ್ತ ಬ್ಯಾಟಿಂಗ್ ಮಾಡುವ ತಂಡವನ್ನು ಗೆಲುವಿನ ದಡ ಸೇರಿಸಿದರು.

ಈ ಮೊದಲು ಭಾರತದ ಪರ ಮಂದಾನ 58 ಹಾಗೂ ಹರ್ಮನ್ಪ್ರೀತ್ 53 ರನ್ ಗಳಿಸಿ ಮಿಂಚಿದರು. ಆದರೆ ಪ್ರತೀಕಾ ರಾವಲ್ (0), ಶೆಫಾಲಿ ವರ್ಮಾ (4), ಜೆಮಿಮಾ ರಾಡ್ರಿಗಸ್ (8) ಹಾಗೂ ದೀಪ್ತಿ ಶರ್ಮಾ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಕೆಳ ಕ್ರಮಾಂಕದಲ್ಲಿ ಕಾಶ್ವಿ ಗೌತಮ್ 43 ರನ್ಗಳ ಉಪಯುಕ್ತ ಬ್ಯಾಟಿಂಗ್ ಪ್ರದರ್ಶಿಸಿದರು.

ಏಕದಿನ ಸರಣಿಗೂ ಮುನ್ನ ನಡೆದ ಟಿ20 ಸರಣಿಯಲ್ಲಿ ಭಾರತ ಚಾರಿತ್ರಿಕ ಸರಣಿ ಗೆಲುವು ಸಾಧಿಸಿತ್ತು.
.T20 WC: ಭಾರತ ಸೇರಿದಂತೆ ಸೂಪರ್ 8ರ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.ಕರ್ನಾಟಕಕ್ಕೆ 9ನೇ ರಣಜಿ ಕಿರೀಟ: ವಿನಯ್ ವಿಶ್ವಾಸ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.