ಲಂಡನ್, (ಪಿಟಿಐ): ನಾಸಾದ ಯುಎಆರ್ಎಸ್ ಉಪಗ್ರಹದ ಅವಶೇಷಗಳು ಪೆಸಿಫಿಕ್ ಮಹಾಸಾಗರದಲ್ಲಿ ಬಿದ್ದ ಬೆನ್ನಲ್ಲಿಯೇ ಇಂಥದ್ದೇ ಮತ್ತೊಂದು ಉಪಗ್ರಹವು ಇದೀಗ ಬೀಳುವ ಹಂತದಲ್ಲಿದೆ.

ಜರ್ಮನಿಯ `ರೊಸ್ಯಾಟ್~ ಉಪಗ್ರಹವು ಈ ತಿಂಗಳ ಅಂತ್ಯದಲ್ಲಿ ಅಥವಾ ನವೆಂಬರ್ನಲ್ಲಿ ಬಾಹ್ಯಾಕಾಶ ಕಕ್ಷೆಯಿಂದ ಭೂಮಿಗೆ ಬೀಳಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

1990ರಲ್ಲಿ ಈ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಉಡಾಯಿಸಲಾಗಿತ್ತು. 1998ರಲ್ಲಿ ಇದರ ಆಯುಷ್ಯ ಮುಗಿದಿತ್ತು. ಅಲ್ಲಿಂದ ಈ ಉಪಗ್ರಹವು ಭೂಮಿಯ ಸುತ್ತ ಪರಿಭ್ರಮಣ ನಡೆಸುತ್ತಿತ್ತು.

ಎರಡೂವರೆ ಟನ್ ಭಾರದ ಈ ಉಪಗ್ರಹವು ಬೇರಾವುದೆ ಆಕಾಶಕಾಯಕ್ಕೆ ಡಿಕ್ಕಿ ಹೊಡೆಯುವ ಸಾಧ್ಯತೆ ಬಹಳ ಕಡಿಮೆ ಇದೆ ಎಂಬುದು ವಿಜ್ಞಾನಿಗಳ ಅಭಿಪ್ರಾಯ.

ಉಪಗ್ರಹವು ನಿರ್ದಿಷ್ಟವಾಗಿ ಎಲ್ಲಿ ಬೀಳುತ್ತದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಆದರೆ ಎಲ್ಲೇ ಬಿದ್ದರೂ ಹೆಚ್ಚಿನ ಹಾನಿಯಾಗುವುದಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮಂಗಳನಲ್ಲಿ ಹೆಚ್ಚಿನ ನೀರು!

ವಾಷಿಂಗ್ಟನ್, (ಪಿಟಿಐ): ಚಂದ್ರನ ನಂತರ ಖಗೋಳ ವಿಜ್ಞಾನಿಗಳ ಕುತೂಹಲದ ಕೇಂದ್ರವಾಗಿರುವ ಮಂಗಳನ ವಾತಾವರಣದಲ್ಲಿ ಊಹೆಗಿಂತ ಹೆಚ್ಚಿನ ಪ್ರಮಾಣದ ನೀರು ಇರುವುದಾಗಿ ಅಧ್ಯಯನ ವರದಿ ಹೇಳಿದೆ.

ಗ್ರಹದ ಮೇಲ್ಮಟ್ಟದ ವಾತಾವರಣದಲ್ಲಿ ಕಂಡುಬಂದಿರುವ ಘನೀಕೃತ ಮೋಡಗಳಲ್ಲಿ ಧೂಳಿನ ಕಣಗಳಿಗಿಂತ ಹೆಚ್ಚಿನ ಪ್ರಮಾಣದ ನೀರಿನ ತೇವಾಂಶ ಇದೆ. ಈ ಮೊದಲು ವಿಜ್ಞಾನಿಗಳು ಊಹಿಸಿದ ಪ್ರಮಾಣಕ್ಕಿಂತ 10ರಿಂದ ನೂರು ಪಟ್ಟು ಹೆಚ್ಚಿನ ಪ್ರಮಾಣದ ನೀರು ಮಂಗಳನ ವಾತಾವರಣದಲ್ಲಿದೆ ಎನ್ನುತ್ತಾರೆ ಸಂಶೋಧನೆ ನಡೆಸಿರುವ ಖಗೋಳ ವಿಜ್ಞಾನಿಗಳು.

ಕುರಿಗಳಿಗೆ ಸ್ಮರಣ ಶಕ್ತಿ ಹೆಚ್ಚು!

ವಾಷಿಂಗ್ಟನ್, (ಪಿಟಿಐ): ಕುರಿಗಳು ಬುದ್ಧಿವಂತ ಪ್ರಾಣಿಗಳಲ್ಲ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಅವುಗಳ ಸ್ಮರಣ ಶಕ್ತಿ ಮಾತ್ರ ಅತ್ಯದ್ಭುತ!

ಕುರಿಗಳಿಗೆ ಮನುಷ್ಯರಿಗಿಂತಲೂ ಸ್ಮರಣ ಶಕ್ತಿ ಹೆಚ್ಚಿರುತ್ತದೆಯಂತೆ! ಹಾಗಂತ ನೂತನ ಅಧ್ಯಯನವೊಂದು ಹೇಳಿದೆ.

ಕುರಿಗಳು ತಮ್ಮದೇ ಜಾತಿಯ 50 ಕುರಿಗಳ ಮುಖಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದಲ್ಲದೇ, ವಾಸನೆ ಯಿಂದಾಗಿ ಎರಡು ವರ್ಷದ ಬಳಿಕವೂ ಅವುಗಳನ್ನು ಗುರುತಿಸು ತ್ತವೆ ಎಂದು ಪಶ್ಚಿಮ ಆಸ್ಟ್ರೇ ಲಿಯಾ ವಿಶ್ವವಿದ್ಯಾಲಯ ನೇತೃತ್ವ ದಲ್ಲಿ ಅಂತರರಾಷ್ಟ್ರೀಯ ತಂಡ ವೊಂದು ನಡೆಸಿದ ಅಧ್ಯಯನದಲ್ಲಿ ಹೇಳಲಾಗಿದೆ.

ಯಾವುದು ತನ್ನ ಹಿಂಡಿನ ಕುರಿ, ಯಾವುದು ಸ್ನೇಹಪರ, ಯಾವುದು ಆಕ್ರಮಣಕಾರಿ ಎಂಬುದನ್ನು ಕುರಿಗಳು ತಿಳಿದುಕೊಂಡಿರುತ್ತವೆ. ಇದು ಹಿಂಡಿನಲ್ಲಿ ಅದರ ಶ್ರೇಣಿಯ ಪ್ರಾಧಾನ್ಯತೆಯನ್ನು, ಸ್ಥಾನವನ್ನು ಅರಿತುಕೊಳ್ಳಲು ಸಹಾಯ ಮಾಡುತ್ತದೆ ಎಂದು ಅಧ್ಯಯನ ತಂಡದ ಮುಖ್ಯಸ್ಥ ಗ್ರೇಮ್ ಮಾರ್ಟಿನ್ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.