ಸವಣೂರ: ತಾಲ್ಲೂಕಿನ ಪ್ರತಿಯೊಂದು ಗ್ರಾಮಗಳಲ್ಲಿಯೂ ವ್ಯಾಪಿಸಿಕೊಂಡಿ ರುವ ಮದ್ಯ ಮಾರಾಟದ ವಿರುದ್ಧ ಮಹಿಳೆಯರ ಪ್ರತಿಭಟನಾ ಸರಣಿ ಮುಂದುವರೆದಿದೆ.

ತಾಲ್ಲೂಕಿನ ಯಲವಿಗಿ ಗ್ರಾಮದಲ್ಲಿನ ವೈನ್ ಶಾಪ್ ಮಹಿಳೆಯರ ಸಾತ್ವಿಕ ಆಕ್ರೋಶಕ್ಕೆ ತುತ್ತಾಗಿದೆ. ನೆಮ್ಮದಿಯ ಜೀವನ ತಮಗೆ ಬೇಕು ಎಂಬ ಬೇಡಿಕೆಯನ್ನು ಹೊಂದಿದ್ದ ಮಹಿಳೆಯರು, ಗ್ರಾಮದಲ್ಲಿ ಮದ್ಯ ಮಾರಾಟ ತಡೆಯುವಂತೆ ಸ್ಥಳೀಯ ಅಧಿಕಾರಿಗಳಿಂದ ಹಿಡಿದು ಅಬಕಾರಿ ಸಚಿವರಿಗೆ, ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನ ಆಗಿಲ್ಲ. ಕೊರಳಲ್ಲಿನ ಮಾಂಗಲ್ಯವನ್ನೂ ಕುಡಿತದ ಚಟ ಬಿಡುತ್ತಿಲ್ಲ ಎಂಬ ಅಳಲು ತೋಡಿಕೊಂಡರು.

ಗ್ರಾಮದಲ್ಲಿನ ವೈನ್ಶಾಪ್ನ್ನು ಒತ್ತಾಯಪೂರ್ವಕವಾಗಿ ಬಂದ್ ಮಾಡಿ ಬೀಗ ಹಾಕಿದ ಪ್ರತಿಭಟನಾ ಕಾರರು, ಅದನ್ನು ಸ್ಥಳಾಂತರಿಸಬೇಕು ಎಂಬ ಬೇಡಿಕೆ ಇಟ್ಟರು. ಮದ್ಯ ಮಾರಾಟಗಾರರೊಂದಿಗೆ ವಾಗ್ವಾದ ವನ್ನೂ ಕೈಗೊಂಡರು. ಇದಕ್ಕೂ ಮುನ್ನ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಸಭೆ ಜರುಗಿಸಿದ ಮಹಿಳೆಯರು ಯಲವಿಗಿ ಗ್ರಾಮವನ್ನು ಮದ್ಯ ಮುಕ್ತವಾಗಿಸಬೇಕು ಎಂಬ ನಿರ್ಣಯ ಕೈಗೊಂಡರು. ಬಳಿಕ ಮೆರ ವಣಿಗೆಯ ಮೂಲಕ ವೈನ್ ಶಾಪ್ಗೆ ಬಂದು ಅದಕ್ಕೆ ಬೀಗ ಹಾಕಿದರು. ಗ್ರಾಮದಲ್ಲಿ ಮದ್ಯ ಮಾರಾಟ ಮುಂದು ವರೆಸದಂತೆ ಎಚ್ಚರಿಕೆಯನ್ನೂ ನೀಡಿದರು.

ಮಹಿಳಾ ಸ್ವ ಸಹಾಯ ಸಂಘದ ಒಕ್ಕೂಟದ ಅಧಕ್ಷೆ ಪಿ.ಎಸ್ ಗಡೆಪ್ಪ ನವರ, ಎಸ್.ಎಂ.ಪಾಟೀಲ, ಗಿರಿಜಾ ತಿಪ್ಪಕ್ಕನವರ, ಯಲ್ಲವ್ವ ಗಾಣಿಗೇರ, ರತ್ನವ್ವ ಉಮಚಗಿ, ಪುಷ್ಪಾ ಉಪ್ಪಾರ, ಗಿರಿಜವ್ವ ಸಂಕಪ್ಪನವರ, ಎಸ್.ಪಿ ರಟಗೇರಿ, ರೇಣಕ್ಕ ಅತ್ತಿಗೇರಿ, ಲಕ್ಷ್ಮವ್ವ ರಾಮಗೇರಿ, ಮಹಾದೇವಿ ಪಗಡಿ, ಮಲ್ಲಮ್ಮ ಹುಲಗೂರ, ಫಕ್ಕೀರವ್ವ ನಾಗರಮಡುವು, ಯಲ್ಲವ್ವ ಬಾರಕೇರ, ಫಕ್ಕೀರವ್ವ ಕಂಬಳಿ, ಗುಳಪ್ಪ ಮುಗ ದೂರ, ಶೇಖರಗೌಡ ಹೊಸಮನಿ, ಯಲ್ಲಪ್ಪ ಹೊಸಮನಿ, ಶೇಖಪ್ಪ ಸಂಕಪ್ಪನವರ ಸೇರಿದಂತೆ ಹಲವಾರು ಪ್ರಮುಖರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.