ಮಲಾಲ ದಿನಕ್ಕೆ ಒಡಿಶಾದ ಬುಡಕಟ್ಟು ಯುವಕ

ಗುರುವಾರ , ಜೂಲೈ 18, 2019
22 °C

ಮಲಾಲ ದಿನಕ್ಕೆ ಒಡಿಶಾದ ಬುಡಕಟ್ಟು ಯುವಕ

Published:
Updated:

ಭುವನೇಶ್ವರ (ಐಎಎನ್‌ಎಸ್): ಒಡಿಶಾದ 17 ವರ್ಷದ ಬುಡಕಟ್ಟು ವಿದ್ಯಾರ್ಥಿ ಅಮೆರಿಕದಲ್ಲಿ ಜು. 12 ರಂದು ನಡೆಯಲಿರುವ `ಮಲಾಲ ದಿನ' ಆಚರಣೆಯಲ್ಲಿ ಭಾಗವಹಿಸಲಿರುವುದಾಗಿ ವಿಶ್ವ ಸಂಸ್ಥೆಯ ಮುಖ್ಯಕಚೇರಿ ತಿಳಿಸಿದೆ.ಕಳಿಂಗಾ ಸಾಮಾಜಿಕ ವಿಜ್ಞಾನ ಶಿಕ್ಷಣ ಸಂಸ್ಥೆಯಲ್ಲಿ ಓದುತ್ತಿರುವ ಬುಡಕಟ್ಟು ವಿದ್ಯಾರ್ಥಿ ಲಕ್ಷ್ಮಣ್ ಹೆಮ್‌ಬ್ರಮ್ ಭಾರತದ ಪರವಾಗಿ `ಮಲಾಲ ದಿನ' ಆಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ.ಮಯೂರ್‌ಭಂಜ್ ಜಿಲ್ಲೆಯ ಬಡ ಸಂತಾಲ ಬುಡಕಟ್ಟು ಕುಟುಂಬದಲ್ಲಿ ಜನಿಸಿದ ಲಕ್ಷ್ಮಣ್ ಯುವ ನಾಯಕನ ಗುಣ ಹೊಂದಿರುವ ಬುದ್ಧಿವಂತ ವಿದ್ಯಾರ್ಥಿ.ಪಾಕಿಸ್ತಾನದ ಹೋರಾಟಗಾರ್ತಿ ಮಲಾಲಳ 16 ನೇ ಜನ್ಮದಿನಾಚರಣೆಯನ್ನು ಮಲಾಲ ದಿನವನ್ನಾಗಿ ಜು. 11, 12 ರಂದು ಆಚರಿಸಲು ವಿಶ್ವ ಸಂಸ್ಥೆ ನಿರ್ಧರಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry