ಸೋಮವಾರ, ಮೇ 23, 2022
30 °C

ಮಳೆನೀರು ಪಾಲಾದ ನೀಲಾದ್ರಿ ರಸ್ತೆ

- ಡಾ. ಆರ್. ದತ್ತಕುಮಾರ್,ಹಿರಿಯ ವ್ಯವಸ್ಥಾಪಕ,ವಿಪ್ರೊ ಟೆಕ್ನಾಲಜೀಸ್‌• . Updated:

ಅಕ್ಷರ ಗಾತ್ರ : | |

ಲೆಕ್ಟ್ರಾನಿಕ್ ಸಿಟಿ ಭಾಗದ ಜನತೆ 2008ರಿಂದ ನೀಲಾದ್ರಿ ರಸ್ತೆಯನ್ನು ಬಳಸುತ್ತಿದ್ದಾರೆ. ವಿಪ್ರೋ ಗೇಟ್ ಜಂಕ್ಷನ್‌ಗೆ ತಲುಪಲು ಅತಿ ಸಮೀಪದ ರಸ್ತೆ ಎಂದರೆ ಇದೇ. ಆದರೆ 2011ರಿಂದ ಈಚೆಗೆ ಇಲ್ಲಿ ಕಟ್ಟಡ ನಿರ್ಮಾಣ ಭರದಿಂದ ಸಾಗಿದೆ. ಹಲವಾರು ವಸತಿ ಸಮುಚ್ಛಯಗಳು ತಲೆ ಎತ್ತಿವೆ.

ಇದರ ಜತೆಯಲ್ಲಿ ರಸ್ತೆ ಬದಿಯ ಅಂಗಡಿಗಳೂ ತಲೆ ಎತ್ತಿವೆ. ಆದರೂ ಇಲ್ಲೊಂದು ಸಮರ್ಪಕ ಒಳಚರಂಡಿ ವ್ಯವಸ್ಥೆ ಇಲ್ಲ. ಹೀಗಾಗಿ ಮಳೆ ಬಂತೆಂದರೆ ಅಕ್ಷರಶಃ 400 ಮೀಟರ್‌ಗಳ ಈ ರಸ್ತೆ ಕೆರೆಯಾಗುತ್ತದೆ.ದ್ವಿಚಕ್ರ ವಾಹನ ಸವಾರರಂತೂ ತಾವು ಕಲಿತ ಎಲ್ಲಾ ಕಸರತ್ತು ಮಾಡಿ ಈ ರಸ್ತೆ ದಾಟಬೇಕು. ಬಹುತೇಕ ಐಟಿ ಮಂದಿ ಈ ರಸ್ತೆಯನ್ನೇ ಅವಲಂಭಿಸಿರುವುದರಿಂದ ರಸ್ತೆ ಜಾಮ್ ಕೂಡಾ ಇಲ್ಲಿ ಸಾಮಾನ್ಯ. ಬಿಬಿಎಂಪಿ ಅಧಿಕಾರಿಗಳು ತಕ್ಷಣವೇ ಈ ರಸ್ತೆಯತ್ತ ತಮ್ಮ ಚಿತ್ತ ಹರಿಸಿದಲ್ಲಿ ಸಾವಿರಾರು ಮಂದಿ ವಾಹನ ಸವಾರರಿಗೆ ಉಪಕಾರ ಮಾಡಿದಂತಾಗುತ್ತದೆ.

ಜನರ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶದಿಂದ `ಕುಂದು-ಕೊರತೆ' ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳಲಿದೆ. ಹಾಗಾಗಿ ಈ ವಿಳಾಸಕ್ಕೆ ಬರೆಯುವವರು ಆದಷ್ಟು ಸಂಕ್ಷಿಪ್ತವಾಗಿ ಸಮಸ್ಯೆಗಳ ಕುರಿತು ಬರೆಯಬೇಕು. ಈ ಸಮಸ್ಯೆ ನಿವಾರಿಸಲು ತಾವು ಪಟ್ಟ ಪ್ರಯತ್ನಗಳು, ಅದಕ್ಕೆ ಯಾವ ಅಧಿಕಾರಿ/ ಕಾರ್ಪೊರೇಟರ್ ಸ್ಪಂದಿಸಲಿಲ್ಲ ಎಂಬುದು ಸಕಾರಣವಾಗಿರಲಿ. ಸಮಸ್ಯೆಗಳಿಗೆ ಸ್ಪಷ್ಟವಾಗಿ ಕನ್ನಡಿ ಹಿಡಿವ ಫೋಟೋ ಇರಲಿ.

ಈ-ಮೇಲ್:   metropv@prajavani.co.in

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.