ಶನಿವಾರ, ಸೆಪ್ಟೆಂಬರ್ 26, 2020
21 °C

ಮಳೆ ಕುಂಠಿತ: ಕುಕ್ಕುಟ ಆಹಾರ ದುಬಾರಿ ಸಂಭವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಳೆ ಕುಂಠಿತ: ಕುಕ್ಕುಟ ಆಹಾರ ದುಬಾರಿ ಸಂಭವ

ಮುಂಬೈ(ಪಿಟಿಐ): ಮುಂಗಾರು ಮಳೆ ಕೊರತೆ ಕೃಷಿ ಕ್ಷೇತ್ರಕ್ಕಷ್ಟೇ ಅಲ್ಲ, ಕುಕ್ಕುಟ ಉದ್ಯಮಕ್ಕೂ ಸಂಕಷ್ಟ ತಂದೊಡ್ಡಲಿದೆ!ಮಳೆ ಇಲ್ಲದೆ ಬೆಳೆ ಇಲ್ಲ. ಕೋಳಿ ಆಹಾರಕ್ಕೆ ಮಿಶ್ರ ಮಾಡುವ ಮುಸುಕಿನ ಜೋಳ, ಸೋಯಾ ಮತ್ತಿತರ ಧಾನ್ಯಗಳ ಕೊರತೆಯಾಗಲಿದೆ. ಪರಿಣಾಮ ಕೋಳಿ ಆಹಾರದ ಧಾರಣೆ ದುಪ್ಪಟ್ಟಾಗಲಿದೆ.ಕೋಳಿ ಆಹಾರ  ಧಾರಣೆ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ 18ರಷ್ಟು ಹೆಚ್ಚಳವಾಗಿದೆ. ಮಳೆ ಕೈಕೊಟ್ಟಿರುವುದರಿಂದ ಮುಂಬರುವ ದಿನಗಳಲ್ಲಿ ಕೋಳಿ ಆಹಾರದ ಬೆಲೆ ಶೇ 69ರವರೆಗೂ ಹೆಚ್ಚುವ ಸಂಭವವಿದೆ ಎಂದು ಸಂಶೋಧನಾ ಸಂಸ್ಥೆ   ನೊಮುರಾ~ ಹೇಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.