ಶುಕ್ರವಾರ, ಜೂನ್ 18, 2021
22 °C

ಮಳೆ ನೀರು ಸಂಗ್ರಹಿಸಿ, ಪರಿಸರ ಉಳಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಲೂರು: ಮಳೆ ನೀರು ಸಂಗ್ರಹಿಸಿರುವುದರಿಂದ ನಮ್ಮ ಸುತ್ತಲಿನ ಉಷ್ಣಾಂಶವನ್ನು ಕಡಿಮೆ ಮಾಡಬಹುದು ಎಂದು ಜಿಲ್ಲಾ ಅರಣ್ಯಾಧಿಕಾರಿ ಮುನೇಗೌಡ ಸಲಹೆ ನೀಡಿದರು.

 

ಪಟ್ಟಣದಲ್ಲಿ ಬುಧವಾರ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ವಿಶ್ವ ಅರಣ್ಯ ಹಾಗೂ ವಿಶ್ವ ಜಲ ದಿನ ಅಂಗವಾಗಿ `ಮಳೆ ನೀರು ಕೊಯ್ಲು~ ಕುರಿತು  ಕೈಗಾರಿಕಾ ಉದ್ದಿಮೆದಾರರಿಗೆ ತರಬೇತಿ ಕಾರ್ಯಾ ಗಾರದಲ್ಲಿ ಮಾತನಾಡಿದರು.ಗ್ರಾಮೀಣ ಪ್ರದೇಶದ್ಲ್ಲಲೂ ಬಿಸಿಲಿನ ಬೆಗೆ ಹೆಚ್ಚಾಗುತ್ತಿದೆ. ಅರಣ್ಯ ನಾಶ ಹಾಗೂ ಕಾರ್ಖಾನೆಗಳಿಂದ ಬಿಡುಗಡೆಯಾಗುವ ಮಾಲಿನ್ಯದಿಂದ ಪರಿಸರ ಸಂಪೂರ್ಣವಾಗಿ ಹದಗೆಡಲು ಕಾರಣವಾಗಿದೆ ಎಂದು ವಿವರಿಸಿದರು.ರಾಜ್ಯ ಮಾಲಿನ್ಯ ನಿಯಂತ್ರಣಾ ಮಂಡಳಿ ಅಧಿಕಾರಿ ಬಿ.ಎನ್. ರಮೇಶ್ ಕುಮಾರ್ ಮಾತನಾಡಿ, ಬೇಸಿಗೆಯ ಅವಧಿಯಲ್ಲಿ ನೀರನ್ನು ಮಿತವಾಗಿ ಬಳಸಬೇಕು. ಪ್ರತಿಯೊಂದು ಕುಟುಂಬ ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಂಡಾಗ ಮಾತ್ರ ನೀರಿನ ಸಮಸ್ಯೆ ಬಗೆ ಹರಿಯಲು ಸಾಧ್ಯ ಎಂದು ಹೇಳಿದರು.ಮಳೆ ನೀರು ಸಂಗ್ರಹ ತಜ್ಞ ಅಯ್ಯಪ್ಪ ಮಸಗಿ, ಜಿಲ್ಲಾ ಪರಿಸರ ಅಧಿಕಾರಿ ವಿಜಿ ಕಾರ್ತೀಕೇಯನ್, ಕ್ಲೋರೈಡ್ ಅಲಾಯ್ಸನ ಸಿಇಒ ಸರೇಂದ್ರ ಜೋಸೆಫ್, ಕರ್ನಾಟಕ ಕೈಗಾರಿಕ ಅಭಿವೃದ್ಧಿ ಮಂಡಳಿ ಅಧಿಕಾರಿ ರಾಮಕೃಷ್ಣ ಹಾಜರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.