ಬುಧವಾರ, ಮಾರ್ಚ್ 3, 2021
19 °C

ಮಳೆ ಬಂದರೆ ಮಿಲನಕ್ಕೆ ಬರ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಳೆ ಬಂದರೆ ಮಿಲನಕ್ಕೆ ಬರ!

ಲಂಡನ್ (ಐಎಎನ್‌ಎಸ್):ಬ್ರಿಟನ್ ಜೋಡಿಗಳಿಗೆ ಧಾರಾಕಾರ ಮಳೆ ಎಂದರೆ ಸಾಕು ಕಾಮೋನ್ಮಾದವೆಲ್ಲಾ ಜರ‌್ರನೇ ಇಳಿದು ಹೋಗುತ್ತದೆಯಂತೆ!ಹೌದು. ಇಂತಹ ಕೌತುಕದ ಸಂಗತಿಯನ್ನು ಅಂತರಜಾಲ ತಾಣ `ಮಿಸ್ ಟ್ರಾವೆಲ್ ಡಾಟ್‌ಕಾಮ್~ ಸಮೀಕ್ಷೆ ತಿಳಿಸಿದೆ. ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ 20 ಸಾವಿರ ಜನರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು `ಡೈಲಿ ಎಕ್ಸ್‌ಪ್ರೆಸ್~ ವರದಿ ಮಾಡಿದೆ.ರಜಾ ದಿನಗಳ ಉಲ್ಲಾಸದ ರತಿಕ್ರೀಡೆಗೆ ಒಳ್ಳೆಯ ಬಿಸಿಲು ಇದ್ದರೆ ಚೆನ್ನ ಎಂಬುದು ಇಲ್ಲಿನ ಮಹಿಳೆಯರು ಮತ್ತು ಪುರುಷರು ಅಂಬೋಣವಂತೆ.ಹೆಂಗಸರಂತೂ ಮೊಂಬತ್ತಿ ಬೆಳಕಿನ ಸ್ನಾನ ಎಂದರೆ ವ್ಹಾವ್ ಎಂದೇ ಬಾಯಿ ಬಿಡುತ್ತಾರಂತೆ.  ಸ್ನಾನದ ಬಳಿಕ ಮಂಚಗಳಲ್ಲಿ ಸ್ವಚ್ಛ ಹೊದಿಕೆಗಳು, ಬಟ್ಟೆಗಳು ಇರಬೇಕೆಂದೂ ಅವರು ಬಯಸುತ್ತಾರೆ.  ಹೆಂಗಸರು ಕಿರಿದಾದ ಈಜುಡುಗೆಯಲ್ಲಿದ್ದರೆ ಅಥವಾ ಬೂದು ಬಿಳಿ ಬಣ್ಣದ ಕಂಚುಕ ಅಥವಾ ಒಳ ಉಡುಪಿನಲ್ಲಿದ್ದರೆ ಬಹಳ ಚೆನ್ನ ಎಂಬುದು ಗಂಡಸರ ಮನದಾಸೆ.ಸಮೀಕ್ಷೆಯಲ್ಲಿ ಕೇಳಿರುವ ಮತ್ತೊಂದು ಪ್ರಶ್ನೆಯಲ್ಲಿ, ಗಂಡಸರು ತಾವು ವಾರಕ್ಕೆ ಒಟ್ಟು ಆರು ಬಾರಿಯಾದರೂ ಮಿಲನ ಮಹೋತ್ಸವ ಆಚರಿಸಲು ಇಷ್ಟಪಡುತ್ತೇವೆ ಎಂದು ನುಡಿದಿದ್ದರೆ, ಹೆಂಗಸರು ವಾರಕ್ಕೆ ಐದೇ ಬಾರಿ ಸಾಕೆಂದು ಉಲಿದಿದ್ದಾರೆ.ಇವರಲ್ಲಿ ಕೆಲವರಂತೂ ಮೊದಲ ರಾತ್ರಿಯಲ್ಲಿ ತಾವು ಎರಡೆರಡು ಬಾರಿ ಮೈಥುನದ ಮೇರು ಸ್ಥಿತಿ ತಲುಪಿದ್ದೆವು ಎಂದು ನೆನಪಿಸಿ ಕೊಂಡಿದ್ದಾರಂತೆ.ವೆಬ್‌ಸೈಟಿನ ಸಂಸ್ಥಾಪಕ ಬ್ರಾಂಡನ್ ವೇಡ್ ಪ್ರಕಾರ, `ಬ್ರಿಟನ್‌ನಲ್ಲಿ ಪ್ರವಾಸವೇ ಒಂದು ರೋಚಕ ಕಾಮೋತ್ತೇಜಕ ಸಂಗತಿ~ ಎಂದು ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.