ಯೇ ಚೀಜ್ ಬಡಿ ಹೈ ಮಸ್ತ್ ಮಸ್ತ್ ಅಂತ ಹಾಡಿ, ಎದೆಬಡಿತ ಹೆಚ್ಚಿಸಿದ್ದ ರವೀನಾ ಟಂಡನ್ಗೆ ಈಗ ಆತಂಕವಾಗುತ್ತಿದೆಯಂತೆ!

ಖಾಸಗಿ ವಾಹಿನಿಗಾಗಿ `ಇಸಿ ಕಾ ನಾಮ್ ಹೈ ಜಿಂದಗಿ~ ಎಂಬ ಕಾರ್ಯಕ್ರಮ ನಡೆಸಿಕೊಡಲು ಸಿದ್ಧರಾಗಿರುವ ರವೀನಾಗೆ ಕಿರುತೆರೆಯ ಪ್ರವೇಶ ಆತಂಕ ಹುಟ್ಟಿಸಿದೆ ಎಂದೂ ಹೇಳಿದ್ದಾರೆ.

ಈ ಶೋನಲ್ಲಿ ಬರುವ ಬಹುತೇಕ ತಾರೆಯರು ನನ್ನ ಸ್ನೇಹಿತರು ಎಂಬುದೇ ಸಮಾಧಾನದ ವಿಷಯ. ಆದರೂ ಇಂಥ ಕಾರ್ಯಕ್ರಮಗಳಿಗೆ ಸಾಕಷ್ಟು ತಯಾರಿ ಹಾಗೂ ತ್ವರಿತವಾಗಿ ಪ್ರತಿಕ್ರಿಯಿಸುವ ಅಗತ್ಯವಿರುತ್ತದೆ. ಮಾತುಗಾತಿಯಲ್ಲದ ನಾನು ಇದನ್ನೆಲ್ಲ ನಿಭಾಯಿಸಬಲ್ಲೆನೆ ಎಂಬ ಆತಂಕವಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಈ ನಡುವೆ ಹಿರಿ ತೆರೆಗೂ ಬರಲಿರುವ ಎರಡು ಮಕ್ಕಳ ಅಮ್ಮ ರವೀನಾ `ಶೋಭನಾ 7 ನೈಟ್ಸ್~ `ಗಿನ್ಲಿಯಾ ಆಸ್ಮಾನ್~ ಚಿತ್ರೀಕರಣವನ್ನೂ ಮುಗಿಸಿದ್ದಾರೆ.

ಎನ್ಡಿಟಿವಿ ಇಂಡಿಯಾದಲ್ಲಿ ಪ್ರಸಾರವಾಗುತ್ತಿರುವ ಈ ಕಾರ್ಯಕ್ರಮದಲ್ಲಿ ಈಗಾಗಲೇ ರವೀನಾ ಟಂಡನ್ ವಿದ್ಯಾಬಾಲನ್, ಅವರ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಮಾತನಾಡಿದ್ದಾರೆ.

ಅಜಯ್ ದೇವಗನ್, ಮಧುರ್ ಭಂಡಾರ್ಕರ್, ಕರಣ್ ಜೋಹರ್, ಬೊಮನ್ ಇರಾನಿ ಮುಂತಾದವರು ಶೋದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ತಾರೆಯರ ಬದುಕಿನ ಇನ್ನೊಂದು ಮುಖವನ್ನು ಪರಿಚಯಿಸಲಾಗುತ್ತದೆ. ಅವರ ಸಾಮಾನ್ಯ ಜೀವನದ ಪರಿಚಯವನ್ನು ನೋಡುಗರಿಗೆ ಮಾಡಿಕೊಡಲಾಗುತ್ತದೆ. ಮಾನವೀಯ ಸ್ಪರ್ಶವಿದೆ. ಇದೇ ಗುಣದಿಂದಾಗಿಯೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ತೀರ್ಮಾನ ಕೈಗೊಂಡಿದ್ದೇನೆ ಎಂದೂ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.