ಶುಕ್ರವಾರ, ಜೂನ್ 25, 2021
26 °C

ಮಾಯಾವತಿ ಆಸ್ತಿ 111 ಕೋಟಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಖನೌ (ಪಿಟಿಐ): ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮಾಯಾವತಿ ಪಕ್ಷ ಸೋತಿದೆ ನಿಜ, ಆದರೆ ಅವರ ಆಸ್ತಿ ಶೇಕಡಾ 25ರಷ್ಟು ಹೆಚ್ಚಾಗಿದೆ.

ಕಳೆದ ಎರಡು ವರ್ಷಗಳಲ್ಲಿ ಅವರ ಆಸ್ತಿ ಶೇಕಡಾ 25ರಷ್ಟು ಹೆಚ್ಚಾಗಿದ್ದು, ಒಟ್ಟು 111 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ.ಬಡ ದಲಿತ ಮಹಿಳೆ ಎಂದು ಹೇಳಿಕೊಳ್ಳುವ ಮಾಯಾವತಿ ಅವರು 2007ರಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿಯಾದ ನಂತರ ಅಪಾರ ಆಸ್ತಿಗಳನ್ನು ಮಾಡಿದ್ದಾರೆ.

ನಾಮಪತ್ರ ಸಲ್ಲಿಸುವಾಗ ಅವರು ತಮ್ಮ ಆದಾಯ ಮತ್ತು ಆಸ್ತಿ ವಿವರಗಳನ್ನು ಸಲ್ಲಿಸಿದ್ದು, ಅದರಲ್ಲಿ ಈ ವಿವರಗಳು ಲಭ್ಯವಾಗಿವೆ.

ಲಖನೌ, ದೆಹಲಿಯಲ್ಲಿರುವ ವಸತಿ ಮತ್ತು ವಾಣಿಜ್ಯ ಕಟ್ಟಡಗಳು, ಆಭರಣಗಳು ಮತ್ತು ನಗದು ಸೇರಿ ಒಟ್ಟು 111.64 ಕೋಟಿ ಆಸ್ತಿಯನ್ನು ಮಾಯಾವತಿ ಹೊಂದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.