ಮಾರನ್ ವಿರುದ್ಧ ಪುರಾವೆ ಇಲ್ಲ

ಗುರುವಾರ , ಮೇ 23, 2019
24 °C

ಫಲಿತಾಂಶ (ಮುನ್ನಡೆ+ಗೆಲುವು) 0/542

ಮಾರನ್ ವಿರುದ್ಧ ಪುರಾವೆ ಇಲ್ಲ

Published:
Updated:

ನವದೆಹಲಿ (ಐಎಎನ್‌ಎಸ್): 2 ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಏರ್‌ಸೆಲ್ ಕಂಪೆನಿಯ ಷೇರು ಮಾರಾಟದಲ್ಲಿ ದೂರಸಂಪರ್ಕ ಮಾಜಿ ಸಚಿವ ದಯಾನಿಧಿ ಮಾರನ್ ಪಾತ್ರವಿದೆ ಎಂಬುದನ್ನು ಪುಷ್ಟೀಕರಿಸುವ ಯಾವ ದಾಖಲೆಗಳೂ ಇಲ್ಲ ಎಂದು ಸಿಬಿಐ ಸುಪ್ರೀಂಕೋರ್ಟ್‌ಗೆ ಹೇಳಿದೆ.ಏರ್‌ಸೆಲ್ ಕಂಪೆನಿಯ ಷೇರುಗಳನ್ನು ಹೊಂದಿದ್ದ ಸಿ.ಶಿವಶಂಕರನ್ ಅವರ ಮೇಲೆ ಷೇರುಗಳನ್ನು ಮಲೇಷಿಯಾ ಮೂಲದ ಮ್ಯಾಕ್ಸಿಸ್ ಸಮೂಹಕ್ಕೆ ಮಾರಾಟ ಮಾಡಲು ಒತ್ತಡ ಹೇರಿದ ಆರೋಪ ಮಾರನ್ ಮೇಲೆ ಇತ್ತು. ಆದರೆ ಸಿಬಿಐ ಪರವಾಗಿ ಗುರುವಾರ ಹಾಜರಿದ್ದ ವಕೀಲ ಕೆ.ಕೆ.ವೇಣುಗೋಪಾಲ್ ಅವರು ಜಿ.ಎಸ್.ಸಿಂಘ್ವಿ ಮತ್ತು ಎ.ಕೆ.ಗಂಗೂಲಿ ಅವರಿದ್ದ ನ್ಯಾಯಪೀಠದ ಮುಂದೆ, ಈ ಸಂಬಂಧ ಯಾವುದೇ ಸಾಕ್ಷ್ಯಾಧಾರ ಇಲ್ಲ ಎಂದರು.ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿದ್ದಾಗ ದೂರಸಂಪರ್ಕ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಆಗ ಹಣಕಾಸು ಸಚಿವರಾಗಿದ್ದ ಜಸ್ವಂತ್ ಸಿಂಗ್ ಅವರನ್ನು ವಿಚಾರಣೆಗೆ ಒಳಪಡಿಸಬಹುದು. ಅರುಣ್ ಶೌರಿ 2003-04ರ ಅವಧಿಯಲ್ಲಿ ದೂರಸಂಪರ್ಕ ಸಚಿವರಾಗಿದ್ದಾಗ ಉನ್ನತಾಧಿಕಾರ ಸಚಿವರ ಸಮಿತಿಯ (ಇಜಿಒಎಂ) ನೇತೃತ್ವವನ್ನು ಜಸ್ವಂತ್ ವಹಿಸಿದ್ದರು ಎಂದು ವೇಣುಗೋಪಾಲ್ ಇದೇ ವೇಳೆ ತಿಳಿಸಿದರು.ಆದರೆ ಶಿವಶಂಕರನ್ ಏರ್‌ಸೆಲ್ ಕಂಪೆನಿ ಮಾಲೀಕರಾಗಿದ್ದಾಗ ಒಪ್ಪಿಗೆ ಪತ್ರ ನೀಡಲು ದೂರಸಂಪರ್ಕ ಇಲಾಖೆ ಉದ್ದೇಶಪೂರ್ವಕವಾಗಿ ವಿಳಂಬ ಮಾಡಿದೆ ಎಂದೂ ಸಿಬಿಐ ಹೇಳಿದೆ.ಇದೇ ವೇಳೆ ವೇಣುಗೋಪಾಲ್  ಸಿಬಿಐ ತನಿಖೆಯ ಸ್ಥಿತಿಗತಿ ಕುರಿತು ನ್ಯಾಯಾಲಯಕ್ಕೆ ಮುಚ್ಚಿದ ಲಕೋಟೆಯಲ್ಲಿ ವಿವರ ಸಲ್ಲಿಸಿದರು. ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆಗಳೂ ವರದಿ ಸಲ್ಲಿಸಿದವು.ತನಿಖೆಯು ಮುಖ್ಯವಾಗಿ 2002ರಿಂದ 2010ರ ನಡುವಿನ ಅವಧಿಗೆ ಸಂಬಂಧಪಟ್ಟದ್ದಾಗಿದೆ. ಅರುಣ್ ಶೌರಿ ಅವಧಿಯಲ್ಲಿ ಲೋಪಗಳಾಗಿವೆ ಎಂಬುದಕ್ಕೆ ಯಾವ ಪುರಾವೆಯೂ ಲಭ್ಯವಾಗಿಲ್ಲ. ಆದರೆ ಪ್ರಮೋದ್ ಮಹಾಜನ್ ಅವಧಿಯಲ್ಲಿ ದೂರಸಂಪರ್ಕ ನೀತಿ ಹಾಗೂ ಅವುಗಳ ಅನುಷ್ಠಾನದಲ್ಲಿ ಮಾರ್ಪಾಡುಗಳಾಗಿದ್ದು ಈ ಬಗ್ಗೆ ಹೆಚ್ಚಿನ ತನಿಖೆ ನಡೆದಿದೆ ಎಂದು ವೇಣುಗೋಪಾಲ್ ತಿಳಿಸಿದ್ದಾರೆ.ಹಗರಣದಲ್ಲಿ ಗೃಹ ಸಚಿವ ಪಿ.ಚಿದಂಬರಂ ಅವರ ಪಾತ್ರದ ಬಗ್ಗೆ ತನಿಖೆ ನಡೆಸಲು ಕೋರಿ ಜನತಾ ಪಕ್ಷದ ಮುಖ್ಯಸ್ಥ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿರುವ ಅರ್ಜಿ ಸೆ.8ರಂದು ವಿಚಾರಣೆಗೆ ಬರಲಿದೆ.

 

ಮಾರನ್ ವಿರುದ್ಧ ಸಾಕ್ಷ್ಯಾಧಾರ ಇಲ್ಲ ಎಂದು ಸಿಬಿಐ ಹೇಳಿರುವುದಕ್ಕೆ ಡಿಎಂಕೆ ವಕ್ತಾರ ಇಳಂಗೋವನ್ ಹರ್ಷ ವ್ಯಕ್ತಪಡಿಸಿದ್ದು, `ಇಡೀ 2 ಜಿ ಪ್ರಕರಣವೇ ಸಾಕ್ಷ್ಯಾಧಾರ ರಹಿತವಾಗಿದೆ. ರಾಜಾ ಮತ್ತು ಕನಿಮೊಳಿ ವಿರುದ್ಧದ ಪ್ರಕರಣಗಳೂ ಬಿದ್ದುಹೋಗಲಿವೆ~ ಎಂದಿದ್ದಾರೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry