ಶುಕ್ರವಾರ, ಮೇ 14, 2021
21 °C

ಮುದ್ದೇಬಿಹಾಳ, ಸಿಂದಗಿ, ಆಲಮಟ್ಟಿಯಲ್ಲಿ ಬಾಬು ಜಗಜೀವನರಾಂ ಜಯಂತಿ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುದ್ದೇಬಿಹಾಳ: ದಲಿತ ಸಮುದಾಯದಲ್ಲಿಯೇ ಇದ್ದುಕೊಂಡು ದಲಿತರ ಏಳ್ಗೆಗಾಗಿ ಜೀವನ ಪರ್ಯಂತ ಹೋರಾಡಿದ ಡಾ.ಬಾಬು ಜಗ ಜೀವನರಾಮ ಹಾಗೂ ಅಂಬೇಡ್ಕರ್ ಅವರು ಶೋಷಿತ ಸಮುದಾಯದ ಇಬ್ಬರು ಧೃವತಾರೆ ಯರು ಎಂದು ಎಂ.ಜಿ.ವಿ.ಸಿ. ಕಾಲೇಜಿನ ಇತಿಹಾಸ ಉಪನ್ಯಾಸಕ ಡಾ.ಆರ್.ಎಚ್.ಸಜ್ಜನ ಹೇಳಿದರು.ಅವರು ಗುರುವಾರ ತಾಲ್ಲೂಕಾ ಆಡಳಿತದ ಪರವಾಗಿ ತಹಶೀಲ್ದಾರ ಕಚೇರಿಯಲ್ಲಿ ನಡೆದ ಡಾ.ಬಾಬು ಜಗಜೀವನರಾಮ ಅವರ 105ನೇ ಜಯಂತಿ ಕಾರ್ಯಕ್ರಮದ ಮುಖ್ಯ ಉಪನ್ಯಾಸಕ ರಾಗಿ ಮಾತನಾಡಿದರು.ಡಾ.ಬಾಬೂಜಿ  ಅತ್ಯುತ್ತಮ ಸಂಸದೀಯ ಪಟುಗಳಾಗಿ, ಕೇಂದ್ರದ ಎಂಟು ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸಿ ತಮ್ಮದೇ ಆದ ರೀತಿಯಲ್ಲಿ ದಲಿತ ವರ್ಗಕ್ಕೆ ಕೊಡುಗೆ ನೀಡಿದರು. ಅಂಬೇಡ್ಕರರು ಬೌದ್ಧ ಧರ್ಮ ಸ್ವೀಕರಿಸಿದರೆ, ಬಾಬೂಜಿ ದಲಿತ ವರ್ಗದಲ್ಲಿಯೇ ಉಳಿದು ಅವರ ಉದ್ಧಾರಕ್ಕೆ ಶ್ರಮಿಸಿದರು ಎಂದು ಹೇಳಿದರು.ಈಚೆಗೆ ದಲಿತ ಸಂಘಟನೆಗಳು ಒಡೆದು ಹೋಗುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದ ಅವರು, ದಲಿತರ ಜಾತಿಗಳು ಬೇರೆ ಬೇರೆ ಯಾದರೂ ಶೋಷಿತರೇ ಆಗಿದ್ದಾರೆ. ಎಲ್ಲ ಶೋಷಿ ತರು ಒಂದಾಗಿ ಸರ್ವ ರಂಗಗಳಲ್ಲಿ ಅಭಿವೃದ್ಧಿ ಸಾಧಿಸುವ ಗುರಿ ಹೊಂದಬೇಕು. ಸಂಘಟನೆ ಯಿಂದ ಎಲ್ಲ ಸಮಾಜಕ್ಕೆ ಒಳ್ಳೆಯದಾಗಿರಬೇಕು, ವೈಯಕ್ತಿಕ ಹಿತಾಸಕ್ತಿ ಕೂಡದು ಎಂದವರು ಹೇಳಿದರು. ದಲಿತ ನಾಯಕರಾದ ಡಿ.ಬಿ.ಮುದೂರ, ವೈ.ಎಚ್.ವಿಜಯಕರ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರಾದ ಅರವಿಂದ ಕೊಪ್ಪ, ಸಭೆಯ ಅಧ್ಯಕ್ಷತೆ ವಹಿಸಿ ತಹಶೀಲ್ದಾರ ಸೋಮಲಿಂಗಪ್ಪ ಗೆಣ್ಣೂರ ಮಾತನಾಡಿದರು. ತಾಲ್ಲೂಕು ಪಂಚಾ ಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜಿ. ಕಕ್ಕಳಮೇಲಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಕಪಟಕರ, ಪುರಸಭೆ ಮುಖ್ಯಾಧಿಕಾರಿ ಎಸ್.ಬಿ.ಹೊನ್ನಳ್ಳಿ, ಲಕ್ಷ್ಮಿಂಬಾಯಿ ದಿಡ್ಡಿ, ಚನ್ನಪ್ಪ ವಿಜಯಕರ, ನಾಗೇಶ ಭಜಂತ್ರಿ, ಕೆ.ಎಂ. ರಿಸಾಲ್ದಾರ, ಎಸ್.ಪಿ.ಸೇವಾಲಾಲ, ಲೊಟಗೇರಿ ವಕೀಲರು ವೇದಿಕೆಯಲ್ಲಿದ್ದರು.ಇದಕ್ಕೂ ಮೊದಲು ಆಲಮಟ್ಟಿ ರಸ್ತೆ ಯಲ್ಲಿರುವ ಡಾ.ಬಾಬು ಜಗಜೀವನರಾಮ ವೃತ್ತದಲ್ಲಿ ಬಾಬೂಜಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ನಂತರ ಮೆರವಣಿಗೆಯಲ್ಲಿ ಬಾಬೂಜಿ ಅವರ ಭಾವಚಿತ್ರವನ್ನು ತಹಶೀಲ್ದಾರ ಕಚೇರಿಗೆ ತರಲಾಯಿತು. ಮೆರವಣಿಗೆಯಲ್ಲಿ ಶಿವಶರಣ ಸಮಗಾರ ಹರಳಯ್ಯ ಸಮಾಜದ ಅಧ್ಯಕ್ಷ ಭಗವಂತ ಕಬಾಡೆ, ಭರಮಣ್ಣ ದೊಡಮನಿ, ಅಂಬಾಜಿ ಕಬಾಡೆ, ಮುತ್ತಣ್ಣ ಬವಲತ್ತಿ, ಹನುಮಂತ ಕುಂದರಗಿ, ಪರಶುರಾಮ ಶಿಂಧೆ, ಮಂಜುನಾಥ ಕುಂದರಗಿ, ಶಿವಗಂಗಮ್ಮ ವಿಜಾಪುರ, ಮಹಾದೇವಿ ಕಬಾಡೆ, ಸಾವಿತ್ರಿ ಕಬಾಡೆ ಪಾಲ್ಗೊಂಡಿದ್ದರು. ಮಂಜುನಾಥ ಕಬಾಡೆ ಪ್ರಾರ್ಥಿಸಿದರು. ಎಸ್.ಬಿ.ಚಲವಾದಿ ಸ್ವಾಗತಿಸಿದರು. ಟಿ.ಡಿ.ಲಮಾಣಿ ನಿರೂಪಿಸಿದರು. ಎಂ.ಸಿ.ಕಬಾಡೆ ವಂದಿಸಿದರು.ಸಿಂದಗಿ ವರದಿ

ಮಾಜಿ ಉಪಪ್ರಧಾನಿ, ಹಸಿರುಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಂ ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬ ವ್ಯಕ್ತಿ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ತಹಶೀಲ್ದಾರ ಡಾ.ಶಂಕ್ರಣ್ಣ ವಣಕಿಹಾಳ ಕರೆ ನೀಡಿದರು.ಗುರುವಾರ ಪಟ್ಟಣದ ಮಿನಿವಿಧಾನಸೌಧ ಆವರಣದಲ್ಲಿ ತಾಲ್ಲೂಕು ಆಡಳಿತ ಏರ್ಪಡಿಸಿದ್ದ ಡಾ.ಬಾಬು ಜಗಜೀವನರಾಂರ 105ನೇ ಜಯಂತ್ಯುತ್ಸವ ಸಮಾರಂಭದಲ್ಲಿ ಅವರು ಅಧ್ಯಕ್ಷೀಯ ಭಾಷಣ ಮಾಡಿದರು.

ವ್ಯಕ್ತಿಯಲ್ಲಿ ಜಾತ್ಯತೀತತೆ, ಮಾನವೀಯತೆ, ಹೃದಯವಂತಿಕೆ ಗುಣವಿರಬೇಕು. ಅಂದಾಗಲೇ ಅಸ್ಪೃಶ್ಯತೆಯಂತಹ ಸಾಮಾಜಿಕ ಪಿಡುಗು ತೊಲಗಲು ಸಾಧ್ಯ ಎಂದರು.ದಲಿತ ಧುರೀಣ ಎಂ.ಎನ್.ಕಿರಣರಾಜ್ ಮಾತನಾಡಿ, ದಲಿತ ಮುಖಂಡರಲ್ಲಿ ಪ್ರಾಮಾಣಿಕತೆ ಬೇಕಿದೆ. ದಲಿತರಿಗಾಗಿರುವ ಸರ್ಕಾರದ ಏನೆಲ್ಲ ಸೌಲಭ್ಯಗಳು ಕೇವಲ ಮುಖಂಡರ ಪಾಲಾಗುತ್ತಿರುವುದು ಅತ್ಯಂತ ದುರದೃಷ್ಟಕರ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.ದಲಿತರಲ್ಲಿ ಎದ್ದು ಕಾಣುತ್ತಿರುವ ಒಳಪಂಗಡಗಳ ತಾರತಮ್ಯ ಹೋಗಬೇಕು ಅಂದಾಗಲೇ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನರಾಂರ ತತ್ವ, ಸಿದ್ದಾಂತಗಳು ಆಚರಣೆಯಲ್ಲಿ ಬರಲು ಸಾಧ್ಯ ಎಂದು ಹೇಳಿದರು.ಸ್ಥಳೀಯ ಪದ್ಮರಾಜ ಮಹಿಳಾ ಪದವಿ ಪೂರ್ವ ಕಾಲೇಜ್ ಪ್ರಾಚಾರ್ಯ ಎಂ.ಎಸ್.ಹಯ್ಯಾಳಕರ ಉಪನ್ಯಾಸ ನೀಡಿ, ಡಾ.ಬಾಬು ಜಗ ಜೀವನರಾಂರು ದೇಶದ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಅವರು ಅರ್ಹತೆ ಆಧಾರದ ಮೇಲೆ ವ್ಯಕ್ತಿತ್ವ ರೂಪಿಸಿಕೊಂಡವರು. `ಗರೀಬಿ ಹಟಾವೋ~ ಎಂಬ ಘೋಷಣೆ, ಸೇವೆಯಲ್ಲಿ ಬಡ್ತಿ ಮೀಸಲಾತಿ ಶಾಸನ ಜಾರಿಗೆ ತಂದವರು ಬಾಬು ಜಗಜೀನವರಾಂರು. ಜಾತಿ ವ್ಯವಸ್ಥೆ ರಾಷ್ಟ್ರೀಯ ಭಾವೈಕ್ಯತೆಗೆ ಮಾರಕವಾದುದು ಎಂದು ಆತಂಕ ವ್ಯಕ್ತಪಡಿಸಿದರು.ವೇದಿಕೆಯಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವೈ.ಎ.ಕಗ್ಗೋಡ ಉಪಸ್ಥಿತರಿದ್ದರು. ತಹಸೀಲ್ದಾರ ಡಾ.ವಣಕಿಹಾಳ ದಿವಂಗತ ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವರಾಂರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.  ತಾಲ್ಲೂಕು ಸಮಾಜಕಲ್ಯಾಣಾಧಿಕಾರಿ ಎ.ಜಿ.ಮಾಸರೆಡ್ಡಿ ಸ್ವಾಗತಿಸಿದರು. ಎಂ.ಆರ್.ಕಬಾಡೆ ನಿರೂಪಿಸಿದರು. ಮಹಿಪತಿ ದೇಸಾಯಿ ವಂದಿಸಿದರು.ಆಲಮಟ್ಟಿ ವರದಿ

ಪಟ್ಟಣದಲ್ಲಿ ಗುರುವಾರ ಮಾದಿಗ ಮೀಸಲಾತಿ ಹೋರಾಟ ಸಮೀತಿ ಹಾಗೂ ದಲಿತ ಸಂಘರ್ಷ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಡಾ. ಬಾಬು ಜಗಜೀವನರಾಮ್ ಅವರ 105 ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮಾದೀಗ ಮೀಸಲಾತಿ ಹೋರಾಟ ಸಮೀತಿಯ ಜಿಲ್ಲಾ ಉಪಾಧ್ಯಕ್ಷ ಪ್ರಹ್ಲಾದ ಕರಿಯಣ್ಣವರ, ದೀನ ದಲಿತರು ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆತು, ಶೈಕ್ಷಣಿಕವಾಗಿ ಸಂಪೂರ್ಣ ಸದುಪಯೋಗ ಮಾಡಿಕೊಂಡು ಬದುಕನ್ನು ಸ್ವಾಭಿಮಾನ ಹಾಗೂ ಸ್ವಾವಲಂಬಿ ಮಾಡಿಕೊಳ್ಳಬೇಕಿದೆ ಎಂದರು.ಬಾಬು ಜಗಜೀವನರಾಮ್ ಅವರು ಕನಸು ಕಂಡಂತೆ ಶೋಷಿತರ ಸಮಸ್ಯೆಯನ್ನು ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಪುನರುಥ್ಥಾನಗೊಳ್ಳುವುದರ ಮೂಲಕ ಬದುಕನ್ನು ರೂಪಿಸಿಕೊಳ್ಳಬೇಕಾಗಿದೆ ಎಂದರು.ಕಾರ್ಯಕ್ರಮದಲ್ಲಿ ದಲಿತ ಸಂಘರ್ಷ ಸಮಿತಿಯ ಸಂಚಾಲಕ ಬಸವರಾಜ ಹೊಸಮನಿ, ನಿಡಗುಂದಿ ಗ್ರಾಮ ಲೆಕ್ಕಿಗ ಎಸ್.ಎಸ್.ಚಿಕ್ಕರೆಡ್ಡಿ ಮಾತನಾಡಿದರು. ಬಸವರಾಜ ಆಲಕೊಪ್ಪರ, ವಸಂತ ಹೊಳೆಯಣ್ಣವರ, ಸಿದ್ಧಣ್ಣ ಬುದ್ನಿ, ಭೀಮಣ್ಣ ಗುಂಡಿನಮನಿ, ರಾಜು ಚಳ್ಳಮರದ, ಸಿಂಧೂರ ಭೈರವಾಡಗಿ, ಬಸವರಾಜ  ಕರಿಯಣ್ಣವರ, ಸೋಮರಾಯ ಬಿದ್ನಾಳ, ಚಂದ್ರಶೇಖರ ಕರಯಣ್ಣವರ, ಸುಭಾಷ ಚಲವಾದಿ, ಅಶೋಕ ಚಲವಾದಿ ಮುಂತಾದವರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.